ಹುಮ್ನಾಬಾದ್​ನಲ್ಲಿ ಕಾಂಗ್ರೆಸ್ ಎಮ್ಮೆಲ್ಸಿ ಮತ್ತು ಬಿಜೆಪಿ ಶಾಸಕ ಸಾರ್ವಜನಿಕವಾಗಿ ಕಿತ್ತಾಡಿ ಜನರಿಂದ ಛೀ ಥೂ ಅನಿಸಿಕೊಂಡರು!

|

Updated on: Dec 22, 2023 | 6:54 PM

ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳು ಭಾಗಿಯಾಗಿದ್ದಾರೆ. ಅವರಲ್ಲದೆ, ನೂರಾರು ಸಂಖ್ಯೆಯಲ್ಲಿ ಜನ ಮತ್ತು ಇಬ್ಬರೂ ಶಾಸಕರ ಬೆಂಬಲಿಗರ ಹಾಜರಿದ್ದಾರೆ. ಇವರಿಬ್ಬರು ಪಾಟೀಲ್ ಗಳನ್ನೆವುದು ಗಮನಿಸಬೇಕಾದ ಸಂಗತಿ. ಸಿದ್ದು ಪಾಟೀಲ್ ಮತ್ತು ಭೀಮರಾವ್ ಪಾಟೀಲ್ ನಡುವೆ ಮಾತಿನ ಚಕಮಕಿ ನಡೆದ ಬಳಿಕ ಇಬ್ಬರ ಬೆಂಗಲಿಗರು ತಮ್ಮ ನಾಯಕರನ್ನು ಅನುಕರಿಸುತ್ತಾ ಅನುಸರಿಸುತ್ತಾರೆ!

ಬೀದರ್: ಜನಪ್ರತಿನಿಧಿಗಳು (representatives of people) ಹೇಗಿರಬೇಕು ಅನ್ನೋದಿಕ್ಕೆ ಇಲ್ಲಿದೆ ಒಂದು ಅತ್ಯುತ್ತಮ ಉದಾಹರಣೆ. ಇಲ್ನೋಡಿ, ಹುಮ್ನಾಬಾದ್ ಬಿಜೆಪಿ ಶಾಸಕ ಸಿದ್ದು ಪಾಟೀಲ್ (Siddu Patil) ಮತ್ತು ಕಾಂಗ್ರೆಸ್ ಪಕ್ಷದಿಂದ ಬೀದರ್ ಅನ್ನು ಪ್ರತಿನಿಧಿಸುವ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ (Bhimrao Patil) ನಡುವೆ ಸಾರ್ವಜನಿಕ ಸಭೆಯಲ್ಲಿ ಕಿತ್ತಾಟ ನಡೆದಿದೆ. ಯಾವುದಕ್ಕಾಗಿ ಜಗಳ ಅಂತ ನಮಗೆ ಗೊತ್ತಾಗಿಲ್ಲ. ಹುಮ್ನಾಬಾದ್ ತಾಲ್ಲೂಕಿನ ದುಬುಗುಂಡಿ ಗ್ರಾಮದಲ್ಲಿ ಜೆಜೆಎಂ ಕಾಮಗಾರಿಯ ಭೂಮಿ ಪೂಜೆ ನಡೆಯುತ್ತಿದ್ದ ಸಮಯದಲ್ಲಿ ಈ ಮಹಾನುಭಾವರು ತೂ ತೂ ಮೈ ಮೈ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳು ಭಾಗಿಯಾಗಿದ್ದಾರೆ. ಅವರಲ್ಲದೆ, ನೂರಾರು ಸಂಖ್ಯೆಯಲ್ಲಿ ಜನ ಮತ್ತು ಇಬ್ಬರೂ ಶಾಸಕರ ಬೆಂಬಲಿಗರ ಹಾಜರಿದ್ದಾರೆ. ಇವರಿಬ್ಬರು ಪಾಟೀಲ್ ಗಳನ್ನೆವುದು ಗಮನಿಸಬೇಕಾದ ಸಂಗತಿ. ಸಿದ್ದು ಪಾಟೀಲ್ ಮತ್ತು ಭೀಮರಾವ್ ಪಾಟೀಲ್ ನಡುವೆ ಮಾತಿನ ಚಕಮಕಿ ನಡೆದ ಬಳಿಕ ಇಬ್ಬರ ಬೆಂಗಲಿಗರು ತಮ್ಮ ನಾಯಕರನ್ನು ಅನುಕರಿಸುತ್ತಾ ಅನುಸರಿಸುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ