MS Dhoni Car: 0007 ನಂಬರ್ ಪ್ಲೇಟ್: ಬರೋಬ್ಬರಿ 3.30 ಕೋಟಿಯ ಮರ್ಸಿಡಿಸ್ ಕಾರು ಖರೀದಿಸಿದ ಧೋನಿ

Mercedes-AMG G 63: ಬರೋಬ್ಬರಿ 3.30 ಕೋಟಿ ಬೆಲೆಯ ಮರ್ಸಿಡಿಸ್-ಎಎಂಜಿ ಜಿ63 ಕಾರನ್ನು ಮಹೇಂದ್ರ ಸಿಂಗ್ ಧೋನಿ ಖರೀದಿಸಿದ್ದಾರೆ. ವಿಶೇಷ ಎಂದರೆ ಇದರ ನಂಬರ್ ಪ್ಲೇಟ್ 0007 ಆಗಿದೆ. ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

MS Dhoni Car: 0007 ನಂಬರ್ ಪ್ಲೇಟ್: ಬರೋಬ್ಬರಿ 3.30 ಕೋಟಿಯ ಮರ್ಸಿಡಿಸ್ ಕಾರು ಖರೀದಿಸಿದ ಧೋನಿ
|

Updated on: Nov 30, 2023 | 12:55 PM

ಮಹೇಂದ್ರ ಸಿಂಗ್ ಧೋನಿ (MS Dhoni) ವಾಹನ ಪ್ರಿಯ ಎಂಬುದು ಎಲ್ಲರಿಗೂ ತಿಳಿದಿದೆ. ಅವರ ಬಳಿ 70ಕ್ಕೂ ಅಧಿಕ ಬೈಕ್​ಗಳಿವೆ, ಕಾರುಗಳ ಕಲೆಕ್ಷನ್ ಕೂಡ ತುಂಬಾ ಇದೆ. ವಿಶ್ವದ ಅತಿ ಹೆಚ್ಚು ಐಷಾರಾಮಿ ಬೈಕ್ ಮತ್ತು ಕಾರು ಸಂಗ್ರಹವನ್ನು ಎಂಎಸ್ ಧೋನಿ ಹೊಂದಿದ್ದಾರೆ. ಇದೀಗ ಧೋನಿಯ ಹೊಸ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸುತ್ತಿದೆ. ಧೋನಿ ಅವರು 0007 ನಂಬರ್ ಪ್ಲೇಟ್​ನ ಮರ್ಸಿಡಿಸ್-ಎಎಂಜಿ ಜಿ63 ಕಾರನ್ನು ಖರೀದಿಸಿದ್ದಾರೆ. ವಿಶೇಷವಾಗಿ ಆಫ್ ರೋಡ್ ಕೌಶಲ್ಯತೆಗಾಗಿ ಅಭಿವೃದ್ದಿಗೊಂಡಿರುವ ಈ ಮರ್ಸಿಡಿಸ್-ಎಎಂಜಿ ಜಿ63 ಬೆಲೆ ಬರೋಬ್ಬರಿ 3.30 ಕೋಟಿ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ, ಧೋನಿ ಅವರು ಈ ಎಸ್‌ಯುವಿಯನ್ನು ಡ್ರೈವ್‌ ಮಾಡಿಕೊಂಡು ತೆರಳುತ್ತಿರುವುದು ಕಾಣಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us