ವಿಕಸಿತ ಭಾರತ ಸಂಕಲ್ಪ ಯಾತ್ರೆ: ಪ್ರಲ್ಹಾದ್ ಜೋಶಿ ಭಾಷಣದ ವೇಳೆ ರಾಜ್ಯ ಸರ್ಕಾರದ ವಿರುದ್ಧ ರೈತನ ಆಕ್ರೋಶ
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ವರೂರ ಗ್ರಾಮದಲ್ಲಿ ಮಾತನಾಡಿದ ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ, ಇದೀಗ ದೇಶ ಅಭಿವೃದ್ಧಿ ಆಗಬೇಕೆಂದು ಮೋದಿ ಸಂಕಲ್ಪ ಮಾಡಿದ್ದಾರೆ. ಎಲ್ಲ ಯೋಜನೆಗಳು ಎಲ್ಲರಿಗೂ ಸಿಗಬೇಕು, ಇದು ಮೋದಿ ಗ್ಯಾರಂಟಿ ವಾಹನ ಎಂದು ಹೇಳುತ್ತಿದ್ದಂತೆ ರೈತರೊಬ್ಬರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಹುಬ್ಬಳ್ಳಿ, ಡಿ.9: ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ವರೂರ ಗ್ರಾಮದಲ್ಲಿ ಇಂದು ವಿಕಸಿತ ಭಾರತ ಸಂಕಲ್ಪ ಯಾತ್ರೆ (Viksit Bharat Sankalp Yatra) ನಡೆಯಿತು. ಯಾತ್ರೆಯಲ್ಲಿ ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಭಾಷಣ ಮಾಡುತ್ತಿದ್ದಾಗ ರೈತರೊಬ್ಬರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಘಟನೆ ನಡೆಯಿತು.
ವಿಕಸಿತ ಭಾರತ ಸಂಕಲ್ಪಯಾತ್ರೆ ಅಂದರೆ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದೆ. ಮೋದಿಯವರು ಬರುವುದಕ್ಕಿಂತ ಮುಂಚೆ ಸಾಕಷ್ಟು ಭ್ರಷ್ಟಾಚಾರ ನಡೆದಿತ್ತು. ಭ್ರಷ್ಟಾಚಾರ ಮಾಡಿ ನಮ್ಮ ದೇಶಕ್ಕೆ ಯಾವುದೇ ಸೌಲಭ್ಯ ಸಿಕ್ಕಿರಲಿಲ್ಲ. ಇದೀಗ ದೇಶ ಅಭಿವೃದ್ಧಿ ಆಗಬೇಕೆಂದು ಮೋದಿ ಸಂಕಲ್ಪ ಮಾಡಿದ್ದಾರೆ. ಎಲ್ಲ ಯೋಜನೆಗಳು ಎಲ್ಲರಿಗೂ ಸಿಗಬೇಕು, ಇದು ಮೋದಿ ಗ್ಯಾರಂಟಿ ವಾಹನ ಎಂದು ಪ್ರಲ್ಹಾದ್ ಜೋಶಿ ಹೇಳಿದರು.
ಇದನ್ನೂ ಓದಿ: ಮೋದಿ ಹೆಸರು ತೆಗೆದು ಬಯ್ಯದೇ ಇದ್ರೆ ಸಿದ್ದರಾಮಯ್ಯಗೆ ಊಟ ರುಚಿಸುವುದಿಲ್ಲ -ಪ್ರಹ್ಲಾದ್ ಜೋಶಿ
ಈ ನಡುವೆ ರೈತರೊಬ್ಬರು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದು, ರಾಜ್ಯದಲ್ಲಿ ಈಗ ಇರುವುದು ಬ್ರಹ್ಮ ರಾಕ್ಷಸ ಸರ್ಕಾರ. ಹೊತ್ತಲ್ಲದ ಹೊತ್ತಿನಲ್ಲಿ ಕರೆಂಟ್ ಕೊಡುತ್ತಾರೆ. ಯಾರಿಗೆ ಬೇಕಾಗಿತ್ತು ಈ ಗ್ಯಾರಂಟಿ, ಸಿಎಂಗೆ ವಿದ್ಯುತ್ ಕೇಳಿದರೆ ಕೊಡೋಕೆ ಆಗಲ್ಲ ಎಂದಿದ್ದಾರೆ. ಶಾಲಾ ಮಕ್ಕಳಿಗೆ ಬಸ್ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ