ಅರಿಶಿನಗುಂಡಿ ಜಲಪಾತದಲ್ಲಿ ಒಂದು ಸಾವು ಸಂಭವಿಸಿದರೂ ಎಚ್ಚೆತ್ತುಕೊಳ್ಳದ ಯುವಕರು; ಸೇತುವೆ ಮೇಲೆ ಹುಚ್ಚಾಟ
ಉಡುಪಿಯ ಅರಿಶಿನಗುಂಡಿ ಜಲಪಾತದಕ್ಕೆಂದು ಪ್ರವಾಸಕ್ಕೆ ತೆರಳಿದ್ದ ಭದ್ರಾವತಿ ಮೂಲದ ಶರತ್ ಎಂಬಾತ ಕಾಲುಜಾರಿ ನೀರಿಗೆ ಬಿದ್ದು ಸಾವನ್ನಪ್ಪಿದ್ದ. ಇಂತಹ ಘಟನೆ ನಡೆದರೂ ಎಚ್ಚೆತ್ತುಕೊಳ್ಳದ ಯುವಕರು, ನಿರ್ಮಾಣ ಹಂತದ ಸೇತುವೆ ಮೇಲೆ ಹುಚ್ಚಾಟ ಮಾಡುತ್ತಿದ್ದಾರೆ.
ಚಿಕ್ಕಮಗಳೂರು, ಆ.1: ಉಡುಪಿಯ ಅರಿಶಿನಗುಂಡಿ ಜಲಪಾತ(Arsinagundi Falls)ಕ್ಕೆಂದು ಪ್ರವಾಸಕ್ಕೆ ತೆರಳಿದ್ದ ಭದ್ರಾವತಿ ಮೂಲದ ಶರತ್ ಎಂಬಾತ ಜು.24 ರಂದು ಬಂಡೆಯ ಮೇಲಿಂದ ಕಾಲುಜಾರಿ ಹರಿಯುವ ನೀರಿಗೆ ಬಿದ್ದಿದ್ದ. ಈ ಘಟನೆ ಸಂಬಂಧಪಟ್ಟಂತೆ ಒಂದು ವಾರದ ಬಳಿಕ ಆತನ ಮೃತದೇಹ ಬಿದ್ದ ಜಾಗದಿಂದ 200 ಮೀಟರ್ ದೂರದಲ್ಲಿ ಸಿಕ್ಕಿತ್ತು. ಇಂತಹ ಘಟನೆ ನಡೆದರೂ ಎಚ್ಚೆತ್ತಕೊಳ್ಳದ ಯುವಕರು, ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕೊಪ್ಪ ತಾಲೂಕಿನ ಅತ್ತಿಕುಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ತುಂಗಾ ನದಿ ಮೇಲಿನ ನಿರ್ಮಾಣ ಹಂತದ ಅಬ್ಬಿಕಲ್ಲು ಗ್ರಾಮದ ಸೇತುವೆ ಮೇಲೆ ಯುವಕರು ಪೋಟೋಗಾಗಿ ಹುಚ್ಚಾಟ ಮಾಡುತ್ತಿದ್ದಾರೆ. ಸ್ವಲ್ಪ ಯಾಮಾರಿದ್ರೂ ಯುವಕರು ಕೆಳಗೆ ಬೀಳುವ ಸಾಧ್ಯತೆಯಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us