ಸಿದ್ದರಾಮಯ್ಯನವರಿಗೆ ಬರದಿಂದ ನರಳುತ್ತಿರುವ ಜನರ ಸಂಕಟ್ಟಕ್ಕಿಂತ ತಮ್ಮ ಪ್ರತಿಷ್ಠೆ, ಅಂತಸ್ತು ಮುಖ್ಯ: ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವ
ಸಿದ್ದರಾಮಯ್ಯ ನಿಗಮ/ಮಂಡಳಿಗಳಿಗೆ ಅಧ್ಯಕ್ಷರ ಪಟ್ಟಿಯನ್ನು ಅಂತಿಮಗೊಳಿಸಿಕೊಳ್ಳಲು ಮತ್ತು ತಮ್ಮ ಹಾಗೂ ಡಿಕೆ ಶಿವಕುಮಾರ್ ನಡುವಿನ ಜಗಳವನ್ನು ಪರಿಹರಿಸಿಕೊಳ್ಳುವ ಉದ್ದೇಶ ಸಹ ಇಟ್ಟುಕೊಂಡು ದೆಹಲಿಗೆ ಬಂದಿದ್ದರು ಎಂದು ಪ್ರಲ್ಹಾದ್ ಜೋಶಿ ಹೇಳಿದರು.
ದೆಹಲಿ: ಕೇವಲ ರಾಜ್ಯ ಬಿಜೆಪಿ ನಾಯಕರಷ್ಟೇ ಅಲ್ಲ, ಕೇಂದ್ರ ಸಚಿವರಾಗಿರುವವರೂ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನಿನ್ನೆ ದೆಹಲಿಯಿಂದ ಬೆಂಗಳೂರಿಗೆ ಐಷಾರಾಮಿ ಖಾಸಗಿ ವಿಮಾನದಲ್ಲಿ ವಾಪಸ್ಸು ಹೋಗಿದ್ದರ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಮತ್ತು ಖಂಡಿಸುತ್ತಿದ್ದಾರೆ. ದೆಹಲಿಯಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿಯವರು (Pralhad Joshi), ರಾಜ್ಯದಲ್ಲಿ ತೀವ್ರ ಸ್ವರೂಪದ ಬರ (Drought) ತಾಂಡವಾಡುತ್ತಿರುವಾಗ ಮತ್ತು ದೆಹಲಿಯಿಂದ ಬೆಂಗಳೂರಿಗೆ ಬೇಕಾದಷ್ಟು ಸಂಖ್ಯೆಯಲ್ಲಿ ವಿಮಾನಗಳು ಲಭ್ಯವಿರುವಾಗಲೂ ಖಾಸಗಿ ಲಕ್ಸೂರಿಯಸ್ ವಿಮಾನದಲ್ಲಿ ವಾಪಸ್ಸು ಹೋಗಿದ್ದು ಅವರಿಗೆ ಜನರ ಸಂಕಷ್ಟಕ್ಕಿಂತ ತಮ್ಮ ಪ್ರತಿಷ್ಠೆ, ಅಂತಸ್ತು ಮುಖ್ಯ ಅನ್ನೋದು ಸಾಬೀತಾಗುತ್ತದೆ ಎಂದು ಹೇಳಿದರು. ಸಿದ್ದರಾಮಯ್ಯ ಒಂದು ನಿಯೋಗದ ಜೊತೆ ಕೇವಲ ಪ್ರಧಾನ ಮಂತ್ರಿ ಮತ್ತು ಗೃಹ ಸಚಿವರನ್ನು ಭೇಟಿಯಾಗಲು ಮಾತ್ರ ಬಂದಿರಲಿಲ್ಲ, ಅವರ ಪಕ್ಷದ ಕೆಲಸಗಳನ್ನು ತೀರಿಸಿಕೊಳ್ಳುವ ಉದ್ದೇಶವೂ ಅವರಿಗಿತ್ತು ಎಂದು ಜೋಶಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ