ಕಪ್ಪು ಸಮುದ್ರದಲ್ಲಿ ರಷ್ಯಾದ 2 ಟ್ಯಾಂಕರ್‌ಗಳ ಮೇಲೆ ದಾಳಿ; ಹೊಣೆ ಹೊತ್ತುಕೊಂಡ ಉಕ್ರೇನ್
ಕಪ್ಪು ಸಮುದ್ರದಲ್ಲಿ ಇಂದು ಮಾನವರಹಿತ ಸಮುದ್ರ ವಾಹನವು ರಷ್ಯಾದ ಆಯಿಲ್ ಟ್ಯಾಂಕರ್ 'ವಿರಾಟ್' ಗೆ ಡಿಕ್ಕಿ ಹೊಡೆದಿದೆ. ಶುಕ್ರವಾರ ತಡರಾತ್ರಿ ಇದೇ ಟ್ಯಾಂಕರ್ ಸ್ಫೋಟಗಳಿಗೆ ಗುರಿಯಾಗಿತ್ತು. ಟರ್ಕಿಯ ಸಾರಿಗೆ ಸಚಿವಾಲಯ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಕಪ್ಪು ಸಮುದ್ರದ ಕರಾವಳಿಯಿಂದ ಸುಮಾರು 35 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಮಾನವರಹಿತ ಕಡಲ ವಾಹನಗಳಿಂದ ದಾಳಿ ಮಾಡಲಾಗಿದೆ ಎಂದು ಹೇಳಲಾಗಿದ್ದ ವಿರಾಟ್, ಇಂದು ಮುಂಜಾನೆ ಮತ್ತೆ ಮಾನವರಹಿತ ಕಡಲ ವಾಹನಗಳಿಂದ ದಾಳಿ ನಡೆಸಲಾಯಿತು ಎಂದು ಹೇಳಿದೆ.
ನವದೆಹಲಿ, ನವೆಂಬರ್, 29: ಶುಕ್ರವಾರ ತಡರಾತ್ರಿ ಕಪ್ಪು ಸಮುದ್ರದಲ್ಲಿ ವಿರಾಟ್ ಮತ್ತು ಕೈರೋಸ್ ಎಂದು ಗುರುತಿಸಲಾದ ಎರಡು ರಷ್ಯಾದ (Russia) ಟ್ಯಾಂಕರ್‌ಗಳ ಮೇಲೆ ಮಾನವರಹಿತ ಹಡಗೊಂದು ದಾಳಿ ಮಾಡಿದೆ. ಆ ಎರಡು ಟ್ಯಾಂಕರ್‌ಗಳ ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದರೂ, ಕೈರೋಸ್ ಮುಳುಗುವ ಅಪಾಯದಲ್ಲಿದೆ. ಈ ದಾಳಿಯ ಹೊಣೆಯನ್ನು ಉಕ್ರೇನ್ ಹೊತ್ತುಕೊಂಡಿದೆ. ವಿರಾಟ್ ಅನ್ನು 2018ರಲ್ಲಿ ನಿರ್ಮಿಸಲಾಯಿತು. ಕೈರೋಸ್ ಅನ್ನು 2002ರಲ್ಲಿ ನಿರ್ಮಿಸಲಾಯಿತು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Nov 29, 2025 10:06 PM