ಬಂಡೆಮಠದ ಬಸವಲಿಂಗ ಸ್ವಾಮೀಜಿ ಜೊತೆ 15 ವರ್ಷಗಳ ಒಡನಾಟವಿತ್ತು: ಎಸ್ ಟಿ ಸೋಮಶೇಖರ್, ಸಚಿವರು
ಟಿವಿ9 ವರದಿಗಾರನೊಂದಿಗೆ ಮಾತಾಡಿದ ಸಚಿವ ಸೋಮಶೇಖರ್ ಕಳೆದ ವಾರವಷ್ಟೇ ಸ್ವಾಮೀಜಿ ತಮ್ಮ ಮನೆಗೆ ಬಂದಿದ್ದರೆಂದು ಹೇಳಿದರು.
ರಾಮನಗರ: ಮಾಗಡಿ ತಾಲ್ಲೂಕಿನ ಕಂಚುಗಲ್ ನಲ್ಲಿರುವ ಬಂಡೆಮಠದ ಬಸವಲಿಂಗ ಸ್ವಾಮೀಜಿಯವರು (Basavalinga Swamiji) ಆತ್ಮಹತ್ಯೆ ಮೂಲಕ ಸಾವನ್ನಪ್ಪಿರುವುದು ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ಅವರ ಭಕ್ತಗಣಕ್ಕೆ (followers) ತೀವ್ರ ಆಘಾತವನ್ನುಂಟು ಮಾಡಿದೆ. ಸ್ವಾಮೀಜಿಯವರೊಂದಿಗೆ ಕಳೆದ 15 ವರ್ಷಗಳಿಂದ ಒಡನಾಟವಿಟ್ಟುಕೊಂಡಿದ್ದ ಮತ್ತು ಅವರ ಅಂತ್ಯ ಸಂಸ್ಕಾರದಲಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ (ST Somashekhar) ಅವರು ಸಹ ಸ್ವಾಮೀಜಿಗಳ ಸಾವಿನ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದರು. ಟಿವಿ9 ವರದಿಗಾರನೊಂದಿಗೆ ಮಾತಾಡಿದ ಸಚಿವರು ಕಳೆದ ವಾರವಷ್ಟೇ ಸ್ವಾಮೀಜಿ ತಮ್ಮ ಮನೆಗೆ ಬಂದಿದ್ದರೆಂದು ಹೇಳಿದರು.
Latest Videos