Video: ರೋಗ ವಾಸಿ ಮಾಡೋ ನೆಪದಲ್ಲಿ ಯುವತಿಯ ಸ್ತನ, ಸೊಂಟ ಮುಟ್ಟಿದ ಡೋಂಗಿ ಬಾಬಾ

ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಗುಡ್ ಟಚ್ ಯಾವುದು ಬ್ಯಾಡ್ ಟಚ್ ಯಾವುದು ಎಂಬುದರ ಬಗ್ಗೆ ಗೊತ್ತೇ ಇರುತ್ತದೆ. ಇಲ್ಲೊಬ್ಬ ಡೊಂಗಿ ಬಾಬಾ ರೋಗ ವಾಸಿ ಮಾಡೋ ನೆಪದಲ್ಲಿ ಯುವತಿಯ ಮೈ ಮುಟ್ಟಿದ್ದು, ಇದು ಗುಡ್ ಟಚ್ ಅಲ್ಲಾ ಅಂತ ಗೊತ್ತಾಗಿ ಯುವತಿ ಮೈ ಮುಟ್ಬೇಡಿ ಅಂದ್ರೂ ಆತ ಯುವತಿಯ ಸ್ತನ ಮತ್ತು ಸೊಂಟವನ್ನು ಮುಟ್ಟಿದ್ದಾನೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗಿದ್ದು, ಮಗಳಿಗೆ ಆತ ನನ್ನನ್ನು ಕೆಟ್ಟ ದೃಷ್ಟಿಯಿಂದ ಮುಟ್ಟುತ್ತಿದ್ದಾನೆ ಎಂದು ಗೊತ್ತಾಗಿದೆ, ಆದ್ರೆ ಡೋಂಗಿ ಬಾಬಾನ ಉದ್ದೇಶ ಪೋಷಕರಿಗೆ ಗೊತ್ತಾಗ್ಲಿಲ್ವೇ ಅಂತ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.

Video: ರೋಗ ವಾಸಿ ಮಾಡೋ ನೆಪದಲ್ಲಿ ಯುವತಿಯ ಸ್ತನ, ಸೊಂಟ ಮುಟ್ಟಿದ ಡೋಂಗಿ ಬಾಬಾ
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 27, 2024 | 10:53 AM

ನಕಲಿ ಬಾಬಾಗಳ ಹಾವಳಿ ದೇಶದ ಎಲ್ಲೆಡೆಯೂ ಇದೆ. ಕೆಲವರು ಸುಳ್ಳು ಹೇಳಿ ಹಣ ಮಾಡಿದ್ರೆ ಇನ್ನೂ ಕೆಲ ಬಾಬಾಗಳು ಚಿಕಿತ್ಸೆಯ ಹೆಸರಿನಲ್ಲಿ ಮಹಿಳೆಯರ ಮೈ ಮುಟ್ಟಿ ಆಸಭ್ಯವಾಗಿ ನಡೆದುಕೊಳ್ಳುವುದು ಅಥವಾ ಅತ್ಯಾಚಾರ ಎಸಗುವಂತದ್ದು ಮಾಡುತ್ತಿರುತ್ತಾರೆ. ಅಮಾಯಕರನ್ನು ಬಲೆಗೆ ಬೀಳಿಸಿಕೊಂಡು ಎಂಥಹ ಕಾಯಿಲೆಯನ್ನಾದರೂ ಗುಣಪಡಿಸುತ್ತೇನೆ ಎಂದು ಹೇಳಿಕೊಂಡು ಹೆಂಗಳೆಯರ ಮೈ ಮುಟ್ಟಿ ಆಸಭ್ಯ ವರ್ತನೆಯನ್ನು ತೋರುತ್ತಿರುತ್ತಾರೆ. ಇಂತಹ ಸಾಕಷ್ಟು ಪ್ರಕರಣಗಳು ಈ ಹಿಂದೆಯೂ ವರದಿಯಾಗಿವೆ. ಇದೀಗ ಅಂತಹದೇ ಘಟನೆಯೊಂದು ನಡೆದಿದ್ದು, ರೋಗ ವಾಸಿ ಮಾಡೋ ನೆಪದಲ್ಲಿ ಡೋಂಗಿ ಬಾಬಾ ಪೋಷಕರ ಮುಂದೆಯೇ ಯುವತಿಯೊಬ್ಬಳ ಸ್ತನ ಮತ್ತು ಸೊಂಟ ಮುಟ್ಟಿದ್ದಾನೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ.

ಈ ಕುರಿತ ಪೋಸ್ಟ್ ಒಂದನ್ನು Nehr_who?ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಯಾರೇ ಆದ್ರೂ ಸಹ ಆ ಹುಡುಗಿ ಎಷ್ಟು ಅಹಿತಕರ ಭಾವನೆಯನ್ನು ಅನುಭವಿಸುತ್ತಿದ್ದಾಳೆ ಹೇಳ್ತಾರೆ ಆದರೆ ಅವಳ ಪೋಷಕರಿಗೆ ಮಾತ್ರ ಅರ್ಥವಾಗಿಲ್ಲ. ಇಂತಹ ಡೋಂಗಿ ಬಾಬಾಗಳ ವಿರುದ್ಧ ಬೃಹತ್ ಜಾಗೃತಿಯ ಅಗತ್ಯವಿದೆ” ಎಂಬ ಶೀರ್ಷಿಕೆ ಬರೆದುಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಡೋಂಗಿ ಬಾಬಾ ಯುವತಿಯ ಮೈ ಮುಟ್ಟುವ ದೃಶ್ಯವನ್ನು ಕಾಣಬಹುದು. ಕಾಯಿಲೆಯನ್ನು ವಾಸಿ ಮಾಡೋ ನೆಪದಲ್ಲಿ ಆ ಬಾಬಾ ಯುವತಿಯ ಮೈ ಮುಟ್ಟುತ್ತಾನೆ. ಆಕೆ ಮೈ ಮುಟ್ಬೇಡಿ ಅಂದ್ರೂ ಡೋಂಗಿ ಬಾಬಾ ಯುವತಿಯ ಸೊಂಟ ಮತ್ತು ಸ್ತನ ಮುಟ್ಟಿ ಆಸಭ್ಯವಾಗಿ ವರ್ತಿಸಿದ್ದಾನೆ. ದುರಾದೃಷ್ಟ ಸಂಗತಿಯೆಂದ್ರೆ ಮಗಳ ಮೈ ಮುಟ್ಟಿದ್ರೂ ಕ್ಯಾರೇ ಅನ್ನದೇ ಪೋಷಕರು ಸುಮ್ಮನೆ ಕುಳಿತಿದ್ದಾರೆ.

ಇದನ್ನೂ ಓದಿ: ದೈಹಿಕ ಸಂಪರ್ಕ ಬೆಳೆಸಿದ್ರೆ ಮಾತ್ರ ಮಾಡಿದ ಪೂಜೆಗೆ ಫಲ ಸಿಗೋದು, ಮಹಿಳೆ ಜತೆ ಅಸಭ್ಯ ವರ್ತನೆ ತೋರಿದ ಪುರೋಹಿತ

ವೈರಲ್​​​ ವಿಡಿಯೋ ಇಲ್ಲಿದೆ ನೊಡಿ:

ಆಗಸ್ಟ್ 24 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.5 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಬ್ಯಾಡ್ ಟಚ್ ಏನೆಂದು ಮಕ್ಕಳಿಗೂ ಗೊತ್ತು ಆದರೆ ಪಾಲಕರು ಅದನ್ನು ಕ್ಯಾರೇ ಅಂದಿಲ್ಲ ಅದೇ ಬೇಸರದ ಸಂಗತಿ’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಅಲ್ಲಾ ಆ ಪೋಷಕರು ಮಗಳ ಮೈ ಮುಟ್ಟಲು ಹೇಗೆ ಅವಕಾಶ ಕೊಟ್ರು’ ಎಂದು ಪ್ರಶ್ನಿಸಿದ್ದಾರೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ