ಯಾದಗಿರಿ: ಗುರುವಾರ ಯಾದಗಿರಿ ಜಿಲ್ಲಾ ಪ್ರವಾಸದಲ್ಲಿದ್ದ ಭಾರತೀಯ ಜನತಾ ಪಕ್ಷ ಯುವ ಮೋರ್ಚಾದ ಅಧ್ಯಕ್ಷ ತೇಜಸ್ವೀ ಸೂರ್ಯ (Tejasvi Surya) ರಾಜ್ಯದಲ್ಲಿ ತಮ್ಮ ಪಕ್ಷ ನಿಶ್ಚಿತವಾಗಿಯೂ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಮತ್ತು ಬಿಎಸ್ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿಯವರ (Basavaraj Bommai) ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯ ಮತ್ತು ಜನಪರ ಯೋಜನೆಗಳಿಂದಾಗಿ ಪ್ರತಿ ಕ್ಷೇತ್ರದಲ್ಲಿ 30,000-50,000 ಫಲಾನುಭವಿಗಳಿದ್ದಾರೆ, ಅವರ್ಯಾರೂ ಪಕ್ಷದ ಕೈಬಿಡಲ್ಲ ಎಂದರು. ಬೊಮ್ಮಾಯಿ ತಾವೇ ಸಿಎಂ ಆಗುತ್ತೇನೆಂದು ಹೇಳಿರುವುದನ್ನು ಅವರ ಗಮನಕ್ಕೆ ತಂದಾಗ, ಉತ್ತರಿಸಲು ಒಂದು ಕ್ಷಣ ತಡವರಿಸುವ ಅವರು ನಂತರ ಸಾವರಿಸಿಕೊಂಡು ಬಿಜೆಪಿ ‘ಅಧಿಕಾರಕ್ಕೆ ಬಂದೇ ಬರುತ್ತದೆ ಮತ್ತು ಬೊಮ್ಮಾಯಿಯವರೇ ಸಿಎಂ ಆಗುತ್ತಾರೆ,’ ಅಂತ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ