Punjab: ಮೂರನೇ ಹಂತದ ಗರ್ಭಾಶಯ ಕ್ಯಾನ್ಸರ್ನಿಂದ ಬಳಲುತ್ತಿರುವ ಪೂಜಾ ಚಿಕಿತ್ಸೆಗೆ ಹಣ ಹೊಂದಿಸಲು ಕ್ಯಾಬ್ ಓಡಿಸುತ್ತಾರೆ!
ಸರ್ಕಾರ ಪೂಜಾ ನೆರವಿಗೆ ಧಾವಿಸಬೇಕೆಂದು ಕಮಲ್ಜೀತ್ ಹೇಳುತ್ತಾರೆ. ಆದರೆ ಪೂಜಾ ಮಾತ್ರ ಯಾರಿಂದಲೂ ಸಹಾಯ ನಿರೀಕ್ಷಿಸವುದಿಲ್ಲ. ಮಹಿಳೆಯರು ತಮ್ಮನ್ನು ತಾವು ನೋಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಅವರು ಭಾವಿಸುತ್ತಾರೆ.
ಲೂಧಿಯಾನ (ಪಂಜಾಬ್): ಕೊಲ್ಲಿ ರಾಷ್ಟ್ರವೊಂದರಲ್ಲಿ ಕೆಲಸ ಮಾಡುತ್ತಿದ್ದ ಪೂಜಾಗೆ (Pooja) 2018 ರಲ್ಲಿ ಕ್ಯಾನ್ಸರ್ ನಿಂದ ಬಳಲುತ್ತಿರುವುದು ಗೊತ್ತಾದಾಗ ತನ್ನ ತವರೂರು ಜಲಂಧರ್ಗೆ ವಾಪಸ್ಸಾದರು. ನಂತರ ಟಿಕ್ ಟಾಕ್ ಮೂಲಕ ಗೆಳತಿಯಾಗಿದ್ದ ಕಮಲ್ಜೀತ್ ಕೌರ್ (Kamaljit Kaur) ಜೊತೆ ಲೂಧಿಯಾನದಲ್ಲಿ (Ludhiana) ವಾಸಮಾಡತೊಡಗಿದರು. ಪೂಜಾ ಮೂರನೇ ಹಂತದ ಗರ್ಭಾಶಯ ಕ್ಯಾನ್ಸರ್ ನೊಂದಿಗೆ ಸಾವು ಬದುಕಿನ ಹೋರಾಟ ನಡೆಸಿದ್ದು ಚಿಕಿತ್ಸೆಗೆ ಹಣ ಹೊಂದಿಸಲು ಕ್ಯಾಬ್ ಓಡಿಸುತ್ತಾರೆ. ರೇಡಿಯೇಷನ್ ಮತ್ತು ಕೆಮೊಥೆರಪಿಗಾಗಿ ಅವರು ಈಗಾಗಲೇ ಮೂರೂವರೆ ಲಕ್ಷ ರೂ ಖರ್ಚು ಮಾಡಿದ್ದಾರೆ. ಆದಾಗ್ಯೂ ಈ ಮಾರಕ ಪೀಡೆಯಿಂದ ಅವರಿಗೆ ಬಿಡುಗಡೆ ಸಿಗುತ್ತಿಲ್ಲ.
‘ಶಸ್ತ್ರಚಿಕಿತ್ಸೆಯೊಂದೇ ನನ್ನ ಮುಂದೆ ಉಳಿದಿರುವ ಏಕೈಕ ಆಯ್ಕೆ ಎಂದು ಡಾಕ್ಟರ್ ಹೇಳುತ್ತಾರೆ. ಇದಕ್ಕೂ ಮೊದಲೊಮ್ಮೆ ನಾನು ಆಪರೇಶನ್ ಗೊಳಗಾಗಿದ್ದೆ, ಆದರೆ ಅದರಿಂದ ಪ್ರಯೋಜನವೇನೂ ಆಗಲಿಲ್ಲ. ರೇಡಿಯೇಷನ್ ಪ್ರಕ್ರಿಯೆಯಿಂದಾಗಿ ನನ್ನ ನರಗಳು ಸಂಕುಚಿತಗೊಂಡಿವೆ. ಶಸ್ತ್ರಚಿಕಿತ್ಸೆಗೊಳಗಾದ ಎರಡು ವರ್ಷಗಳ ನಂತರ ಸಮಸ್ಯೆ ಮರುಕಳಿಸಿತು. ಆದಷ್ಟು ಬೇಗ ಆಪರೇಶನ್ ಮಾಡಿಸಕೊಳ್ಳಬೇಕೆಂದು ಡಾಕ್ಟರ್ ಹೇಳುತ್ತಾರೆ,’ ಎಂದು ಪೂಜಾ ಹೇಳುತ್ತಾರೆ.
ಇದನ್ನೂ ಓದಿ: Air Pollution: ವಾಯು ಮಾಲಿನ್ಯದಿಂದ ನಿಮ್ಮ ಶ್ವಾಸಕೋಶದ ಆರೋಗ್ಯವನ್ನು ಕಾಪಾಡಲು ಸಲಹೆ ಇಲ್ಲಿದೆ
ಕಮಲ್ಜೀತ್ ಕೌರ್ ಪೂಜಾಗೆ ಟ್ಯಾಕ್ಸಿ ಕೊಡಿಸಿರುವುದರಿಂದ ಅದರಿಂದ ಬರುವ ಆದಾಯದ ಅರ್ಧಭಾಗ ಅವರ ಕುಟುಂಬಕ್ಕೆ ಹೋಗುತ್ತದೆ. ಮೂರು ವರ್ಷಗಳಿಂದ ಅವರು ಕೌರ್ ಕುಟುಂಬದೊಂದಿಗೆ ಬದುಕುತ್ತಿದ್ದಾರೆ.
‘ಪೂಜಾ ಒಬ್ಬ ಧೈರ್ಯಶಾಲಿ ಮಹಿಳೆ. ಪ್ರತಿದಿನ ಆಕೆ ರಾತ್ರಿ 10 ಗಂಟೆಗೆ ತೀರ ದಣಿದು ಸುಸ್ತಾಗಿ ಮನೆಗೆ ಬರುತ್ತಾಳೆ. ಬೆಳಗ್ಗೆ ಎದ್ದು ಪುನಃ ಕೆಲಸಕ್ಕೆ ಹೋಗು ಅಂತ ಆಕೆಗೆ ಹೇಳಲು ಮನಸ್ಸಾಗುವುದಿಲ್ಲವಾದರೂ, ಧೈರ್ಯವನ್ನೆಲ್ಲ ಒಗ್ಗೂಡಿಸಿಕೊಂಡು ಆಕೆಯನ್ನು ಕೆಲಸಕ್ಕೆ ಕಳಿಸುತ್ತೇನೆ. ತನಗೆ ಬೆನ್ನುನೋವಿದೆ, ರಕ್ತಸ್ರಾವವಾಗುತ್ತಿದೆ ಅಂತ ಪೂಜಾ ಹೇಳುತ್ತಿರುತ್ತಾಳೆ. ಆಕೆಯ ನೋವು ಅರ್ಥವಾಗುತ್ತದೆ, ಆದರೆ ನಾನು ಯಾವುದೇ ಸಹಾಯ ಮಾಡದ ಸ್ಥಿತಿಯಲ್ಲಿದ್ದೇನೆ,’ ಕಮಲ್ಜೀತ್ ಕೌರ್ ಖೇದದಿಂದ ಹೇಳುತ್ತಾರೆ.
ಸರ್ಕಾರ ಪೂಜಾ ನೆರವಿಗೆ ಧಾವಿಸಬೇಕೆಂದು ಕಮಲ್ಜೀತ್ ಹೇಳುತ್ತಾರೆ. ಆದರೆ ಪೂಜಾ ಮಾತ್ರ ಯಾರಿಂದಲೂ ಸಹಾಯ ನಿರೀಕ್ಷಿಸವುದಿಲ್ಲ. ಮಹಿಳೆಯರು ತಮ್ಮನ್ನು ತಾವು ನೋಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಅವರು ಭಾವಿಸುತ್ತಾರೆ.
ಇದನ್ನೂ ಓದಿ: Defamation Cases in India: ದೇಶದ ಕೆಲವು ಪ್ರಮುಖ ಮಾನನಷ್ಟ ಮೊಕದ್ದಮೆ ಪ್ರಕರಣಗಳಿವು…
‘ಮಹಿಳೆಯರು ಚೆನ್ನಾಗಿ ಡ್ರೈವ್ ಮಾಡಲಾರರು ಅಂತ ನನಗೆ ಗೊತ್ತಿದೆ. ಆದರೆ, ಅವರು ಈಗ ಪುರುಷರನ್ನು ಹಿಂದಿಕ್ಕಿದ್ದಾರೆ. ಮಹಿಳೆಯರು ಮತ್ತಷ್ಟು ಪ್ರಗತಿ ಸಾಧಿಸಬೇಕು, ಮುನ್ನುಗ್ಗಬೇಕು ಅಂತ ನಾನು ಭಾವಿಸುತ್ತೇನೆ,’ ಎಂದು ಪೂಜಾ ಹೇಳುತ್ತಾರೆ.
ಪೂಜಾ ತನ್ನ ಬಾಲ್ಯದಲ್ಲೇ ತಂದೆ ತಾಯಿಗಳನ್ನು ಕಳೆದುಕೊಂಡು ಅನಾಥರಾಗಿದ್ದರು. ಆದರೆ, ಕಮಲ್ಜೀತ್ ಕೌರ್ ಕುಟುಂಬದಿಂದ ತನಗೆ ಒಬ್ಬ ಕುಟುಂಬದ ಸದಸ್ಯನಿಗೆ ಸಿಗುವಷ್ಟೇ ಪ್ರೀತಿ ಮತ್ತು ವಾತ್ಸಲ್ಯ ಸಿಕ್ಕಿದೆ, ಎಂದು ಅವರು ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ