ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ತಮ್ಮ ಕಾರ್ಯಕರ್ತರಿಗೆ ಧಮ್ಕಿ ಹಾಕಿದ ವಿಡಿಯೋ ಬಿಡುಗಡೆ ಮಾಡಿದ ಜೆಡಿಎಸ್ ನಾಯಕ ಜವರಾಯಿಗೌಡ
ಪೊಲೀಸರಿಗೆ ಯಾಕೆ ದೂರು ನೀಡಿಲ್ಲ ಅಂತ ಪತ್ರಕರ್ತರೊಬ್ಬರು ಕೇಳಿದರೆ, ಮೊದಲು ಪ್ರೆಸ್ ಮೀಟ್ ಮಾಡಿ ಆಮೇಲೆ ದೂರು ಸಲ್ಲಿಸುವ ಅಂದುಕೊಂಡಿದ್ದೇವೆ ಅಂತ ಜವರಾಯಿಗೌಡರು ಹೇಳುತ್ತಾರೆ.
ಬೆಂಗಳೂರು: ಯಶವಂತಪುರದ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ (JDS candidate Javarayigowda) ತಮ್ಮ ಪ್ರತಿಸ್ಪರ್ಧಿಯಾಗಬಹುದಾದ ಸಹಕಾರ ಸಚಿವ ಎಸ್ ಟಿ ಸೋಮಶೇಖರ (ST Somashekhar) ವಿರುದ್ಧ ಗುರುತರವಾದ ಆರೋಪಗಳನ್ನು ಮಾಡಿದ್ದಾರೆ ಮತ್ತು ವಿಡಿಯೋಗಳ ಮೂಲಕ ತಮ್ಮ ಆರೋಪಗಳನ್ನು ಪುಷ್ಠೀಕರಿಸುತ್ತಿದ್ದಾರೆ. ಸಚಿವರು ಜೆಡಿಎಸ್ ಕಾರ್ಯಕರ್ತರಿಗೆ (JDS workers) ಧಮ್ಕಿ ಹಾಕಿದ್ದಾರೆ ಎಂದು ಹೇಳುವ ಜವರಾಯಿಗೌಡ, ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಲ್ಲಿ ಹಣ ಕೊಳ್ಳೆ ಹೊಡೆದಿದ್ದಾರೆಂದು ಹೇಳುತ್ತಾರೆ. ಪೊಲೀಸರಿಗೆ ಯಾಕೆ ದೂರು ನೀಡಿಲ್ಲ ಅಂತ ಪತ್ರಕರ್ತರೊಬ್ಬರು ಕೇಳಿದರೆ, ಮೊದಲು ಪ್ರೆಸ್ ಮೀಟ್ ಮಾಡಿ ಆಮೇಲೆ ದೂರು ಸಲ್ಲಿಸುವ ಅಂದುಕೊಂಡಿದ್ದೇವೆ ಅಂತ ಗೌಡರು ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 23, 2023 05:09 PM
Latest Videos