ಸೋಮಣ್ಣ ಹೊರಗಿನವರು, ನಾನು ಸ್ಥಳೀಯ; ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ನನಗೆ ನೀಡಬೇಕು: ಸ್ಫೂರ್ತಿ ಚಿದಾನಂದ
ಸೋಮಣ್ಣ ಹೊರಗಿನವರು, ತುಮಕೂರು ಜನ ಸ್ಥಳೀಯರಿಗೆ ಆದ್ಯತೆ ನೀಡುತ್ತಾರೆ, ಮಾಜಿ ಸಚಿವ ಜೆಸಿ ಮಾಧುಸ್ವಾಮಿ ಸಹ ಸ್ಥಳೀಯರಿಗೆ ಅವಕಾಶ ನೀಡಬೇಕೆಂಬ ವಾದ ಮಂಡಿಸುತ್ತಾರೆ ಎಂದು ಚಿದಾನಂದ ಹೇಳುತ್ತಾರೆ. ಹಿಂದುಳಿದ ವರ್ಗಕ್ಕೆ ಸೇರಿದವನಾಗಿರುವ ತನಗೆ ಸುಮಾರು 7 ಲಕ್ಷ ಮತದಾರರ ಬೆಂಬಲಿವಿದೆ, ಒಬಿಸಿ ಮತದಾರರು ತನ್ನನ್ನು ಸ್ಪಷ್ಟ ಬಹುಮತದೊಂದಿಗೆ ಗೆಲ್ಲಿಸುತ್ತಾರೆ ಎಂದು ಚಿದಾನಂದ ಹೇಳುತ್ತಾರೆ.
ದೆಹಲಿ: ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಯಾರು? ಮಿಲಿಯನ್ ಡಾಲರ್ ಪ್ರಶ್ನೆ ಅಲ್ಲದಿದ್ದರೂ ಸಾಕಷ್ಟು ಕುತೂಹಲ ಕೆರಳಿಸಿರುವ ಅಂಶ. ಹಿರಿಯ ನಾಯಕ ವಿ ಸೋಮಣ್ಣಗೆ (V Somanna) ಟಿಕೆಟ್ ನೀಡಬಹುದಾದ ವದಂತಿ ಹರಿದಾಡುತ್ತಿದ್ದರೂ, ಬೇರೆ ನಾಯಕರು ಸಹ ಟವೆಲ್ ಎಸೆಯುವ ಕೆಲಸದಲ್ಲಿ ತೊಡಗಿದ್ದಾರೆ. ಅವರಲ್ಲೊಬ್ಬರು, ಟಿವಿ9 ಕನ್ನಡ ವಾಹಿನಿಯ ದೆಹಲಿ ವರದಿಗಾರನೊಂದಿಗೆ ಮಾತಾಡುತ್ತಿರುವ ಸ್ಫೂರ್ತಿ ಚಿದಾನಂದ (Sphoorthi Chidanand). ಸೋಮಣ್ಣಗೆ ವಯಸ್ಸಾಯ್ತು ಮತ್ತು ಅವರು ಕಳೆದ 40 ವರ್ಷಗಳಲ್ಲಿ ಅಧಿಕಾರದ ಹಲವಾರು ಮಜಲುಗಳನ್ನು ಅನುಭವಿಸಿದ್ದಾರೆ, ಯುವಕರ ಬಗ್ಗೆ ಅವರು ಯೋಚನೆ ಮಾಡಬೇಕು ಎಂದು ಹೇಳುವ ಚಿದಾನಂದ ಇಂದು ದೆಹಲಿಯಲ್ಲಿ ಪಕ್ಷದ ವರಿಷ್ಠರಾದ ರಾಧಾಮೋಹನ್, ಬಿಎಲ್ ಸಂತೋಷ್ (BL Santosh) ಮತ್ತು ಅರುಣ್ ಸಿಂಗ್ ಮೊದಲಾದವರನ್ನು ಭೇಟಿಯಾಗಿ ತಮ್ಮ ದಾವೇದಾರಿಕೆಯನ್ನು ಹೇಳಿಕೊಂಡಿದ್ದಾರೆ. ಸೋಮಣ್ಣ ಹೊರಗಿನವರು, ತುಮಕೂರು ಜನ ಸ್ಥಳೀಯರಿಗೆ ಆದ್ಯತೆ ನೀಡುತ್ತಾರೆ, ಮಾಜಿ ಸಚಿವ ಜೆಸಿ ಮಾಧುಸ್ವಾಮಿ ಸಹ ಸ್ಥಳೀಯರಿಗೆ ಅವಕಾಶ ನೀಡಬೇಕೆಂಬ ವಾದ ಮಂಡಿಸುತ್ತಾರೆ ಎಂದು ಚಿದಾನಂದ ಹೇಳುತ್ತಾರೆ. ಹಿಂದುಳಿದ ವರ್ಗಕ್ಕೆ ಸೇರಿದವನಾಗಿರುವ ತನಗೆ ಸುಮಾರು 7 ಲಕ್ಷ ಮತದಾರರ ಬೆಂಬಲಿವಿದೆ, ಒಬಿಸಿ ಮತದಾರರು ತನ್ನನ್ನು ಸ್ಪಷ್ಟ ಬಹುಮತದೊಂದಿಗೆ ಗೆಲ್ಲಿಸುತ್ತಾರೆ ಎಂದು ಚಿದಾನಂದ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ