ಹಿರಿಯ ಮಹಿಳೆಯೊಬ್ಬರ ಚಿನ್ನದಸರ ಕಿತ್ತುಕೊಂಡು ಹೋಗುವ ಸರಗಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆ

|

Updated on: Aug 23, 2024 | 4:03 PM

ಸರಗಳ್ಳರು ಸಾಮಾನ್ಯವಾಗಿ ಹಿರಿಯ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಾರೆ. ಚಿನ್ನದ ಸರ ಅಥವಾ ಮಾಂಗಲ್ಯ ಸರವನ್ನು ಹಾರಿಸಿದ ಬಳಿಕ ಅಸಹಾಯಕ ಮಹಿಳೆಯರು ಏನಾಯ್ತು ಅಂತ ಗೊತ್ತು ಮಾಡಿಕೊಳ್ಳುವಷ್ಟರಲ್ಲಿ ಚೈನ್ ಸ್ನ್ಯಾಚರ್ ಪರಾರಿಯಾಗಿ ಬಿಟ್ಟಿರುತ್ತಾನೆ. ನಿರ್ಜನ ಪ್ರದೇಶಗಳಲ್ಲಿ ಓಡಾಡುವಾಗ ಮಹಿಳೆಯರು ಎಚ್ಚರದಿಂದಿರಬೇಕು.

ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕೆ ಎಲ್ಲ ಸರ್ಕಾರಗಳು ಕಾನೂನು ಸುವ್ಯವಸ್ಥೆಯ ಬಗ್ಗೆ ಕೊಚ್ಚಿಕೊಳ್ಳುತ್ತಾ ಅಪರಾಧ ಪ್ರಮಾಣ ಕಡಿಮೆ ಮಾಡಿರುವುದಾಗಿ ಹೇಳುತ್ತವೆ. ಆದರೆ ಗ್ರೌಂಡ್ ರಿಯಾಲಿಟಿ ಅದಕ್ಕೆ ತದ್ವಿರುದ್ಧವಾಗಿರುತ್ತದೆ. ಬೆಂಗಳೂರು ನಗರದಲ್ಲಿ ಸರಗಳ್ಳರ ಹಾವಳಿ ಯಾವ ಸರ್ಕಾರದ ಅವಧಿಯಲ್ಲೂ ಕಡಿಮೆಯಾಗಿಲ್ಲ. ಹಿಂದೆ ಅಲೋಕ ಕುಮಾರ್ ನಗರ ಪೊಲೀಸ್ ಆಯುಕ್ತರಾಗಿದ್ದಾಗ ಸರಗಳ್ಳರು ಮತ್ತು ನಗರದ ರೌಡಿಗಳ ಹುಟ್ಟಡಗಿಸಿದ್ದರು. ನಗರದಲ್ಲಿ ಇವತ್ತು ಬೆಳಗ್ಗೆ ನಡೆದ ಸರಗಳ್ಳತನದ ಪ್ರಕರಣವನ್ನು ಗಮನಿಸಿ. ಬಡಾವಣೆಯೊಂದರಲ್ಲಿ ಹಿರಿಯ ಮಹಿಳೆಯೊಬ್ಬರು ಅಂಗಡಿಯಿಂದ ಪ್ರಾಯಶಃ ಹಾಲು ಖರೀದಿಸಿ ಮನೆಗೆ ಹಿಂತಿರುಗುವಾಗ ಅವರ ಎದುರಿನಿಂದ ಪೂರ್ತಿ ಮುಖ ಮುಚ್ಚುವ ಹಾಗೆ ಹೆಲ್ಮೆಟ್ ಧರಿಸಿ ಡೀಸೆಂಟಾಗೇ ಕಾಣುವ ಯುವಕನೊಬ್ಬ ಸ್ಕೂಟರ್ ಓಡಿಸಿಕೊಂಡು ಬಂದು ಮಹಿಳೆಯ ಕತ್ತಲ್ಲಿರುವ ಚಿನ್ನದ ಸರವನ್ನು ಕಿತ್ತಿಕೊಂಡು ಯಾವುದೇ ಅವಸರ ತೋರದೆ ಹೋಗುತ್ತಾನೆ. ಮಹಿಳೆ ತನ್ನ ಹಿಂದೆ ಓಡಿ ಬರಲಾರರು ಅಂತ ಅವನಿಗೆ ಗೊತ್ತು ಮತ್ತು ರಸ್ತೆ ಕೂಡ ಹೆಚ್ಚು ಕಡಿಮೆ ನಿರ್ಜನವಾಗಿದೆ. ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಆನೇಕಲ್ ತಾಲ್ಲೂಕಿನಲ್ಲಿ ಮುಂದುವರಿದ ಸರಗಳ್ಳತನ; ಕ್ಷಣಾರ್ಧಲ್ಲಿ ಕದ್ದು ಪರಾರಿಯಾದ ಖದೀಮರು

Published On - 3:59 pm, Fri, 23 August 24

Follow us on