ಚೆನ್ನೈನಲ್ಲಿ 12,000 ಶಂಖಗಳಿಂದ ಸಿದ್ಧವಾಯ್ತು 40 ಅಡಿ ಎತ್ತರದ ಗಣೇಶನ ಮೂರ್ತಿ!

Updated on: Sep 15, 2026 | 10:49 PM

ಚೆನ್ನೈನ ಕೊಳತ್ತೂರಿನಲ್ಲಿ ಪ್ರತಿಷ್ಠಾಪಿಸಲಾಗಿರುವ ಈ ಶಂಖ ಗಣಪತಿಯ ದರ್ಶನ ಪಡೆಯಲು ಹಾಗೂ ಫೋಟೋಗಳನ್ನು ತೆಗೆಯಲು ತಮಿಳುನಾಡಿನ ವಿವಿಧ ಭಾಗಗಳಿಂದ ಸಾವಿರಾರು ಭಕ್ತಾದಿಗಳು ಸಾಲಿನಲ್ಲಿ ನಿಂತು ಆಗಮಿಸುತ್ತಿದ್ದಾರೆ. ಶಂಖಗಳಿಂದ ಶೃಂಗರಿಸಲ್ಪಟ್ಟ ಈ 40 ಅಡಿಯ ಗಣಪತಿಯ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಚೆನ್ನೈ, ಸೆಪ್ಟೆಂಬರ್ 15: ಗಣೇಶ ಚತುರ್ಥಿ ಉತ್ಸವದ ಶುಭ ಸಂದರ್ಭದಲ್ಲಿ ತಮಿಳುನಾಡಿನ ರಾಜಧಾನಿ ಚೆನ್ನೈನ ಕೊಳತ್ತೂರು ಪ್ರದೇಶದಲ್ಲಿ ಅತ್ಯಂತ ವಿಶಿಷ್ಟ ಹಾಗೂ ಆಕರ್ಷಕ ಗಣೇಶನ ಮೂರ್ತಿಯೊಂದನ್ನು ಪ್ರತಿಷ್ಠಾಪಿಸಲಾಗಿದೆ. ಸಂಪೂರ್ಣವಾಗಿ 12,000 ಬಿಳಿ ಶಂಖಗಳಿಂದ ನಿರ್ಮಿಸಲಾಗಿರುವ 40 ಅಡಿ ಎತ್ತರದ ಬೃಹತ್ ಗಣಪತಿಯ ಮೂರ್ತಿ ಈ ಬಾರಿಯ ಹಬ್ಬದ ಪ್ರಮುಖ ಆಕರ್ಷಣೆಯಾಗಿತ್ತು. ಸನಾತನ ಧರ್ಮದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುವ ಬಿಳಿ ಶಂಖಗಳನ್ನು ಬಳಸಿ ಈ ಭವ್ಯ ಮೂರ್ತಿಯನ್ನು ವಿನ್ಯಾಸಗೊಳಿಸಲಾಗಿದೆ. ಸುಮಾರು 12 ಸಾವಿರಕ್ಕೂ ಹೆಚ್ಚು ನಿಜವಾದ ಶಂಖಗಳನ್ನು ಅತ್ಯಂತ ಸೂಕ್ಷ್ಮವಾಗಿ ಜೋಡಿಸಿ 40 ಅಡಿಯ ಗಣಪತಿಯ ವಿಗ್ರಹವನ್ನು ಸಿದ್ಧಪಡಿಸಲಾಗಿದೆ.

ಚೆನ್ನೈನ ಕೊಳತ್ತೂರಿನಲ್ಲಿ ಪ್ರತಿಷ್ಠಾಪಿಸಲಾಗಿರುವ ಈ ಶಂಖ ಗಣಪತಿಯ ದರ್ಶನ ಪಡೆಯಲು ಹಾಗೂ ಫೋಟೋಗಳನ್ನು ತೆಗೆಯಲು ತಮಿಳುನಾಡಿನ ವಿವಿಧ ಭಾಗಗಳಿಂದ ಸಾವಿರಾರು ಭಕ್ತಾದಿಗಳು ಸಾಲಿನಲ್ಲಿ ನಿಂತು ಆಗಮಿಸುತ್ತಿದ್ದಾರೆ. ಶಂಖಗಳಿಂದ ಶೃಂಗರಿಸಲ್ಪಟ್ಟ ಈ 40 ಅಡಿಯ ಗಣಪತಿಯ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More