Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ ತಲುಪಿದ ಸಿದ್ದರಾಮಯ್ಯ, ಶಿವಕುಮಾರ್ ಮತ್ತು ಪರಮೇಶ್ವರ್; ವರಿಷ್ಠರ ಜೊತೆ ಸಭೆ ಆರಂಭ

ದೆಹಲಿ ತಲುಪಿದ ಸಿದ್ದರಾಮಯ್ಯ, ಶಿವಕುಮಾರ್ ಮತ್ತು ಪರಮೇಶ್ವರ್; ವರಿಷ್ಠರ ಜೊತೆ ಸಭೆ ಆರಂಭ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 23, 2024 | 5:59 PM

ಈಗಾಗಲೇ ವರದಿಯಾಗಿರುವಂತೆ ರಾಜ್ಯ ಸಚಿವ ಸಂಪುಟ, ಕಾರ್ಯಕಾರಿಣಿ ಸಮಿತಿ ಮತ್ತು ಹೈಕಮಾಂಡ್ ಸಿದ್ದರಾಮಯ್ಯನವರ ಬೆನ್ನಿಗೆ ನಿಂತಿವೆ ಮತ್ತು ಡಿಕೆ ಶಿವಕುಮಾರ್ ಸಹ ಮುಡಾ ಹಗರಣ ಸದ್ದು ಮಾಡಲಾರಂಭಿಸಿದ ನಂತರ ಸಿದ್ದರಾಮಯ್ಯ ಪರವಾಗಿ ಮಾತಾಡುತ್ತ ಅವರಲ್ಲಿ ನೈತಿಕ ಸ್ಥೈರ್ಯ ತುಂಬುತ್ತಿದ್ದಾರೆ.

ದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಗೃಹ ಸಚಿವ ಜಿ ಪರಮೇಶ್ವರ್ ದೆಹಲಿ ತಲುಪಿದ್ದಾರೆ. ರಾಷ್ಟ್ರದ ರಾಜಧಾನಿಯಲ್ಲಿರುವ ಕರ್ನಾಟಕ ಭವನಕ್ಕೆ ಅವರು ವಿಮಾನ ನಿಲ್ದಾಣದಿಂದ ಕಾರಲ್ಲಿ ಆಗಮಿಸುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಅವರಿಗಿಂತ ಮೊದಲೇ ದೆಹಲಿ ತಲುಪಿದ್ದ ರಾಜ್ಯದ ಕೆಲ ನಾಯಕರು, ವಿಧಾನ ಪರಿಷತ್ ಸದಸ್ಯರು ಕರ್ನಾಟಕ ಭವನದ ಬಳಿ ಮುಖ್ಯಮಂತ್ರಿಯವರನ್ನು ಸ್ವಾಗತಿಸಿದರು. ಅವರನ್ನೆಲ್ಲ ನೋಡಿದ ಸಿದ್ದರಾಮಯ್ಯ, ಚೆನ್ನಾಗಿದ್ದೀರೇನ್ರಯ್ಯ? ಅಂತ ಕೇಳಿದ್ದು ಗಮನಿಸಿದರೆ ಅವರೆಲ್ಲ ಕೆಲ ದಿನಗಳಿಂದ ದೆಹಲಿಯಲ್ಲಿ ಇದ್ದಾರೇನೋ ಅಂತ ಭಾಸವಾಗುತ್ತದೆ. ಸಿದ್ದರಾಮಯ್ಯ ಮತ್ತು ಅವರೊಂದಿಗೆ ಇಂದು ದೆಹಲಿಗೆ ತೆರಳಿದ ನಾಯಕರು ಸಾಯಂಕಾಲ ಪಕ್ಷದ ವರಿಷ್ಠರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಮುಡಾ ಹಗರಣದಲ್ಲಿ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮೊದಲಿಗೆ ಶೋಕಾಸ್ ನೋಟೀಸ್ ನಂತರ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದು ಮಾತುಕತೆಯ ಪ್ರಮುಖ ಅಂಶವಾಗಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ರಾಜ್ಯಪಾಲರು ಸಂವಿಧಾನಕ್ಕೆ ಧಕ್ಕೆಯಾಗುವಂತೆ ವರ್ತಿಸಿದರೆ ರಾಷ್ಟ್ರಪತಿ ಮಧ್ಯಪ್ರವೇಶಿಸಬೇಕಾಗುತ್ತದೆ: ತನ್ವೀರ್ ಸೇಟ್