ಮಹಿಳೆಯರಿಗೆ 2 ಸಾವಿರ ರೂ. ನೀಡದೆ 3 ತಿಂಗಳಾಗಿದೆ, ಭಾಗ್ಯದ ಲಕ್ಷ್ಮಿ ಬೆಳಗಾವಿಯಲ್ಲೇ: ಯತ್ನಾಳ್ ವ್ಯಂಗ್ಯ

|

Updated on: Jul 30, 2024 | 10:11 AM

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಾಂಗ್ರೆಸ್​​​​ ಬಗ್ಗೆ ಟೀಕಿಸಿದ್ದಾರೆ. ಜನರಿಗೆ ಕಾಂಗ್ರೆಸ್​​​​​ ಮೋಸ ಮಾಡಿದೆ. ಮಹಿಳೆಯರಿಗೆ ಹಣ ನೀಡದೆ 3 ತಿಂಗಳಾಗಿದೆ. ಇನ್ನು ಯಾವುದೇ ಹಣ ಬಿಡುಗಡೆ ಮಾಡಿದೆ. ಇನ್ನು "ಭಾಗ್ಯದ ಲಕ್ಷ್ಮಿ ಬೆಳಗಾವಿಯಲ್ಲೇ, ಲಕ್ಷ್ಮೀ ಅಕ್ಕಾ ದುಡ್ಡು ಕೊಡದ್ವಾ ಇಲ್ಲಾಂದ್ರೆ ಮನೆಗೆ ಹೋಗವ್ವಾ ಎಂದು ಹೇಳಿದ್ದಾರೆ.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಾಂಗ್ರೆಸ್​​​​ ಗ್ಯಾರೆಂಟಿ ಬಗ್ಗೆ ಮತ್ತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಈಗಾಗಲೇ ದಿವಾಳಿತನ ಆಗಿದೆ. ಸರ್ಕಾರದಲ್ಲಿ ಹಣ ಇಲ್ಲ ಆದ್ರೂ ಅವರು ಗ್ಯಾರಂಟಿಯನ್ನು ಮುಂದುವರಿಸಲು ಸಾಲ ಮಾಡಬೇಕಿದೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹಳ್ಯಾಳ ಗ್ರಾಮದಲ್ಲಿ ಮಾತನಾಡಿದ ಅವರು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದಾರೆ. ಮಹಿಳೆಯರಿಗೆ 2 ಸಾವಿರ ರೂ. ನೀಡದೆ 3 ತಿಂಗಳು ಆಗಿದೆ. ಇನ್ನು “ಭಾಗ್ಯದ ಲಕ್ಷ್ಮಿ ಬೆಳಗಾವಿಯಲ್ಲೇ, ಲಕ್ಷ್ಮೀ ಅಕ್ಕಾ ದುಡ್ಡು ಕೊಡದ್ವಾ ಇಲ್ಲಾಂದ್ರೆ ಮನೆಗೆ ಹೋಗವ್ವಾ ಎಂದು ಹೇಳಿದ್ದಾರೆ. ಇದರ ಜತೆಗೆ ವಿಜಯೇಂದ್ರ ಅವರ ಬಗ್ಗೆಯೂ ಟೀಕೆ ಮಾಡಿದ್ದಾರೆ. ಡಿಸಿಎಂ ಡಿಕೆ ಆದೇಶದಂತೆ ವಿಜಯೇಂದ್ರ ಪಾದಯಾತ್ರೆ ನಡೆಸ್ತಿದ್ದಾರೆ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.