ಎಐಸಿಸಿ ಜೊತೆ ಇವತ್ತಿನ ಸಭೆಯ ಮಹತ್ವವನ್ನು ರಾಜ್ಯ ಕಾಂಗ್ರೆಸ್ ನಾಯಕರು ಅಂಡರ್ ಪ್ಲೇ ಮಾಡಿರುವರೇ?

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಗೃಹ ಸಚಿವ ಜಿ ಪರಮೇಶ್ವರ್ ಜೊತೆ ಎಐಸಿಸಿ ನಡೆಸುತ್ತಿರುವ ಸಭೆಗೆ ಹೆಚ್ಚಿನ ಮಹತ್ವ ಇದ್ದರೂ ರಾಜ್ಯ ಕಾಂಗ್ರೆಸ್ ಅದನ್ನು ಅಂಡರ್ ಪ್ಲೇ ಮಾಡುತ್ತಿದೆ ಅಂತ ಅನಿಸದಿರದು. ಹೈಕಮಾಂಡ್ ಮುಖ್ಯಮಂತ್ರಿ ಜೊತೆ ನಿಂತಿದೆ ಅಂತ ಶಿವಕುಮಾರ್ ಹೇಳಿದ್ದರೂ ಅನುಮಾನದ ಎಳೆ ಕನ್ನಡಿಗರ ಮನದಲ್ಲಿ ಮನೆ ಮಾಡಿದೆ.

ಎಐಸಿಸಿ ಜೊತೆ ಇವತ್ತಿನ ಸಭೆಯ ಮಹತ್ವವನ್ನು ರಾಜ್ಯ ಕಾಂಗ್ರೆಸ್ ನಾಯಕರು ಅಂಡರ್ ಪ್ಲೇ ಮಾಡಿರುವರೇ?
|

Updated on: Aug 23, 2024 | 6:44 PM

ದೆಹಲಿ: ಈಗಾಗಲೇ ವರದಿಯಾಗಿರುವ ಹಾಗೆ ರಾಷ್ಟ್ರದ ರಾಜಧಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಹುಲ್ ಗಾಂಧಿ ಮತ್ತು ಪಕ್ಷದ ಇತರ ರಾಷ್ಟ್ರೀಯ ಪ್ರಮುಖ ಪದಾಧಿಕಾರಿಗಳ ಜೊತೆ ರಾಜ್ಯದ ಕಾಂಗ್ರೆಸ್ ನಾಯಕರ ಮೀಟಿಂಗ್ ಶುರುವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಗೃಹ ಸಚಿವ ಜಿ ಪರಮೇಶ್ವರ್ ಮತ್ತು ರಾಜ್ಯದ ಇತರ ಕೆಲ ನಾಯಕರು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಕಚೇರಿ ತಲುಪಿದ ಸ್ವಲ್ಪ ಹೊತ್ತಲ್ಲೇ ರಾಹುಲ್ ಗಾಂಧಿಯವರು ಅಲ್ಲಿಗೆ ಆಗಮಿಸುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಕಚೇರಿ ಮುಂದೆ ನೆರೆದಿದ್ದ ಕೆಲ ಅಭಿಮಾನಿಗಳು ರಾಹುಲ್ ಗಾಂಧಿ ಕೀ ಜೈ ಅಂತ ಕೂಗಿ ತಮ್ಮ ಭಕ್ತಿ ಪ್ರದರ್ಶಿಸಿದರು. ಮುಡಾ ಹಗರಣ ಬೆಳಕಿಗೆ ಬಂದ ಮೇಲೆ ರಾಜ್ಯ ಸರ್ಕಾರದ ಬಗ್ಗೆ ವಿರೋಧ ಪಕ್ಷದ ನಾಯಕರು ಹಲವಾರು ಸಂಗತಿಗಳನ್ನು ಮಾಧ್ಯಮಗಳ ಮುಂದೆ ಹೇಳುತ್ತಿದ್ದಾರೆ. ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಸ್ಥಾನದಿಂದ ಸರಿಸಿ ಅವರ ಸ್ಥಾನದಲ್ಲಿ ಬೇರೆಯವನ್ನು ಎಐಸಿಸಿ ನೇಮಿಸಲಿದೆ ಎಂದು ಹರಡಿರುವ ವದಂತಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಜೀವನಪರ್ಯಂತ ವಿರೋಧ ಪಕ್ಷದಲ್ಲಿ ಕೂರಲು ರೆಡಿಯಾಗಿ; ರಾಹುಲ್ ಗಾಂಧಿ ವಿರುದ್ಧ ಕಂಗನಾ ರಣಾವತ್ ವಾಗ್ದಾಳಿ

Follow us
ಕೆಲವು ಅನುಮಾನವಿತ್ತು, ಕೇಳಿದ್ದೇನೆ: ದರ್ಶನ್ ಭೇಟಿ ಬಳಿಕ ಲಾಯರ್ ಮಾತು
ಕೆಲವು ಅನುಮಾನವಿತ್ತು, ಕೇಳಿದ್ದೇನೆ: ದರ್ಶನ್ ಭೇಟಿ ಬಳಿಕ ಲಾಯರ್ ಮಾತು
ಬಳ್ಳಾರಿ ಜೈಲಿನಲ್ಲಿ ಸೊರಗಿದ ದರ್ಶನ್; ತಾಯಿ ಬಾರದೇ ಇರುವುದಕ್ಕೆ ಬೇಸರ
ಬಳ್ಳಾರಿ ಜೈಲಿನಲ್ಲಿ ಸೊರಗಿದ ದರ್ಶನ್; ತಾಯಿ ಬಾರದೇ ಇರುವುದಕ್ಕೆ ಬೇಸರ
ಮಂಡ್ಯ ಗಣೇಶ ಮೆರವಣಿಗೆ ವೇಳೆ ಗಲಾಟೆ ವಿಚಾರ: ಸಚಿವ ಜಮೀರ್ ಹೇಳಿದ್ದೇನು?
ಮಂಡ್ಯ ಗಣೇಶ ಮೆರವಣಿಗೆ ವೇಳೆ ಗಲಾಟೆ ವಿಚಾರ: ಸಚಿವ ಜಮೀರ್ ಹೇಳಿದ್ದೇನು?
ಪ್ಯಾರಾಲಿಂಪಿಕ್ಸ್ ಸ್ಪರ್ಧಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಪ್ಯಾರಾಲಿಂಪಿಕ್ಸ್ ಸ್ಪರ್ಧಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಹೊಸದಾಗಿ ಸೇರ್ಪಡೆಯಾದ ಬಿಎಂಟಿಸಿ ಬಸ್​ಗಳ ವಿಶೇಷತೆ ಏನೇನು ಗೊತ್ತಾ?
ಹೊಸದಾಗಿ ಸೇರ್ಪಡೆಯಾದ ಬಿಎಂಟಿಸಿ ಬಸ್​ಗಳ ವಿಶೇಷತೆ ಏನೇನು ಗೊತ್ತಾ?
ಗಣೇಶ ಮೆರವಣಿಗೆ ವೇಳೆ ಕಲ್ಲೆಸೆತ: ಪ್ರತ್ಯಕ್ಷದರ್ಶಿಗಳಿಂದ ವಿವರವಾದ ಮಾಹಿತಿ
ಗಣೇಶ ಮೆರವಣಿಗೆ ವೇಳೆ ಕಲ್ಲೆಸೆತ: ಪ್ರತ್ಯಕ್ಷದರ್ಶಿಗಳಿಂದ ವಿವರವಾದ ಮಾಹಿತಿ
ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, ನಾಗಮಂಗಲದಲ್ಲಿ ಹೇಗಿದೆ ಈಗ ಪರಿಸ್ಥಿತಿ?
ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, ನಾಗಮಂಗಲದಲ್ಲಿ ಹೇಗಿದೆ ಈಗ ಪರಿಸ್ಥಿತಿ?
ಮಂಡ್ಯ ಹಿಂಸಾಚಾರ: ನಾಗಮಂಗಲ ಘಟನೆ ಬಗ್ಗೆ ಎಸ್​ಪಿ ಹೇಳಿದ್ದೇನು ನೋಡಿ
ಮಂಡ್ಯ ಹಿಂಸಾಚಾರ: ನಾಗಮಂಗಲ ಘಟನೆ ಬಗ್ಗೆ ಎಸ್​ಪಿ ಹೇಳಿದ್ದೇನು ನೋಡಿ
‘ಕಿರುಕುಳ ಆದಾಗಲೇ ಹೇಳಿ, ಐದು ವರ್ಷ ಬಿಟ್ಟೇಕೆ ಬರುತ್ತೀರಿ’; ನಟಿಯ ಪ್ರಶ್ನೆ
‘ಕಿರುಕುಳ ಆದಾಗಲೇ ಹೇಳಿ, ಐದು ವರ್ಷ ಬಿಟ್ಟೇಕೆ ಬರುತ್ತೀರಿ’; ನಟಿಯ ಪ್ರಶ್ನೆ
ಸಾವಿನ ಮನೆಯಲ್ಲಿ ಪಾಲಿಸಬೇಕಾದ ಶಿಷ್ಟಾಚಾರ
ಸಾವಿನ ಮನೆಯಲ್ಲಿ ಪಾಲಿಸಬೇಕಾದ ಶಿಷ್ಟಾಚಾರ