ಈ ಬಾರಿ ತಮಿಳುನಾಡಿಗೆ ಕಾವೇರಿ ನೀರು ಕೊಡಲು ಸಾಧ್ಯವಾಗಲ್ಲ ಎಂದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್

ಈ ಬಾರಿ ತಮಿಳುನಾಡಿಗೆ ಕಾವೇರಿ ನೀರು ಕೊಡಲು ಸಾಧ್ಯವಾಗಲ್ಲ ಎಂದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jul 02, 2023 | 7:29 PM

ಕಾವೇರಿ ವ್ಯಾಪ್ತಿಯ 4 ಡ್ಯಾಂಗಳಲ್ಲಿ ಒಟ್ಟು 7 TMC ನೀರು ಮಾತ್ರ ಇದೆ. ಪ್ರತಿ ವರ್ಷ ನಾವು ತಮಿಳುನಾಡಿಗೆ 3.5 ಟಿಎಂಸಿ ನೀರು ಬಿಡಬೇಕು. ಸದ್ಯ ನೀರು ಬಿಟ್ಟರೆ ನಮಗೆ ಬಹಳ ಸಮಸ್ಯೆ ಆಗಲಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್​ ಹೇಳಿದರು.

ಮೈಸೂರು: ಕಾವೇರಿ ವ್ಯಾಪ್ತಿಯ (Cauvery water) 4 ಡ್ಯಾಂಗಳಲ್ಲಿ ಒಟ್ಟು 7 TMC ನೀರು ಮಾತ್ರ ಇದೆ. ಪ್ರತಿ ವರ್ಷ ನಾವು ತಮಿಳುನಾಡಿಗೆ 3.5 ಟಿಎಂಸಿ ನೀರು ಬಿಡಬೇಕು. ಸದ್ಯ ನೀರು ಬಿಟ್ಟರೆ ನಮಗೆ ಬಹಳ ಸಮಸ್ಯೆ ಆಗಲಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್​ ಹೇಳಿದರು. ನಗರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆ ಕೊರತೆಯಿಂದ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಈ ಬಾರಿ ತಮಿಳುನಾಡಿಗೆ ಕಾವೇರಿ ನೀರು ಕೊಡಲು ಸಾಧ್ಯವಾಗಲ್ಲ. ಕಾವೇರಿ ನೀರಾವರಿ ನಿಗಮದವರೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದರು.

ಈ ಸಂಬಂಧ ಸರ್ಕಾರ ಸೆಂಟ್ರಲ್​​ ವಾಟರ್ ಕಮಿಷನ್​ಗೆ ಪತ್ರ ಬರೆದಿದೆ. ಕಾವೇರಿ ನೀರು ಬಿಡುವ ವಿಚಾರ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರಲಿದೆ. ಹೀಗಾಗಿ ಕೇಂದ್ರ ಸರ್ಕಾರ ತಮಿಳುನಾಡಿಗೆ ಮನವರಿಕೆ ಮಾಡಿಕೊಡಬೇಕು. ರಾಜ್ಯ ಬಿಜೆಪಿ ನಾಯಕರು ಕೂಡ ಕೇಂದ್ರದ ಗಮನಕ್ಕೆ ತರಲಿ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.