ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ 2 ಟ್ರಕ್‌ಗಳ ನಡುವೆ ಸಿಕ್ಕಿ ಸುಟ್ಟು ಕರಕಲಾದ ಕಾರು; 8 ಜನ ಸಾವು
ಪುಣೆ ನಗರದ ಹೊರವಲಯದಲ್ಲಿ ಬೆಂಕಿ ಹೊತ್ತಿಕೊಂಡ ಎರಡು ದೊಡ್ಡ ಕಂಟೇನರ್ ಟ್ರಕ್‌ಗಳ ನಡುವೆ ಕಾರು ನಜ್ಜುಗುಜ್ಜಾಗಿ 8 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಎರಡು ಟ್ರಕ್‌ಗಳು ಡಿಕ್ಕಿ ಹೊಡೆದಾಗ ಈ ಘಟನೆ ಸಂಭವಿಸಿದೆ. ಆ ಎರಡು ವಾಹನಗಳು ಬೆಂಕಿಗೆ ಆಹುತಿಯಾಗುವ ಮೊದಲು ಕಾರು ಅವುಗಳ ನಡುವೆ ಸಿಲುಕಿಕೊಂಡಿತು. ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಹಲವಾರು ಗಂಟೆಗಳ ಪ್ರಯತ್ನದ ನಂತರ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.
ಪುಣೆ, ನವೆಂಬರ್ 13: ಮಹಾರಾಷ್ಟ್ರದ ಪುಣೆ-ಬೆಂಗಳೂರು ಹೆದ್ದಾರಿಯ ನವಲೆ ಸೇತುವೆ ಬಳಿ ಕಂಟೇನರ್ ಟ್ರಕ್ ನಿಯಂತ್ರಣ ತಪ್ಪಿ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ 8 ಜನರು ಸಾವನ್ನಪ್ಪಿದ್ದಾರೆ. ಡಿಕ್ಕಿಯ ನಂತರ 2ರಿಂದ 3 ಭಾರೀ ವಾಹನಗಳು ಬೆಂಕಿಗೆ (Fire Accident) ಆಹುತಿಯಾಗಿವೆ.
ಎರಡು ಟ್ರಕ್‌ಗಳು ಡಿಕ್ಕಿ ಹೊಡೆದಾಗ ಈ ಘಟನೆ ಸಂಭವಿಸಿದೆ. ಆ ಎರಡು ವಾಹನಗಳು ಬೆಂಕಿಗೆ ಆಹುತಿಯಾಗುವ ಮೊದಲು ಕಾರು ಅವುಗಳ ನಡುವೆ ಸಿಲುಕಿಕೊಂಡಿತು. ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಹಲವಾರು ಗಂಟೆಗಳ ಪ್ರಯತ್ನದ ನಂತರ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ