Krishna River Ground Report: ಬರಿದಾದ ಕೃಷ್ಣೆಯ ಒಡಲು

Krishna River Ground Report: ಬರಿದಾದ ಕೃಷ್ಣೆಯ ಒಡಲು

TV9 Web
| Updated By: ಆಯೇಷಾ ಬಾನು

Updated on: Jul 02, 2023 | 2:45 PM

ವಿಜಯಪುರ ಜಿಲ್ಲೆಯಷ್ಟೇಯಲ್ಲಾ ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಯ ಒಡಲು ಖಾಲಿ ಖಾಲಿಯಾಗಿದೆ. ಸದಾ ತುಂಬಿ ಹರಿಯುತ್ತಿದ್ದ ಕೃಷ್ಣೆ ಇದೀಗಾ ನೀರಿಲ್ಲದೇ ಬರಿದಾಗಿದ್ದಾಳೆ.

ರಾಜ್ಯದಲ್ಲಿ ಮಳೆಯಾಗದೇ ಭೀಕರ ಬರ ಆವರಿಸಿದೆ. ವರುಣ ದೇವರ ಅವಕೃಪೆಗೆ ರೈತರು ಜನರು ಪಾತ್ರವಾಗಿದ್ದಾರೆ. ಮುಂಗಾರು ಹಂಗಾಮು ಮುಗಿಯುತ್ತಾ ಬಂದರೂ ಮಳೆಯ ಸುಳಿವಿಲ್ಲಾ. ನಾಡಿನ ಕೆರೆಗಳು ಹಳ್ಳಗಳು ನದಿಗಳು ಡ್ಯಾಂಗಳು ಖಾಲಿಯಾಗಿವೆ. ನದಿಪಾತ್ರಗಳು ನೀರಿಲ್ಲದೇ ಭಣಗುಡುತ್ತಿವೆ. ವಿಜಯಪುರ ಜಿಲ್ಲೆಯಲ್ಲಿ ಕೃಷ್ಣಾ ನದಿಯಲ್ಲಿ ನೀರು ಮಾಯವಾಗಿ ಭೂಮಿ ಬಾಯಿಬಿಟ್ಟಿದೆ. ನೀರಿಲ್ಲದ ಕೃಷ್ಣೆಯ ಒಡಲು ಬರಿದಾಗಿದೆ.

ವಿಜಯಪುರ ಜಿಲ್ಲೆಯಷ್ಟೇಯಲ್ಲಾ ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಯ ಒಡಲು ಖಾಲಿ ಖಾಲಿಯಾಗಿದೆ. ಸದಾ ತುಂಬಿ ಹರಿಯುತ್ತಿದ್ದ ಕೃಷ್ಣೆ ಇದೀಗಾ ನೀರಿಲ್ಲದೇ ಬರಿದಾಗಿದ್ದಾಳೆ. ಕೃಷ್ಣಾ ನದಿಯ ಒಡಲಲ್ಲಿ ನೀರು ಹುಡುಕಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಮುಂಗಾರು ಮಳೆ ಕೈಕೊಟ್ಟ ಕಾರಣ ನದಿಗೆ ಒಳ ಹರಿವು ಇಲ್ಲವಾಗಿದೆ. ಮುಖ್ಯವಾಗಿ ಕೃಷ್ಣಾ ನದಿಗೆ ಅದರ ಉಗಮ ಸ್ಥಾನ ಮಹಾರಾಷ್ಟ್ರದ ಮಹಾಬಳೇಶ್ವರ ಹಾಗು ಇತರೆ ಭಾಗಗಳಲ್ಲಿ ವ್ಯಾಪಕ ಮಳೆಯಾಗಿ ಅಪಾರ ಪ್ರಮಾಣದ ನೀರು ಹರಿದು ಬರುತ್ತಿತ್ತು. ಇಷ್ಟರ ಮದ್ಯೆ ಬೆಳಗಾವಿ ಜಿಲ್ಲೆಯಲ್ಲಿ ಮಳೆಯಾಗಿ ಮಲಪ್ರಭಾ ಘಟಪ್ರಭಾ ನದಿಯ ನೀರು ಕೃಷ್ಣೆಯಲ್ಲಿ ಸೇರುತ್ತಿತ್ತು. ಆದರೆ ಎಲ್ಲಿಯೂ ಮಳೆಯಾಗದ ಕಾರಣ ಕೃಷ್ಣನದಿಯಲ್ಲಿ ನೀರಿಲ್ಲವಾಗಿದೆ. ಇನ್ನು ಮಳೆಯಾಗದ ಕಾರಣ ಬಿತ್ತನೆ ಮಾಡದೇ ನಾವು ಮುಗಿಲನೋಡುತ್ತಾ ಕುಳಿತುಕೊಂಡಿದ್ದೇವೆ ಎಂದು ರೈತರು ಅವಲತ್ತುಕೊಂಡಿದ್ದಾರೆ. ನದಿಪಾತ್ರದ ಜಮೀನುಗಳಿಗೆ ನೀರು ಹಾಯಿಸಲು ಸಹ ನದಿಯಲ್ಲಿ ನೀರಿಲ್ಲಾ ಎಂದು ನೋವನ್ನು ಹೊರ ಹಾಕಿದ್ದಾರೆ. ಇನ್ನೂ ಐದು ವರ್ಷಗಳ ಕಾಲ ಮಳೆಯಾಗಲ್ಲಾ. ಕಾಂಗ್ರೆಸ್ ಸರ್ಕಾರ ಇದ್ದಾಗ ಬರಗಾಲವೇ ಇರುತ್ತದೆ ಎಂದು ಮಾತನ್ನಾಡಿದ್ದಾರೆ.