MS Dhoni Car: 0007 ನಂಬರ್ ಪ್ಲೇಟ್: ಬರೋಬ್ಬರಿ 3.30 ಕೋಟಿಯ ಮರ್ಸಿಡಿಸ್ ಕಾರು ಖರೀದಿಸಿದ ಧೋನಿ
Mercedes-AMG G 63: ಬರೋಬ್ಬರಿ 3.30 ಕೋಟಿ ಬೆಲೆಯ ಮರ್ಸಿಡಿಸ್-ಎಎಂಜಿ ಜಿ63 ಕಾರನ್ನು ಮಹೇಂದ್ರ ಸಿಂಗ್ ಧೋನಿ ಖರೀದಿಸಿದ್ದಾರೆ. ವಿಶೇಷ ಎಂದರೆ ಇದರ ನಂಬರ್ ಪ್ಲೇಟ್ 0007 ಆಗಿದೆ. ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಮಹೇಂದ್ರ ಸಿಂಗ್ ಧೋನಿ (MS Dhoni) ವಾಹನ ಪ್ರಿಯ ಎಂಬುದು ಎಲ್ಲರಿಗೂ ತಿಳಿದಿದೆ. ಅವರ ಬಳಿ 70ಕ್ಕೂ ಅಧಿಕ ಬೈಕ್ಗಳಿವೆ, ಕಾರುಗಳ ಕಲೆಕ್ಷನ್ ಕೂಡ ತುಂಬಾ ಇದೆ. ವಿಶ್ವದ ಅತಿ ಹೆಚ್ಚು ಐಷಾರಾಮಿ ಬೈಕ್ ಮತ್ತು ಕಾರು ಸಂಗ್ರಹವನ್ನು ಎಂಎಸ್ ಧೋನಿ ಹೊಂದಿದ್ದಾರೆ. ಇದೀಗ ಧೋನಿಯ ಹೊಸ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸುತ್ತಿದೆ. ಧೋನಿ ಅವರು 0007 ನಂಬರ್ ಪ್ಲೇಟ್ನ ಮರ್ಸಿಡಿಸ್-ಎಎಂಜಿ ಜಿ63 ಕಾರನ್ನು ಖರೀದಿಸಿದ್ದಾರೆ. ವಿಶೇಷವಾಗಿ ಆಫ್ ರೋಡ್ ಕೌಶಲ್ಯತೆಗಾಗಿ ಅಭಿವೃದ್ದಿಗೊಂಡಿರುವ ಈ ಮರ್ಸಿಡಿಸ್-ಎಎಂಜಿ ಜಿ63 ಬೆಲೆ ಬರೋಬ್ಬರಿ 3.30 ಕೋಟಿ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ, ಧೋನಿ ಅವರು ಈ ಎಸ್‌ಯುವಿಯನ್ನು ಡ್ರೈವ್ ಮಾಡಿಕೊಂಡು ತೆರಳುತ್ತಿರುವುದು ಕಾಣಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ