ಪಾಶ್ ಶೋರೂಮಲ್ಲಿ ಡೋಂಗಿ ಬಾಬಾನಿಂದ ಮೋಸಹೋದ ಯುವಕ, ವಾಚ್ ಮತ್ತು ಹಣದೊಂದಿಗೆ ಬಾಬಾ ಪರಾರಿ

ಅರುಣ್​ ಕುಮಾರ್​ ಬೆಳ್ಳಿ

Updated on: Aug 02, 2025 | 2:38 PM

ಇದು ಬೆಂಗಳೂರಿನ ಹೊರವಲಯದ ಪ್ರದೇಶ ಆನೇಕಲ್​ನಲ್ಲಿ ನಡೆದಿರುವ ಘಟನೆ. ನಗರಪ್ರದೇಶಗಳಲ್ಲೂ ತನ್ನಂಥವರನ್ನು ನಂಬುವ ಜನಕ್ಕೆ ಕೊರತೆಯಿಲ್ಲ ಅಂತ ಫೇಕ್ ಬಾಬಾಗೆ ಚೆನ್ನಾಗಿ ಗೊತ್ತು. ಸಂತೋಷ್​ನನ್ನು ಅವನು ಎಷ್ಟು ಸಲೀಸಾಗಿ ಯಾಮಾರಿಸುತ್ತಾನೆ ಅಂತ ಗಮನಿಸಿ. ಅವನನ್ನು ಸೆರೆ ಹಿಡಿಯಲು ಪೊಲೀಸರಿಗೇನೂ ಕಷ್ಟವಾಗಲಾರದು. ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯ ಅವರಿಗೆ ಖಂಡಿತ ನೆರವಾಗುತ್ತದೆ.

ಆನೇಕಲ್ (ಬೆಂಗಳೂರು), ಆಗಸ್ಟ್ 2: ಮೋಸ ಹೋಗುವವರು ಇರೋವರೆಗೆ ಮೋಸ ಮಾಡುವವರು ತಮ್ಮ ಕಾಯಕದಲ್ಲಿ ಯಶ ಕಾಣುತ್ತಾರೆ ಅಂತ ನಮ್ಮಲ್ಲಿ ಹೇಳೋದುಂಟು. ಇಲ್ನೋಡಿ, 21 ನೇ ಶತಮಾನದಲ್ಲಿ ಜೀವಿಸುತ್ತಿರುವ, ಲ್ಯಾಪ್ ಟಾಪ್ ಮುಂದಿಟ್ಟುಕೊಂಡು ಐಮ್ಯಾಕ್ಸ್​ನಂಥ ಸ್ಥಳದಲ್ಲಿ ಕೆಲಸ ಮಾಡುವ ಸಂತೋಷ್ ಹೆಸರಿನ ಯುವಕನೊಬ್ಬ ಇಬ್ಬ ಡೋಂಗಿ ಬಾಬಾನಿಂದ ಮೋಸ ಹೋಗುವ ದೃಶ್ಯವೊಂದು ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆ. ಸಂತೋಷ್ ಈ ಬಾಬಾನಿಗೆ ತನ್ನು ದುಬಾರಿ ವಾಚ್ ಅಲ್ಲದೆ ಕ್ಯಾಶ್ ಕೌಂಟರಲ್ಲಿದ್ದ ₹1,500 ನಗದನ್ನೂ ಕೊಟ್ಟು ಕೃತಾರ್ಥ ಭಾವ ತಳೆಯುತ್ತಾನೆ. ಬಾಬಾ ಮಾಡುವ ಬ್ಲ್ಯಾಕ್ ಮ್ಯಾಜಿಕ್ ಗೆ ಕ್ಲೀನ್ ಬೋಲ್ಡ್ ಅಗುವ ಯುವಕ ಕಳ್ಳ ಬಾಬಾ ಹೇಳೋದಿಕ್ಕೆಲ್ಲ ತಲೆಯಾಡಿಸುತ್ತಾನೆ ಮತ್ತು ಅನೂಚಾನಾಗಿ ಪಾಲಿಸುತ್ತಾನೆ.

ಇದನ್ನೂ ಓದಿ:  Video: ರೋಗ ವಾಸಿ ಮಾಡೋ ನೆಪದಲ್ಲಿ ಯುವತಿಯ ಸ್ತನ, ಸೊಂಟ ಮುಟ್ಟಿದ ಡೋಂಗಿ ಬಾಬಾ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.