ಗುಜರಾತ್​ನ ಪಾವಗಡ ಬೆಟ್ಟದ ದೇವಾಲಯದಲ್ಲಿ ರೋಪ್‌ವೇ ಕುಸಿದು 6 ಜನ ಸಾವು

Updated on: Sep 06, 2025 | 8:05 PM

ಬೆಟ್ಟದ ತುದಿಗೆ ನಿರ್ಮಾಣ ಸಾಮಗ್ರಿಗಳನ್ನು ಎತ್ತುವಾಗ ಹಗ್ಗ ತುಂಡಾಗಿ ಅಪಘಾತ ಸಂಭವಿಸಿದ್ದು, ಇಂದು ಮಧ್ಯಾಹ್ನ 3:30ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಮೃತರಲ್ಲಿ ಇಬ್ಬರು ಲಿಫ್ಟ್‌ಮೆನ್, ಇಬ್ಬರು ಕಾರ್ಮಿಕರು ಮತ್ತು ಇತರ ಇಬ್ಬರು ವ್ಯಕ್ತಿಗಳು ಸೇರಿದ್ದಾರೆ. ಮೃತರಲ್ಲಿ ಇಬ್ಬರು ಲಿಫ್ಟ್‌ಮೆನ್, ಇಬ್ಬರು ಕಾರ್ಮಿಕರು ಮತ್ತು ಇತರ ಇಬ್ಬರು ವ್ಯಕ್ತಿಗಳು ಸೇರಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ಪಾವಗಡ, ಸೆಪ್ಟೆಂಬರ್ 6: ಪಂಚಮಹಲ್ ಜಿಲ್ಲೆಯ ಪಾವಗಡದ ಪ್ರಸಿದ್ಧ ಮಹಾಕಾಳಿ ಮಂದಿರ ಶಕ್ತಿಪೀಠದ ಬಳಿ ಇಂದು ಸರಕು ಸಾಗಣೆ ಮಾಡುವ ರೋಪ್‌ವೇ ಅಪಘಾತಕ್ಕೀಡಾಗಿ (Accident) 6 ಜನರು ಸಾವನ್ನಪ್ಪಿದ ದುರಂತ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಬೆಟ್ಟದ ತುದಿಗೆ ನಿರ್ಮಾಣ ಸಾಮಗ್ರಿಗಳನ್ನು ಎತ್ತುವಾಗ ಹಗ್ಗ ತುಂಡಾಗಿ ಅಪಘಾತ ಸಂಭವಿಸಿದ್ದು ಇಂದು ಮಧ್ಯಾಹ್ನ 3:30ರ ಸುಮಾರಿಗೆ ಈ ಘಟನೆ ನಡೆದಿದೆ. ಮೃತರಲ್ಲಿ ಇಬ್ಬರು ಲಿಫ್ಟ್‌ಮೆನ್, ಇಬ್ಬರು ಕಾರ್ಮಿಕರು ಮತ್ತು ಇತರ ಇಬ್ಬರು ವ್ಯಕ್ತಿಗಳು ಸೇರಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Sep 06, 2025 08:01 PM
Follow Us
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More