Garasia Tribe: ಮದುವೆಗೂ ಮುಂಚೆ ತಾಯಿ ಆಗ್ತಾರೆ ಇಲ್ಲಿನ ಹೆಣ್ಣು ಮಕ್ಕಳು, ಈ ವಿಚಿತ್ರ ಸಂಪ್ರದಾಯವಿರುವುದು ಎಲ್ಲಿ?

| Updated By: ಅಕ್ಷತಾ ವರ್ಕಾಡಿ

Updated on: Aug 04, 2024 | 10:36 AM

ನಾವೆಷ್ಟೇ ಆಧುನಿಕತೆಗೆ ತೆರೆದುಕೊಂಡರೂ ಕೆಲವು ವಿಚಾರಗಳನ್ನು ಅಷ್ಟು ಸುಲಭವಾಗಿ ಒಪ್ಪುವುದಿಲ್ಲ. ಅದರಲ್ಲಿಯೂ ಭಾರತೀಯರಿಗೆ ಮದುವೆಗೂ ಮೊದಲೇ ಮಗುವನ್ನು ಪಡೆಯುವುದು ಸ್ವೀಕರಿಸಲು ಸಾಧ್ಯವಾಗದ ವಿಚಾರವಾಗಿದೆ. ಆದರೆ ಈ ಬುಡಕಟ್ಟಿನ ಹೆಣ್ಣು ಮಕ್ಕಳು ತಾನು ಇಷ್ಟ ಪಡುವ ಹುಡುಗನ ಲಿವ್ ಇನ್ ರಿಲೇಷನ್ಶಿಪ್ ನಲ್ಲಿ ಇರಬಹುದು. ಮದುವೆಗೂ ಮೊದಲೇ ತಾಯಿಯಾಗಬಹುದು. ಹಾಗಾದ್ರೆ ಆ ಕುರಿತಾದ ಸಂಪೂರ್ಣ ಮಾಹಿತಿಯೂ ಇಲ್ಲಿದೆ.

Garasia Tribe: ಮದುವೆಗೂ ಮುಂಚೆ ತಾಯಿ ಆಗ್ತಾರೆ ಇಲ್ಲಿನ ಹೆಣ್ಣು ಮಕ್ಕಳು, ಈ ವಿಚಿತ್ರ ಸಂಪ್ರದಾಯವಿರುವುದು ಎಲ್ಲಿ?
Follow us on

ಜಗತ್ತಿನಲ್ಲಿರುವ ಕೆಲವು ಬುಡಕಟ್ಟು ಸಮುದಾಯದಲ್ಲಿ ಕೆಲವು ವಿಚಿತ್ರ ಆಚಾರ, ವಿಚಾರಗಳು ಚಾಲ್ತಿಯಲ್ಲಿದೆ. ಕೆಲವು ಸಂಪ್ರದಾಯವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲದರೂ ಕೂಡ ಆ ಬುಡಗಟ್ಟಿನ ಜನರು ಆಚರಣೆ ಮಾಡುತ್ತಿರುತ್ತಾರೆ. ಭಾರತದ ಈ ಬುಡಕಟ್ಟು ಜನಾಂಗದಲ್ಲಿ ವಿಚಿತ್ರವಾದ ಸಂಪ್ರದಾಯವೊಂದು ಜಾರಿಯಲ್ಲಿದೆ.ರಾಜಸ್ಥಾನ ಮತ್ತು ಗುಜರಾತ್‌ನ ಭಾಗಗಳಲ್ಲಿ ಹೆಚ್ಚಾಗಿ ಕಂಡುಬರುವ ಗರಾಸಿಯಾ ಬುಡಕಟ್ಟಿನ ಜನರಲ್ಲಿ ಲಿವ್ ಇನ್ ಸಂಬಂಧಗಳು ತುಂಬಾ ಸಾಮಾನ್ಯವಾದ ವಿಷಯವಾಗಿದೆ.

ಈ ಬುಡಕಟ್ಟಿನ ಹೆಣ್ಣು ಮಕ್ಕಳು ಮದುವೆಗೆ ಮುಂಚೆಯೇ ತಾಯಾಗುತ್ತಾರಂತೆ. ಹುಡುಗನು ಇಷ್ಟವಾದರೆ ಮದುವೆಯಾಗಿ ವೈವಾಹಿಕ ಜೀವನವನ್ನು ಆರಂಭಿಸುತ್ತಾರೆ. ಗರಾಸಿಯಾ ಬುಡಕಟ್ಟಿನಲ್ಲಿ ಈ ಸಂಪ್ರದಾಯವೊಂದು ಜಾರಿಗೆ ಬರಲು ಕಾರಣವು ಇದೆ. ಕೆಲವು ವರ್ಷಗಳ ಹಿಂದೆ ಈ ಬುಡಕಟ್ಟಿನ ನಾಲ್ವರು ಸಹೋದರರು ಬೇರೆಡೆ ವಾಸಿಸಲು ಹೋಗಿದ್ದರು. ನಾಲ್ವರಲ್ಲಿ ಮೂವರು ಮೊದಲು ಮದುವೆಯಾಗಿ ಸಂಸಾರ ಆರಂಭಿಸಿದರೆ, ಒಬ್ಬನು ಮಾತ್ರ ಮದುವೆಯಾಗದೇ ಲಿವ್-ಇನ್ ಸಂಬಂಧದಲ್ಲಿ ಇದ್ದನು.

ಆದರೆ ಮದುವೆಯಾಗಿದ್ದ ಮೂವರಿಗೆ ಮಕ್ಕಳು ಅಗಲಿಲ್ಲವಂತೆ. ಮದುವೆಯಾಗದೇ ಲಿವ್ ಇನ್ ರಿಲೇಷನ್ಶಿಪ್ ನಲ್ಲಿದ್ದವನಿಗೆ ಮಾತ್ರ ಮಗು ಆಯಿತಂತೆ. ಅಂದಿನಿಂದ ಈ ಸಮುದಾಯದಲ್ಲಿ ಲಿವ್ ಇನ್ ಸಂಬಂಧ ಹಾಗೂ ಮದುವೆಗೂ ಮೊದಲು ತಾಯಿಯಾಗುವ ಸಂಪ್ರದಾಯವೊಂದು ಹುಟ್ಟಿಕೊಂಡಿತು ಎನ್ನಲಾಗಿದೆ. ಹೀಗಾಗಿ ಈ ಬುಡಕಟ್ಟಿನಲ್ಲಿ ಮದುವೆಗಾಗಿಯೇ ಎರಡು ದಿನಗಳ ಕಾಲ ಜಾತ್ರೆಯೂ ನಡೆಯುತ್ತದೆ.

ಇದನ್ನೂ ಓದಿ: ಪತ್ನಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ಗಂಡಂದಿರು ಈ ರೀತಿಯೂ ಇರ್ತಾರಂತೆ

ಈ ಮೇಳದಲ್ಲಿ ಹೆಚ್ಚಿನ ಸಂಖ್ಯೆಯ ಯುವಕ ಮತ್ತು ಯುವತಿಯರು ಭಾಗಿಯಾಗುತ್ತಾರೆ. ಈ ಮೇಳವನ್ನು ಸಂಗಾತಿಯ ಆಯ್ಕೆಗಾಗಿ ಆಯೋಜಿಸಲಾಗುತ್ತದೆಯಂತೆ. ಈ ಮೇಳದಲ್ಲಿ ಹುಡುಗಿಗೆ ಯಾರಾದ್ರೂ ಹುಡುಗನು ಇಷ್ಟವಾದರೆ ಆತನ ಜೊತೆಗೆ ಲಿವ್ ಇನ್ ರಿಲೇಷನ್ಶಿಪ್ ನಲ್ಲಿ ಇರಬಹುದು. ಇಷ್ಟವಾಗುವ ಹುಡುಗನ ಜೊತೆಗೆ ಲೈಂಗಿಕ ಕ್ರಿಯೆ ನಡೆಸಿ ಮಗುವನ್ನು ಪಡೆಯಬಹುದು. ಆ ನಂತರದಲ್ಲಿ ಇಬ್ಬರಿಗೂ ಒಪ್ಪಿಗೆ ಇದ್ದರೆ ಹೆತ್ತವರು ಜೊತೆ ಸೇರಿ ಮಕ್ಕಳ ಮದುವೆಯನ್ನು ಮಾಡುತ್ತಾರೆ.

ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ