Bengaluru News: ಚಲಿಸುತ್ತಿದ್ದ ಕಾರಿಗೆ ದಿಢೀರ್ ಅಡ್ಡ ಬಂದ ಬಾಲಕ; ಪವಾಡ ಸದೃಶವಾಗಿ ಪಾರು, ವಿಡಿಯೋ ವೈರಲ್
ಚಲಿಸುತ್ತಿದ್ದ ಕಾರಿಗೆ ಬಾಲಕನೊಬ್ಬ ದಿಢೀರ್ ಅಡ್ಡ ಬಂದಿದ್ದಾನೆ. ಈ ವೇಳೆ ಕಾರು ಚಾಲಕನ ಸಮಯಪ್ರಜ್ಞೆಯಿಂದ ಬಾಲಕ ಪವಾಡ ಸದೃಶವಾಗಿ ಪಾರಾಗಿರುವ ಘಟನೆ ನಗರದ ವರ್ತೂರು ರಸ್ತೆಯಲ್ಲಿ ನಡೆದಿದೆ.
ಬೆಂಗಳೂರು: ಚಲಿಸುತ್ತಿದ್ದ ಕಾರಿಗೆ ಬಾಲಕನೊಬ್ಬ ದಿಢೀರ್ ಅಡ್ಡ ಬಂದಿದ್ದಾನೆ. ಈ ವೇಳೆ ಕಾರು ಚಾಲಕನ ಸಮಯಪ್ರಜ್ಞೆಯಿಂದ ಬಾಲಕ ಪವಾಡ ಸದೃಶವಾಗಿ ಪಾರಾಗಿರುವ ಘಟನೆ ನಗರದ ವರ್ತೂರು (Varthur) ರಸ್ತೆಯಲ್ಲಿ ನಡೆದಿದೆ. ಇನ್ನು ಬಾಲಕನಿಗೆ ಕಾರು ಡಿಕ್ಕಿ ಹೊಡೆಯುವ ದೃಶ್ಯ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೌದು ವಿಡಿಯೋದಲ್ಲಿ ಬಾಲಕ ಚಲಿಸುತ್ತಿದ್ದ ಕಾರುಗಳ ನಡುವೆ ರಸ್ತೆ ದಾಟಲು ಯತ್ನಿಸಿದ್ದಾನೆ. ತನ್ನ ಎಡಬದಿಯಿಂದ ಬಲಗಡೆ ಹೋಗುವಾಗ ಕಾರು ಬಾಲಕನಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಬಾಲಕ ರಸ್ತೆ ಮೇಲೆ ಬೀಳುತ್ತಿದ್ದಂತೆ ಕಾರು ಚಾಲಕ ನಿಲ್ಲಿಸಿದ್ದಾನೆ. ಬಳಿಕ ಪ್ರಾಣಾಪಾಯದಿಂದ ಪಾರಾದ ಬಾಲಕ ತಾನೇ ಎದ್ದು ಹೋಗಿದ್ದಾನೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ