ನಮಗೆ ವಿಕೃತ ಮನಸ್ಸಿನ ವ್ಯಕ್ತಿಗಿಂತ 2 ಸಾವಿರ ಮಹಿಳೆಯರು ಮುಖ್ಯ: ಪ್ರಕಾಶ್ ರೈ
Prakash Rai: ಪ್ರಜ್ವಲ್ ರೇವಣ್ಣನ ಪೆನ್ ಡ್ರೈವ್ ಬಿಜೆಪಿಯವರಿಗೆ ಕೊಟ್ರಂತೆ, ಕಾಂಗ್ರೆಸ್ನವರಿಗೆ ಕೊಟ್ರಂತೆ ಈ ಮದ್ಯೆ ಡ್ರೈವರ್ ಬಂದಿದ್ದಾನೆ. ಆತನ ನಾನು ಮಾತ್ರ ಒಬ್ಬರಿಗೆ ಕೊಟ್ಟಿದಾನೆ ಎಂದು ಹೇಳಿದ್ದಾನೆ. ಇದರಲ್ಲಿ ಯಾರನ್ನೂ ನಂಬೋದು ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ.
ಬೆಂಗಳೂರು, ಮೆ.1: ರಾಜ್ಯದಲ್ಲಿ ಭಾರೀ ಸದ್ದು ಆಗುತ್ತಿರುವ ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣಕ್ಕೆ ಒಂದಲ್ಲ ಒಂದು ತಿರುವು ಸಿಗುತ್ತಿದೆ. ಇದರ ಮಧ್ಯೆ ನಡುವೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ರಾಜಕಾರಣಿಗಳು, ಸಿನಿಮಾ ನಟರು ಕಮೆಂಟ್ ಮಾಡುತ್ತಿದ್ದಾರೆ. ಖ್ಯಾತ ನಟ ಪ್ರಕಾಶ್ ರೈ ಕೂಡ ಈ ಪ್ರಕರಣದ ಬಗ್ಗೆ ಹುಬ್ಬಳ್ಳಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ. ಪ್ರಜ್ವಲ್ ರೇವಣ್ಣನ ಪೆನ್ ಡ್ರೈವ್ ಬಿಜೆಪಿಯವರಿಗೆ ಕೊಟ್ರಂತೆ, ಕಾಂಗ್ರೆಸ್ನವರಿಗೆ ಕೊಟ್ರಂತೆ ಈ ಮದ್ಯೆ ಡ್ರೈವರ್ ಬಂದಿದ್ದಾನೆ. ಆತನ ನಾನು ಮಾತ್ರ ಒಬ್ಬರಿಗೆ ಕೊಟ್ಟಿದಾನೆ ಎಂದು ಹೇಳಿದ್ದಾನೆ. ಇದರಲ್ಲಿ ಯಾರನ್ನೂ ನಂಬೋದು ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ. ಬಿಜೆಪಿ ಚಾಣಕ್ಯ ಅಮಿತ್ ಶಾ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಆದರೆ ಅವರು ಇದು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದಲ್ಲ, ರಾಜ್ಯ ಸರ್ಕಾರಕ್ಕೆ ಬಿಟ್ಟಿದ್ದು, ಹೀಗೆ ಹೇಳುಲು ನಾಚಿಕೆ ಆಗುವುದಿಲ್ಲ. ಕೊನೆಯ ಪಕ್ಷ ನಿಮ್ಮ ಜನರನ್ನು, ಮಹಿಳೆಯನ್ನು ಇದರ ಬಗ್ಗೆ ಪ್ರತಿಭಟನೆ ಮಾಡಲು ಹೇಳಿ ಎಂದು ಅಮಿತ್ ಶಾ ಅವರನ್ನು ಏಕವಚನದಲ್ಲಿ ಉಲ್ಲೇಖಿಸಿದ್ದಾರೆ. ನಮ್ಮ ಆ ವಿಕೃತ ಕಾಮಿ ಮುಖ್ಯ ಅಲ್ಲ, ಆ ಎರಡು ಸಾವಿರ ಹೆಣ್ಮಕ್ಕಳು ಮುಖ್ಯ ಎಂದು ಹೇಳಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ