NityaBhavishya: ಶುಕ್ರವಾರದ ದ್ವಾದಶ ರಾಶಿಗಳ ಶುಭ ಫಲ ಹೇಗಿದೆ? ತಿಳಿದುಕೊಳ್ಳಲು ವಿಡಿಯೋ ನೋಡಿ

|

Updated on: Mar 24, 2023 | 6:32 AM

ಶುಕ್ರವಾರ 24 ಮಾರ್ಚ್​ 2023ರಂದು ನಿಮ್ಮ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿಯಿಂದ ತಿಳಿದುಕೊಳ್ಳಿ.

ಶುಭೋದಯ ಓದುಗರೇ, ಪ್ರತಿ ದಿನ ಸೂರ್ಯ, ಚಂದ್ರ ಹುಟ್ಟುತ್ತಾರೆ. ಭೂಮಿ ತಿರುಗುತ್ತಿರುತ್ತೆ. ಪ್ರತಿಯೊಬ್ಬರ ಜೀವನವು ನಡೆಯುತ್ತಲೇ ಇರುತ್ತೆ. ದಿನ, ಸಮಯ ಎಲ್ಲರಿಗೂ ಒಂದೇ ಆದ್ರೂ ಜೀವನದಲ್ಲಿ ನಡೆಯುವ ಘಟನೆಗಳು ವಿಭಿನ್ನ. ಇದಕ್ಕೆ ಕಾರಣ ನಮ್ಮ ಜನ್ಮ ರಾಶಿಗಳಲ್ಲಾಗುವ ಬದಲಾವಣೆ. ನಮ್ಮ ಆರೋಗ್ಯ, ಯಶಸ್ಸು, ಸಂತೋಷ, ನೆಮ್ಮದಿ ಎಲ್ಲವೂ ನಮ್ಮ ರಾಶಿಗಳ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಕೆಲವರು ಇಂದಿನ ತಮ್ಮ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮಾರ್ಚ್ 24) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿಯಿಂದ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ : ಶುಕ್ರ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಅಶ್ವಿನಿ, ಯೋಗ : ವೈಧೃತಿ, ಕರಣ : ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 35 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:08 ರಿಂದ ಮಧ್ಯಾಹ್ನ 12:39ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:41 ರಿಂದ 05:12ರ ವರೆಗೆ, ಗುಳಿಕ ಕಾಲ ಬೆಳಗ್ಗೆ 08:06 ರಿಂದ 09:37ರ ವರೆಗೆ.