ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಮಾತಾಡುವ ನೈತಿಕತೆ ಗೋಕಾಕ ಶಾಸಕರಿಗಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್
ಸಿದ್ದರಾಮಯ್ಯರನ್ನು ರಾಜ್ಯದ ಜನ ಅನ್ನರಾಮಯ್ಯ ಅಂತ ಕರೆಯುತ್ತಾರೆ ಮತ್ತು ಅವರು ಹಿಂದುಳಿದ, ಶೋಷಿತ ವರ್ಗ ಮತ್ತು ಎಲ್ಲ ಕೆಳವರ್ಗದ ಸಮುದಾಯಗಳ ಏಳಿಗೆಗಾಗಿ ಶ್ರಮಿಸುತ್ತಿರುವ ಧೀಮಂತ ನಾಯಕ, ದಿವಂಗತ ದೇವರಾಜ ಅರಸ್ ಅವರ ನಂತರ ಈ ವರ್ಗಗಳ ಅಭಿವೃದ್ಧಿಗಾಗಿ ಮತ್ತು ಅವರ ಬದುಕನ್ನು ಮೇಲ್ದರ್ಜೆಗೆ ಏರಿಸಲು ಯಾರಾದರೂ ಶ್ರಮಿಸಿದ್ದರೆ ಅದು ಸಿದ್ದರಾಮಯ್ಯ ಮಾತ್ರ ಎಂದು ಸಚಿವೆ ಹೇಳಿದರು
ಬೆಳಗಾವಿ: ನಿನ್ನೆ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪರ ಗೋಕಾಕ್ ನಲ್ಲಿ ಪ್ರಚಾರ ಮಾಡುವಾಗ ಅಲ್ಲಿನ ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi), ಲೋಕಸಭಾ ಚುನಾವಣೆಯ ಬಳಿಕ ರಾಜ್ಯ ಸರ್ಕಾರ ಉರುಳುತ್ತೆ ಅಂದಿದ್ದರು. ಅದಕ್ಕೆ ಜವಾಬು ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹಾಡಿ ಹೊಗಳುತ್ತಾ ಜಾರಕಿಹೊಳಿಯನ್ನು ತರಾಟೆಗೆ ತೆಗೆದುಕೊಂಡರು. ಸಿದ್ದರಾಮಯ್ಯರನ್ನು ರಾಜ್ಯದ ಜನ ಅನ್ನರಾಮಯ್ಯ ಅಂತ ಕರೆಯುತ್ತಾರೆ ಮತ್ತು ಅವರು ಹಿಂದುಳಿದ, ಶೋಷಿತ ವರ್ಗ ಮತ್ತು ಎಲ್ಲ ಕೆಳವರ್ಗದ ಸಮುದಾಯಗಳ ಏಳಿಗೆಗಾಗಿ ಶ್ರಮಿಸುತ್ತಿರುವ ಧೀಮಂತ ನಾಯಕ, ದಿವಂಗರ ದೇವರಾಜ ಅರಸ್ ಅವರ ನಂತರ ಈ ವರ್ಗಗಳ ಅಭಿವೃದ್ಧಿಗಾಗಿ ಮತ್ತು ಅವರ ಬದುಕನ್ನು ಮೇಲ್ದರ್ಜೆಗೆ ಏರಿಸಲು ಯಾರಾದರೂ ಶ್ರಮಿಸಿದ್ದರೆ ಅದು ಸಿದ್ದರಾಮಯ್ಯ ಮಾತ್ರ. ಇಂಥ ನಾಯಕನ ನೇತೃತ್ವದ ಸರ್ಕಾರವನ್ನು ಉರುಳಿಸುವ ಮಾತನ್ನು ಗೋಕಾಕ ಶಾಸಕರು ಪದೇಪದೆ ಆಡುತ್ತಿರುತ್ತಾರೆ. ಸಿದ್ದರಾಮಯ್ಯ ಆಗಲೀ ಅಥವಾ ಅವರ ಸರ್ಕಾರದ ಬಗ್ಗೆಯಾಗಲೀ ಮಾತಾಡುವ ನೈತಿಕತೆ, ಹಿಂದುಳಿದ ವರ್ಗಗಳ ಜನರ ವೋಟುಗಳಿಂದಲೇ ಶಾಸಕರಾಗಿರುವ ರಮೇಶ್ ಜಾರಕಿಹೊಳಿ ಅವರಿಗಿಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಲಕ್ಷ್ಮಣ ಸವದಿ ಮನೆಗೆ ಉಪಹಾರಕ್ಕೆ ಬಂದ ರಂದೀಪ್ ಸುರ್ಜೆವಾಲಾ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಭಾಷಣ ಚೆನ್ನಾಗಿತ್ತು ಎಂದರು!