ಡಾ.ಜಿ ಪರಮೇಶ್ವರ ಬರ್ತ್​ಡೇ ಆಚರಣೆ ವೇಳೆ ಉರುಳಿದ ತೆಂಗಿನಮರ; ತಪ್ಪಿದ ಅನಾಹುತ

|

Updated on: Aug 06, 2024 | 5:49 PM

ಗೃಹ ಸಚಿವ ಡಾ‌.ಜಿ ಪರಮೇಶ್ವರ ಅವರು ಇಂದು ತಮ್ಮ 73 ನೇ ಹುಟ್ಟು ಹಬ್ಬವನ್ನು ತುಮಕೂರಿನಲ್ಲಿ ಆಚರಿಸಿಕೊಂಡಿದ್ದಾರೆ. ಅದರಂತೆ ಬೆಂಗಳೂರಿನ ಸದಾಶಿವನಗರದಲ್ಲಿರುವ ಗೃಹಸಚಿವರ ಸರ್ಕಾರಿ ನಿವಾಸದಲ್ಲಿ ಡಾ.ಪರಮೇಶ್ವರ ಅವರ ಸ್ವಾಗತಕ್ಕಾಗಿ ನೂರಾರು ಅಭಿಮಾನಿಗಳು ಕಾದುಕೊಂಡಿದ್ದರು. ಈ ವೇಳೆ ಮಳೆ, ಗಾಳಿಗೆ ಬುಡ ಸಮೇತ ತೆಂಗಿನಮರ ಟೆಂಟ್ ಮೇಲೆ ಉರುಳಿದೆ.

ಬೆಂಗಳೂರು, ಆ.06: ಇಂದು ಗೃಹ ಸಚಿವ ಡಾ‌.ಜಿ ಪರಮೇಶ್ವರ ಅವರು ತಮ್ಮ 73 ನೇ ಹುಟ್ಟು ಹಬ್ಬವನ್ನು ತುಮಕೂರಿನಲ್ಲಿ ಆಚರಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಬೆಂಗಳೂರಿನ ಸದಾಶಿವನಗರದಲ್ಲಿರುವ ಗೃಹಸಚಿವ ಡಾ.ಜಿ.ಪರಮೇಶ್ವರ(DR. G Parameshwara) ಅವರ ಸರ್ಕಾರಿ ನಿವಾಸದಲ್ಲಿ ಅನಾಹುತವೊಂದು ತಪ್ಪಿದೆ. ಹೌದು, ಡಾ.ಪರಮೇಶ್ವರ ಅವರ ಹುಟ್ಟುಹಬ್ಬ ಆಚರಣೆ ವೇಳೆ ಮಳೆ, ಗಾಳಿಗೆ ಬುಡ ಸಮೇತ ತೆಂಗಿನಮರ ಟೆಂಟ್ ಮೇಲೆ ಉರುಳಿದೆ. ಡಾ.ಪರಮೇಶ್ವರ್ ಸ್ವಾಗತಕ್ಕಾಗಿ ನೂರಾರು ಅಭಿಮಾನಿಗಳು ಕಾದುಕೊಂಡಿದ್ದರು. ಈ ವೇಳೆ ಜರ್ಮನ್ ಟೆಂಟ್ ಮೇಲೆ ತೆಂಗಿನ ಮರ ಬಿದ್ದಿದ್ದು, ಅಭಿಮಾನಿಗಳು, ಪೊಲೀಸ್ ಸಿಬ್ಬಂದಿ ಕೆಲಕಾಲ ಆತಂಕಕ್ಕೊಳಗಾಗಿದ್ದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ