ದೀಪಾವಳಿಗೆ ಸಿದ್ಧವಾಗುತ್ತಿದೆ 7 ಅಡಿ ಎತ್ತರ 9 ಅಡಿ ಅಗಲದ ಕಾಂತಾರ ರಂಗೋಲಿ
ರಂಗೋಲಿಯಲ್ಲಿ ಮೂಡಿಬರುತ್ತಿವೆ ಕಾಂತಾರ ಚಿತ್ರದ ರಿಷಬ್ ಶೆಟ್ಟಿ ಪಾತ್ರಗಳು
ಇತ್ತೀಚೆಗೆ ತೆರೆ ಕಂಡು ದೇಶ ವಿದೇಶಗಳಲ್ಲಿ ಹೆಸರು ಮಾಡುತ್ತಿರುವ ಕಾಂತಾರ ಚಿತ್ರದ ರಿಷಬ್ ಶೆಟ್ಟಿ ಪಾತ್ರಗಳು ರಂಗೋಲಿಯಲ್ಲಿ ಮೂಡಿಬರುತ್ತಿವೆ. ದೀಪಾವಳಿ ಹಿನ್ನೆಲೆ ಉಡುಪಿಯ ಸಾಲಿಗ್ರಾಮ ವಿಶ್ವಕರ್ಮ ಸಭಾ ಭವನದಲ್ಲಿ ಸುಮಾರು 7 ಅಡಿ ಎತ್ತರ 9 ಅಡಿ ಅಗಲವಿರುವ ಕಾಂತಾರ ರಂಗೋಲಿ ಸಿದ್ಧವಾಗುತ್ತಿದೆ. ರಂಗೋಲಿ ಸ್ಫೂರ್ತಿ ಆಚಾರ್ಯ ಮತ್ತು ಅಶ್ವತ್ಥ್ ಆಚಾರ್ಯ ಅವರ ಕೈಯಲ್ಲಿ ಮೂಡಿಬರುತ್ತಿದೆ. ನಿನ್ನೆ (ಅ.23) ಮುಂಜಾನೆಯಿಂದ ರಂಗೋಲಿ ರಚನೆ ಆರಂಭಗೊಂಡಿದೆ. ಇಂದು ಸಂಜೆ ರಂಗೋಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಪಂಜುರ್ಲಿ ವೇಷ ಕಟ್ಟಿರುವ ಮತ್ತು ಕೋಣ ಓಡಿಸುವ ರಿಷಭ್ ಶೆಟ್ಟಿ ರಂಗೋಲಿಯಲ್ಲಿ ಮೂಡಿ ಬರಲಿದ್ದಾರೆ. ಕರಾವಳಿ ಸಂಸ್ಕೃತಿ, ಆಚರಣೆಗೆ ಬೆಳಕು ಹಿಡಿದ ಕಾಂತಾರ ಚಲನಚಿತ್ರಕ್ಕೆ ರಂಗೋಲಿಯ ಅಭಿನಂದನೆ ಸಲ್ಲಿಸಲಾಗುತ್ತಿದೆ.
Latest Videos