Viral: ನೀರಿನಂತೆ ಪೆಟ್ರೋಲ್‌ ಕುಡಿಯುವ ಯುವತಿ; ಪೆಟ್ರೋಲ್ ಕುಡಿಯದಿದ್ರೆ ರಾತ್ರಿ ನಿದ್ದೆಯೇ ಬರುವುದಿಲ್ಲವಂತೆ

| Updated By: ಅಕ್ಷತಾ ವರ್ಕಾಡಿ

Updated on: Jul 07, 2024 | 1:53 PM

ಕೆಲವರಿಗೆ ಚಿತ್ರ ವಿಚಿತ್ರ ಚಟಗಳಿರುತ್ತವೆ. ಈ ಚಟಗಳ ಬಗ್ಗೆ ಒಮ್ಮೊಮ್ಮೆ ಊಹೆ ಮಾಡುವುದಕ್ಕೂ ಸಾಧ್ಯವಿರುವುದಿಲ್ಲ. ಹೆಚ್ಚಿನವರಿಗೆ ಪೆಟ್ರೋಲ್‌ ವಾಸನೆ ತೆಗೆದುಕೊಳ್ಳುವ ಚಟವಿರುತ್ತದೆ. ಆದ್ರೆ ಇಲ್ಲೊಬ್ಬ ಮಹಿಳೆಗೆ ಪೆಟ್ರೋಲ್‌ ಕುಡಿಯುವ ವಿಚಿತ್ರ ಚಟವಂತೆ. ಇದು ಆಕೆಯ ಜೀವನದ ಬಿಡಿಸಲಾರದ ಅತಿದೊಡ್ಡ ಚಟವಂದು ಆಕೆ ಹೇಳಿಕೊಂಡಿದ್ದಾಳೆ.

Viral: ನೀರಿನಂತೆ ಪೆಟ್ರೋಲ್‌ ಕುಡಿಯುವ ಯುವತಿ; ಪೆಟ್ರೋಲ್ ಕುಡಿಯದಿದ್ರೆ ರಾತ್ರಿ ನಿದ್ದೆಯೇ ಬರುವುದಿಲ್ಲವಂತೆ
Follow us on

ಒಬ್ಬಬ್ಬರಿಗೆ ಒಂದೊಂದು ರೀತಿಯ ವಿಚಿತ್ರ ಅಭ್ಯಾಸಗಳಿರುತ್ತವೆ. ಹೌದು ಹೆಚ್ಚಿನವರಿಗೆ ಈ ಪೆಟ್ರೋಲ್‌, ಗಮ್‌, ಡಿಸೇಲ್‌, ಸೀಮೆ ಎಣ್ಣೆ ವಾಸನೆ ತೆಗೆದುಕೊಳ್ಳುವ ಅಭ್ಯಾಸವಿದ್ದರೆ, ಇನ್ನೂ ಕೆಲವರಿಗೆ ಚಾಕ್‌ ಪೀಸ್‌ ತಿನ್ನುವುದು, ಮಣ್ಣು ತಿನ್ನುವ ವಿಚಿತ್ರ ಚಟವಿರುತ್ತದೆ. ಆದ್ರೆ ಇಲ್ಲೊಬ್ಬ ಯುವತಿ ಒಂದು ವಿಚಿತ್ರ ಚಟವಿದ್ದು, ಆರೋಗ್ಯಕ್ಕೆ ಹಾನಿಕಾರಕ ಎಂದು ಗೊತ್ತಿದ್ರೂ ಕೂಡಾ ಆಕೆ ದಿನನಿತ್ಯ ನೀರಿನಂತೆ ಪೆಟ್ರೋಲ್‌ ಕುಡೀತಾಳಂತೆ. ಇದು ಈಕೆಯ ಜೀವನದ ಬಿಡಿಸಲಾರದ ಅತೀ ದೊಡ್ಡ ಚಟವಂತೆ.

ವರದಿಗಳ ಪ್ರಕಾರ ಕೆನಡಾದ ಒಂಟಾರಿಯೋದ 20 ವರ್ಷ ವಯಸ್ಸಿನ ಶಾನನ್‌ ಎಂಬ ಯುವತಿ ಪೆಟ್ರೋಲ್‌ ಕುಡಿಯುವ ವಿಚಿತ್ರ ಚಟವನ್ನು ಹೊಂದಿದ್ದು, ಪೆಟ್ರೋಲ್‌ ಕುಡಿಯುವುದರಿಂದ ತನಗೆ ಸಾವು ಬರುತ್ತದ್ದೆ ಎಂದು ಗೊತ್ತಿದ್ರೂ ಕೂಡಾ ಆಕೆ ಪ್ರತಿನಿತ್ಯ ನೀರಿನಂತೆ ಪೆಟ್ರೋಲ್‌ ಕುಡಿಯುತ್ತಾಳೆ. ಹೌದು ಶಾನನ್‌ ಪ್ರತಿನಿತ್ಯ ಬೆಳಗ್ಗೆ ಎದ್ದ ತಕ್ಷಣ ಬಾತ್ರೂಮ್‌ ಸಿಂಕ್‌ ಅಡಿಯಲ್ಲಿ ಕೆಂಪು ಡಬ್ಬದಲ್ಲಿ ಇಟ್ಟಿರುವ ಪೆಟ್ರೋಲ್‌ ಸೇವನೆ ಮಾಡುತ್ತಾಳೆ.

ವೈದ್ಯರ ಪ್ರಕಾರ ಪೆಟ್ರೋಲ್‌ ಸೇವನೆಯು ನಮ್ಮ ಆರೋಗ್ಯದ ಮೇಲೆ ಮಾರಣಾಂತಿಕ ಮತ್ತು ಭಯಾನಕ ಪರಿಣಾಮವನ್ನು ಉಂಟು ಮಾಡಬಹುದು. ಇದರಿಂದ ವಾಂತಿ, ತೀವ್ರವಾದ ಹೊಟ್ಟೆನೋವು ಉಂಟಾಗುವುದು ಮಾತ್ರವಲ್ಲದೆ ಇದು ದೀರ್ಘಾವಧಿಯಲ್ಲಿ ಜೀರ್ಣಾಂಗ ವ್ಯವಸ್ಥೆ, ಹೃದಯ ಮತ್ತು ಶ್ವಾಸಕೋಶವನ್ನು ಹಾನಿಗೊಳಿಸುತ್ತದೆ.

ಇದನ್ನೂ ಓದಿ: ಹಾಡು ಹಗಲೇ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಸರ ಕಿತ್ತು ಪರಾರಿಯಾದ ಖದೀಮರು

ಈ ಎಲ್ಲಾ ಅಪಾಯಗಳ ಬಗ್ಗೆ ತಿಳಿದಿದ್ದರೂ ಶಾನನ್‌ಗೆ ಈ ವಿಚಿತ್ರ ಚಟದಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲವಂತೆ. “ಪೆಟ್ರೋಲ್‌ ಕುಡಿದಾಗ ಎದೆ ನೋವು ಮತ್ತು ತಲೆ ತಿರುಗುವಿಕೆಗೆ ಒಳಗಾದರೂ, ಇದು ನನ್ನ ಸಾವಿಗೂ ಕಾರಣವಾಗುತ್ತದೆ ಎಂದು ತಿಳಿದಿದ್ದರೂ ಈ ವ್ಯಸನದಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ಇದು ಸಾಸ್‌ನಂತೆ ಸಿಹಿ ಮತ್ತು ಹುಳಿ ರುಚಿಯನ್ನು ಹೊಂದಿದ್ದು, ಇದಿಲ್ಲದೆ ಒಂದು ದಿನವೂ ಇರಲು ನನಗೆ ಸಾಧ್ಯವಿಲ್ಲ. ನಾನು ಬೆಳಗ್ಗೆ ಎದ್ದ ತಕ್ಷಣ ವಾಶ್‌ರೂಮ್‌ಗೆ ಹೋಗಿ ಪೆಟ್ರೋಲ್‌ ಕುಡಿತೀನಿ. ಎಲ್ಲಾದ್ರೂ ಹೊರಗೆ ಹೋದರೆ ಸಣ್ಣ ನೀರಿನ ಬಾಟಲಿಯಲ್ಲಿ ಪೆಟ್ರೋಲ್‌ ಕೊಂಡೊಯ್ಯುತ್ತೇನೆ” ಎಂದು ಶಾನನ್‌ ಹೇಳುತ್ತಾಳೆ.

ದಿನಕ್ಕೆ 12 ಚಮಚದಷ್ಟು ಪೆಟ್ರೋಲ್‌ ಕುಡಿಯುವ ಶಾನನ್‌ ಈ ಒಂದು ಅಭ್ಯಾಸ ನನ್ನ ಖಿನ್ನತೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾಳೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ