ಯಾದಗಿರಿಯಲ್ಲಿ ನೀರಿಗಾಗಿ ಹಾಹಾಕಾರ, ಗಂಟೆಗಟ್ಟಲೆ ಕಾದರೂ ಸಿಗ್ತಿಲ್ಲ ಒಂದು ಬಿಂದಿಗೆ ನೀರು
ಮಳೆ ಬಾರದ್ದಕ್ಕೆ ಅಂತರ್ಜಲ ಕುಸಿತವಾಗಿ ಬೋರವೆಲ್ ಬತ್ತಿ ಬಂದ್ ಆಗಿವೆ. ಬೋರವೆಲ್ ಗಳು ಬತ್ತಿ ಹೋಗಿದ್ದಕ್ಕೆ ಜನರಿಗೆ ಕುಡಿಯುವ ನೀರು ಸಿಗುತ್ತಿಲ್ಲ. ಕೊನೆಗೆ ಪಂಚಾಯಿತಿ ಅಧಿಕಾರಿಗಳು ಟ್ಯಾಂಕರ್ ಮೂಲಕ ಅಲ್ಪ ಸ್ವಲ್ಪ ನೀರು ಪೂರೈಸುತ್ತಿದ್ದಾರೆ.
ಯಾದಗಿರಿ: ಮಳೆ ಬಾರದೆ ಅಂತರ್ಜಲ ಕುಸಿದಿದ್ದು ಕುಡಿಯುವ ನೀರಿಗಾಗಿ ಜನ ಪರದಾಡುತ್ತಿದ್ದಾರೆ. ಯಾದಗಿರಿ ತಾಲೂಕಿನ ಬಂದಳ್ಳಿ ಗ್ರಾಮದಲ್ಲಿ ಭೀಕರ ಬರ ಎದುರಾಗಿದ್ದಕ್ಕೆ ಕುಡಿಯುವ ನೀರಿಗಾಗಿ ಜನ ಸಂಕಷ್ಟ ಎದುರಿಸುತ್ತಿದ್ದಾರೆ.ಮಳೆ ಬಾರದ್ದಕ್ಕೆ ಅಂತರ್ಜಲ ಕುಸಿತವಾಗಿ ಬೋರವೆಲ್ ಬತ್ತಿ ಬಂದ್ ಆಗಿವೆ. ಬೋರವೆಲ್ ಗಳು ಬತ್ತಿ ಹೋಗಿದ್ದಕ್ಕೆ ಜನರಿಗೆ ಕುಡಿಯುವ ನೀರು ಸಿಗುತ್ತಿಲ್ಲ. ಕೊನೆಗೆ ಪಂಚಾಯಿತಿ ಅಧಿಕಾರಿಗಳು ಟ್ಯಾಂಕರ್ ಮೂಲಕ ಅಲ್ಪ ಸ್ವಲ್ಪ ನೀರು ಪೂರೈಸುತ್ತಿದ್ದಾರೆ. ಖಾಸಗಿ ಬೋರವೆಲ್ ನಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಕಳೆದ 15 ದಿನಗಳಿಂದ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.
Latest Videos