ಈ ಯುವತಿಗೆ ಆಟಿಕೆ ವಿಮಾನದೊಂದಿಗೆ ಪ್ರೀತಿಯಾಗಿದೆಯಂತೆ !

ಇಲ್ಲೊಬ್ಬಳು ಯುವತಿಗೆ ಆಟಿಕೆಯ ವಿಮಾನದ ಮೇಲೆ ಪ್ರೀತಿಯಾಗಿದೆಯಂತೆ ಹಾಗೆಂದು ಆಕೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಈ ಯುವತಿಗೆ ಆಟಿಕೆ ವಿಮಾನದೊಂದಿಗೆ ಪ್ರೀತಿಯಾಗಿದೆಯಂತೆ !
ಯುವತಿ
Updated By: Pavitra Bhat Jigalemane

Updated on: Mar 08, 2022 | 9:49 AM

ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ಹುಡುಗನ ಮೇಲೆ ಪ್ರೀತಿಯಾಗುತ್ತದೆ. ಅದು ಬಿಟ್ಟು ತಾವು ಬಳಸುವ ವಸ್ತುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಅದರೆ ಇಲ್ಲೊಬ್ಬಳು ಯುವತಿಗೆ ಆಟಿಕೆಯ ವಿಮಾನದ (Toy Plane) ಮೇಲೆ ಪ್ರೀತಿ (Love) ಯಾಗಿದೆಯಂತೆ. ಹಾಗೆಂದು ಆಕೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದು, ಸಿಕ್ಕಪಟ್ಟೆ ವೈರಲ್​ ಆಗಿದೆ. ತಾನು ಆಟಿಕೆಯ ವಿಮಾನದೊಂದಿಗೆ ಪ್ರತಿದಿನ ಕಳೆಯುತ್ತಿದ್ದೇನೆ, ಪ್ರತಿ ಮುಂಜಾನೆ ಹಾಗೂ ಪ್ರತೀ ರಾತ್ರಿ ಅದಕ್ಕೆ ಗುಡ್​ ಮಾರ್ನಿಂಗ್​ ಮತ್ತು ಗುಡ್​ ನೈಟ್​ ಹೇಳುತ್ತೇನೆ. ಮನುಷ್ಯರಿಗಿಂತ ಆಟಿಕೆ ವಿಮಾನ ಉತ್ತಮ ಸಂಗಾತಿಯಾಗಿದೆ ಎಂದು ಹೇಳಿಕೊಂಡಿದ್ದಾರೆಡ. ಸದ್ಯ ಈ ವಿಚಾರ ಕೇಳಿ ನೆಟ್ಟಿಗರು ಅಚ್ಚರಿ ಪಟ್ಟಿದ್ದು ಸಖತ್​ ವೈರಲ್​ ಆಗಿದೆ.

ಹಂಗೇರಿಯ ಬುಡಾಪೆಸ್ಟ್​ನ ಈ ಮಹಿಳೆಯ ಹೆಸರು ಸಾಂಡ್ರಾ ಎಂದಾಗಿದೆ. 26 ವರ್ಷದ ಈ ಯುವತಿ ವಿಮಾನದಲ್ಲಿ ಕೆಲಸಮಾಡುತ್ತಾಳೆ. ಆನ್ಲೈನ್​ನಲ್ಲಿ ಸುಮಾರು 60 ಸಾವಿರಕ್ಕೂ ಹೆಚ್ಚು ಹಣವನ್ನು ನೀಡಿ ಖರೀದಿ ಮಾಡಿದ್ದ ಆಟಿಕೆ ಮಿಮಾನದೊಂದಿಗೆ ಈಕೆ ಸಂಬಂಧ ಇರಿಸಿಕೊಂಡಿದ್ದಾಳೆ. ಈ ಬಗ್ಗೆ ಆಕೆ ನನಗೂ ಗೊತ್ತಿಲ್ಲ ಅವನನ್ನು ಯಾಕೆ ಅಷ್ಟು ಇಷ್ಟಪಡುತ್ತೇನೆ ಎಂದು. ಅವನೆಂದರೆ ನನಗೆ ಇಷ್ಟ ಎಂದಿದ್ದಾಳೆ.  ಸಾಂಡ್ರಾ ಮೂರು ವರ್ಷ ವಯಸ್ಸಿನಲ್ಲಿಯೇ ವಿಮಾನಗಳ ಬಗ್ಗೆ  ಹೆಚ್ಚು ಹೊಂದಿದ್ದಳು. ವಿಮಾನದಲ್ಲಿ ಕೆಲಸ ಮಾಡುವ ಆಸೆ ಹೊಂದಿದ್ದ ಅವಳು 2021ರಲ್ಲಿ ವಿಮಾನಯಾನ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು.

ವಿಮಾನದಂತಹ ಪಾರ್ಟನರ್​ ಇನ್ನಲ್ಲಿಯೂ ಸಿಗಲಾರದು. ಹೀಗಾಗಿ ಮುಂದೆಯೂ ವಿಮಾನದೊಂದಿಗೆ ಸಂಬಂಧವನ್ನು ಮುಂದುವರೆಸುವೆ. ಮನುಷ್ಯರೊಂದಿಗೆ ಸಂಬಂಧ ಮಾಡುವುದು ಅನುಮಾನ ಎಂದಿದ್ದಾಳೆ. ಸದ್ಯ  ಈ ವಿಚಾರ ಎಲ್ಲೆಡೆ ವೈರಲ್​ ಆಗಿದೆ.  ಸಾಂಡ್ರಾ  ಆಟಿಕೆಯ ವಿಮಾನಕ್ಕೆ ಮುತ್ತು ನೀಡಿ ಪ್ರೀತಿಸುತ್ತಿರುವ ಫೋಟೊಗಳೂ ಕೂಡ ವೈರಲ್​ ಆಗಿದೆ.

ಇದನ್ನೂ ಓದಿ:

Shocking News: ಬೆಕ್ಕು ಕಚ್ಚಿ ಇಬ್ಬರು ಮಹಿಳೆಯರು ಸಾವು; ಆಂಧ್ರ ಪ್ರದೇಶದಲ್ಲೊಂದು ದಾರುಣ ಘಟನೆ

Published On - 9:46 am, Tue, 8 March 22