ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾವನೆ ವ್ಯಕ್ತಪಡಿಸಲು ಅವಕಾಶವಿದೆಯೇ ಹೊರತು ಪ್ರಚೋದಿಸಲು ಅಲ್ಲ: ಡಾ ಸಿಎನ್ ಅಶ್ವಥ್ ನಾರಾಯಣ
ನಾವು ವ್ಯಕ್ತಪಡಿಸುವ ಭಾವನೆ ಸಂವಿಧಾನದ ಚೌಕಟ್ಟಿನೊಳಗಿರಬೇಕು, ಬೇರೆಯವರ ಭಾವನೆ ಕೆರಳಿಸುವಂತಿರಬಾರದು ಎಂದು ಬೆಂಗಳೂರಲ್ಲಿ ಮಂಗಳವಾರ ಹೇಳಿದ ಸಚಿವ ಡಾ ಸಿಎನ್ ಅಶ್ವಥ್ ನಾರಾಯಣ ಹೇಳಿದರು.
ಬೆಂಗಳೂರು: ಭಾರತ ಒಂದು ಪ್ರಜಾಪ್ರಭುತ್ವ (democratic) ರಾಷ್ಟ್ರವಾಗಿದೆ, ದೇಶದಲ್ಲಿ ವಾಸವಾಗಿರುವ ಪ್ರತಿಯೊಬ್ಬ ವ್ಯಕ್ತಿಗೆ ತನ್ನ ಭಾವನೆಯನ್ನು ವ್ಯಕ್ತಪಡಿಸುವ ಹಕ್ಕಿದೆ. ಆದರೆ ನಾವು ವ್ಯಕ್ತಪಡಿಸುವ ಭಾವನೆ ಸಂವಿಧಾನದ (Constitution) ಚೌಕಟ್ಟಿನೊಳಗಿರಬೇಕು, ಬೇರೆಯವರ ಭಾವನೆ ಕೆರಳಿಸುವಂತಿರಬಾರದು ಎಂದು ಬೆಂಗಳೂರಲ್ಲಿ ಮಂಗಳವಾರ ಹೇಳಿದ ಸಚಿವ ಡಾ ಸಿಎನ್ ಅಶ್ವಥ್ ನಾರಾಯಣ ಅವರು ಪರೋಕ್ಷವಾಗಿ ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಅವರನ್ನು ತಿವಿದರು.