ಆಹಾರ ಅರಸಿ ಗ್ರಾಮದತ್ತ ಬಂದ 9 ಅಡಿ ಉದ್ದದ ಮೊಸಳೆ: ಕಟ್ಟಿ ಹಾಕಿದ ಗ್ರಾಮಸ್ಥರು
ಕೃಷ್ಣಾ ನದಿ ನೀರು ಖಾಲಿಯಾದ ಹಿನ್ನೆಲೆ ನದಿ ಪಾತ್ರದಲ್ಲಿ ಮೊಸಳೆ ಹಾವಳಿ ಶುರುವಾಗಿದೆ. ಆಹಾರಕ್ಕಾಗಿ ಅಲೆಯುತ್ತಾ ಗ್ರಾಮದತ್ತ ಬಂದ 9 ಅಡಿ ಉದ್ದದ ಮೊಸಳೆ ಬಂದಿದ್ದು, ರಸ್ತೆ ಬದಿ ಮೇಯುತ್ತಿದ್ದ ಮೇಕೆ ಮೇಲೆ ದಾಳಿ ಮಾಡಿದೆ. ಜೆಸಿಬಿ ಬಳಸಿ ಮೊಸಳೆಯನ್ನು ಕೊಂತಿಕಲ್ ಗ್ರಾಮಸ್ಥರು ಕಟ್ಟಿ ಹಾಕಿದ್ದಾರೆ.
ಬಾಗಲಕೋಟೆ: ಕೃಷ್ಣಾ ನದಿ ನೀರು ಖಾಲಿಯಾದ ಹಿನ್ನೆಲೆ ನದಿ ಪಾತ್ರದಲ್ಲಿ ಮೊಸಳೆ (crocodile) ಹಾವಳಿ ಶುರುವಾಗಿದೆ. ಜಿಲ್ಲೆ ಬೀಳಗಿ ತಾಲ್ಲೂಕಿನ ಕೊಂತಿಕಲ್ ಗ್ರಾಮದ ಬಳಿ ಸುಮಾರು 9 ಅಡಿ ಉದ್ದದ ಮೊಸಳೆ ಪ್ರತ್ಯಕ್ಷವಾಗಿದೆ. ಆಹಾರ ಅರಸಿ ಬಂದ ಮೊಸಳೆ ರಸ್ತೆ ಬದಿ ಮೇಯುತ್ತಿದ್ದ ಮೇಕೆ ಮೇಲೆ ದಾಳಿ ಮಾಡಿದೆ. ಮೊಸಳೆ ಕಂಡ ಗ್ರಾಮಸ್ಥರು ಜೆಸಿಬಿ ಬಳಸಿ ಕಟ್ಟಿ ಹಾಕಿದ್ದರು. ಸುದ್ದಿ ತಿಳಿದು ಸ್ಥಳಕ್ಕೆ ಅರಣ್ಯ ವಲಯ ಅಧಿಕಾರಿಗಳು ದೌಡಾಯಿಸಿದ್ದಾರೆ. ಬಳಿಕ ವಾಹನದ ಮೂಲಕ ಸುರಕ್ಷಿತವಾಗಿ ಆಲಮಟ್ಟಿ ಹಿನ್ನೀರಿಗೆ ಮೊಸಳೆ ಸಾಗಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.