77 Independence Day celebration: ಭಾರತ-ಪಾಕ್​ ಗಡಿಯಲ್ಲಿ ಬೀಟಿಂಗ್ ರಿಟ್ರೀಟ್‌, ಈ ಬಾರಿಯೂ ಮೈನವಿರೇಳಿಸುವ ಸಂಭ್ರಮ

|

Updated on: Aug 15, 2023 | 1:15 PM

ಪ್ರತಿ ವರ್ಷದಂತೆ 2023 ರ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನವಾದ ನಿನ್ನೆ ಸೋಮವಾರ (ಆಗಸ್ಟ್​ 14) ಪಂಜಾಬ್‌ನ ಅಮೃತಸರದ ಅಟ್ಟಾರಿ-ವಾಘಾ ಗಡಿಯಲ್ಲಿ ಬೀಟಿಂಗ್ ರಿಟ್ರೀಟ್ ಸಮಾರಂಭವನ್ನು ಆಯೋಜಿಸಲಾಗಿತ್ತು. ಬೀಟಿಂಗ್ ರಿಟ್ರೀಟ್ ಸಮಾರಂಭಕ್ಕಾಗಿ ಅಟ್ಟಾರಿ-ವಾಘಾ ಗಡಿಯಲ್ಲಿ ಭಾರಿ ಜನಸಮೂಹ ಜಮಾಯಿಸಿತ್ತು. ಜನರು ದೇಶಭಕ್ತಿಯ ಗೀತೆಗಳನ್ನು ಹಾಡುತ್ತಾ, ನೃತ್ಯ ಮಾಡುತ್ತಾ, ಭಾರತದ ರಾಷ್ಟ್ರಧ್ವಜವನ್ನು ಹಾರಿಸುತ್ತಿದ್ದಂತೆ ವಾತಾವರಣವು ಸಂಭ್ರಮಾಚರಣೆಯಿಂದ ತುಂಬಿತು.

ಪ್ರತಿ ವರ್ಷದಂತೆ 2023 ರ ಸ್ವಾತಂತ್ರ್ಯ ದಿನಾಚರಣೆಯ (77 Independence Day celebration) ಮುನ್ನಾದಿನವಾದ ನಿನ್ನೆ ಸೋಮವಾರ (ಆಗಸ್ಟ್​ 14) ಪಂಜಾಬ್‌ನ ಅಮೃತಸರದ ಅಟ್ಟಾರಿ-ವಾಘಾ ಗಡಿಯಲ್ಲಿ (India-Pakistan Attari-Wagah border) ಬೀಟಿಂಗ್ ರಿಟ್ರೀಟ್ ಸಮಾರಂಭವನ್ನು ಆಯೋಜಿಸಲಾಗಿತ್ತು. ಬೀಟಿಂಗ್ ರಿಟ್ರೀಟ್ (Beating retreat) ಸಮಾರಂಭಕ್ಕಾಗಿ ಅಟ್ಟಾರಿ-ವಾಘಾ ಗಡಿಯಲ್ಲಿ ಭಾರಿ ಜನಸಮೂಹ ಜಮಾಯಿಸಿತ್ತು. ಜನರು ದೇಶಭಕ್ತಿಯ ಗೀತೆಗಳನ್ನು ಹಾಡುತ್ತಾ, ನೃತ್ಯ ಮಾಡುತ್ತಾ, ಭಾರತದ ರಾಷ್ಟ್ರಧ್ವಜವನ್ನು ಹಾರಿಸುತ್ತಿದ್ದಂತೆ ವಾತಾವರಣವು ಸಂಭ್ರಮಾಚರಣೆಯಿಂದ ತುಂಬಿತು. ‘ಬೋಲ್ಡ್ಸ್’ ಮಹಿಳೆಯರು ಸುಪ್ರಸಿದ್ಧ 303 ರೈಫಲ್‌ಗಳೊಂದಿಗೆ 10-ನಿಮಿಷಗಳ ಡ್ರಿಲ್ ಅನ್ನು ಪ್ರದರ್ಶಿಸಿದರು, ಇದು ತಲಾ ಸುಮಾರು 4.7 ಕೆಜಿ ತೂಗುತ್ತದೆ. ಬಿಎಸ್ ಎಫ್ ಯೋಧರು ಹುರುಪಿನಿಂದ ಮತ್ತು ಕೆಚ್ಚೆದೆಯಿಂದ ರಾಷ್ಟ್ರಧ್ವಜವನ್ನು ಕೈಯಲ್ಲಿ ಹಿಡಿದು ಮುನ್ನಡೆದರು. ಬೀಟಿಂಗ್ ರಿಟ್ರೀಟ್ ಸೂರ್ಯಾಸ್ತದ ಮೊದಲು ಗಡಿಯಲ್ಲಿ ಎರಡೂ ದೇಶಗಳ ರಾಷ್ಟ್ರೀಯ ಧ್ವಜಗಳನ್ನು ಇಳಿಸುವ ಸಾಂಪ್ರದಾಯಿಕ ಆಚರಣೆಯಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ