ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿಗೆ ಚಿತ್ರಮಂದಿರದಲ್ಲೇ ಅರ್ಜುನ್ ಜನ್ಯ ಉತ್ತರ

Updated on: Dec 25, 2025 | 6:32 PM

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇದೇ ಮೊದಲ ಬಾರಿಗೆ ‘45’ ಚಿತ್ರದ ಮೂಲಕ ಡೈರೆಕ್ಟರ್ ಆಗಿದ್ದಾರೆ. ಇದು ಅವರ ಮೊದಲ ನಿರ್ದೇಶನದ ಚಿತ್ರ. ಮೊದಲ ದಿನ ಸಿನಿಮಾ ವೀಕ್ಷಿಸಿದ ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ವಿಮರ್ಶೆ ತಿಳಿಸುತ್ತಿದ್ದಾರೆ. ಅವುಗಳಿಗೆ ಅರ್ಜುನ್ ಜನ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಡಿಯೋ ನೋಡಿ..

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ (Arjun Janya) ಅವರು ಇದೇ ಮೊದಲ ಬಾರಿಗೆ ‘45’ ಸಿನಿಮಾ (45 Kannada Movie) ಮೂಲಕ ಡೈರೆಕ್ಟರ್ ಆಗಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಸಿನಿಮಾ. ಮೊದಲ ದಿನ ಸಿನಿಮಾ ನೋಡಿದ ಅಭಿಮಾನಿಗಳು ಬಗೆಬಗೆಯಲ್ಲಿ ವಿಮರ್ಶೆ ತಿಳಿಸಿದ್ದಾರೆ. ‘ಅರ್ಜುನ್ ಜನ್ಯ ಅವರು ಇದು ತಮ್ಮ ಮೊದಲ ಸಿನಿಮಾ ಅಂತ ಸುಳ್ಳು ಹೇಳಿದ್ದಾರೆ. ಮೊದಲ ಸಿನಿಮಾದಲ್ಲಿ ಯಾರೂ ಕೂಡ ಇಷ್ಟು ಚೆನ್ನಾಗಿ ಮಾಡೋಕೆ ಆಗಲ್ಲ. ಮೊದಲ ಸಿನಿಮಾ ಅಂತ ಹೇಳಿದ್ದಕ್ಕೆ ಅವರ ವಿರುದ್ಧ ನಾನು ಪೊಲೀಸ್ ಕಂಪ್ಲೇಂಟ್ ಕೊಡುತ್ತೇನೆ’ ಎಂದು ಅಭಿಮಾನಿಯೊಬ್ಬರು ಹೇಳಿದ್ದರು. ಅದಕ್ಕೆ ಅರ್ಜುನ್ ಜನ್ಯ ಪ್ರತಿಕ್ರಿಯಿಸಿದ್ದಾರೆ. ‘ಆ ವಿಡಿಯೋ ನಾನು ನೋಡಿದೆ. ಅವರು ಬಹಳ ಕ್ಯೂಟ್ ಆಗಿ ಹೇಳಿದ್ದಾರೆ. ಅದಕ್ಕಾಗಿ ಧನ್ಯವಾದಗಳು. ಆ ವಿಮರ್ಶೆಯನ್ನು ಅವರು ತಮಾಷೆಯಾಗಿ ಹೇಳಿರಬಹುದು. ಆದರೆ ಬಹಳ ಸತ್ಯವಾಗಿ ಹೇಳಿದ್ದಾರೆ. ಮೂವರು ಸ್ಟಾರ್ ನಟರು ಇರುವ ಸಿನಿಮಾವನ್ನು ನಾನು ಹೆಂಗೆಂಗೋ ಮಾಡೋಕೆ ಆಗಲ್ಲ. ಬ್ಯಾಲೆನ್ಸ್ ಮಾಡುವ ದೊಡ್ಡ ಜವಾಬ್ದಾರಿ ನನ್ನ ಮೇಲಿತ್ತು’ ಎಂದು ಅರ್ಜುನ್ ಜನ್ಯ ಅವರು ಹೇಳಿದ್ದಾರೆ. ಶಿವರಾಜ್​ಕುಮಾರ್ (Shivarajkumar), ಉಪೇಂದ್ರ, ರಾಜ್ ಬಿ. ಶೆಟ್ಟಿ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.