Video: ಪ್ರೀತಿಸಿ ಮದುವೆಯಾಗಿದ್ದೇವೆ, ಪ್ರೀತಿಗಾಗಿ ಸಾಯುತ್ತಿದ್ದೇವೆ… ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ನವದಂಪತಿ

ಇಲ್ಲೊಂದು ಜೋಡಿ ಮನೆಯವರ ವಿರೋಧದ ನಡುವೆಯೇ ಪ್ರೀತಿಸಿ ವಿವಾಹವಾಗಿದ್ದು, ಈ ಇಬ್ಬರಿಗೂ ಆಶ್ರಯ ನೀಡಿದ್ದ ಮನೆಯವರ ಮೇಲೆ ಹುಡುಗಿ ಮನೆ ಕಡೆಯವರು ಈ ಪ್ರೇಮ ಪಕ್ಷಿಗಳಿಗೆ ಆಶ್ರಯ ನೀಡಿದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದು, ಈ ವಿಷಯ ತಿಳಿದ ದಂಪತಿಗಳು ಸೆಲ್ಫಿ ವಿಡಿಯೋ ಮಾಡಿ ಕೀಟ ನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.

Video: ಪ್ರೀತಿಸಿ ಮದುವೆಯಾಗಿದ್ದೇವೆ, ಪ್ರೀತಿಗಾಗಿ ಸಾಯುತ್ತಿದ್ದೇವೆ... ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ನವದಂಪತಿ
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 27, 2024 | 2:48 PM

ಪ್ರೀತಿಗೆ ಮನೆಯವರು ವಿರೋಧ ಮಾಡಿದರೆಂದು, ಪ್ರೇಮ ವಿವಾಹಕ್ಕೆ ಒಪ್ಪಿಗೆ ನೀಡಲಿಲ್ಲವೆಂದು ದುಡುಕು ನಿರ್ಧಾರವನ್ನು ತೆಗೆದುಕೊಂಡು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಂತಹ ಸುದ್ದಿಗಳನ್ನು ಕೇಳಿರುತ್ತೇವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾದ ಜೋಡಿಯೊಂದು ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದೆ. ಹೌದು ತಮಗೆ ಆಶ್ರಯ ನೀಡಿದ್ದ ವ್ಯಕ್ತಿಯ ಮೇಲೆ ಯುವತಿಯ ಮನೆಯವರು ಹಲ್ಲೆ ನಡೆಸಿದ್ದು, ಈ ಕಾರಣಕ್ಕೆ ಮನನೊಂದು ದಂಪತಿ ಕೀಟ ನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಕುರಿತ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.

ಈ ಘಟನೆ ತೆಲಂಗಾಣದ ಜಂಗಾರೆಡ್ಡಿಗುಡೆಂ ಮಂಡಲದ ಅಕ್ಕಂಪೇಟೆಯಲ್ಲಿ ನಡೆದಿದ್ದು, ಪ್ರೇಮಿಗಳಿಬ್ಬರು ಕೀಟ ನಾಶಕ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದ್ದಾರೆ.ಇತ್ತೀಚಿಗಷ್ಟೇ ಪ್ರೇಮಿಗಳಿಗೆಬ್ಬರು ಮನೆಯವರ ವಿರೋಧದ ನಡುವೆಯೂ ವಿವಾಹವಾಗಿದ್ದರು. ಇಬ್ಬರದ್ದೂ ಬೇರೆ ಬೇರೆ ಜಾತಿ ಎಂಬ ಕಾರಣಕ್ಕೆ ಇಬ್ಬರ ಮನೆಯವರೂ ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದ್ರೆ ಮನೆಯವರ ಮಾತನ್ನು ದಿಕ್ಕರಿಸಿ ಈ ಇಬ್ಬರೂ ಮದುವೆಯಾಗುತ್ತಾರೆ. ಈ ಜೋಡಿಗಳಿಗೆ ರಾಜು ಎಂಬ ವ್ಯಕ್ತಿ ಆಶ್ರಯ ನೀಡಿದ್ದನು. ಈ ವಿಷಯ ತಿಳಿದ ಯುವತಿ ಮನೆವವರು ರಾಜು ಕುಟುಂಬದವರ ಮೇಲೆ ಹಲ್ಲೆ ನಡೆಸಿ ಆಸ್ತಿ ಧ್ವಂಸ ಮಾಡಿ ಬೆಂಕಿ ಹಚ್ಚಲು ಯತ್ನಿಸಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಘಟನೆಯಲ್ಲಿ ಗಾಯಗೊಂಡ ರಾಜು ತಾಯಿ ಮತ್ತು ಚಿಕ್ಕಮ್ಮ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆಯಿಂದ ಮನನೊಂದು ನವ ದಂಪತಿ “ಪ್ರೀತಿಸಿ ಮದುವೆಯಾಗಿದ್ದೇವೆ, ಪ್ರೀತಿಗಾಗಿ ಸಾಯುತ್ತಿದ್ದೇವೆ” ಎಂದು ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಈ ಕುರಿತ ಪೋಸ್ಟ್ ಒಂದನ್ನು ChotaNews ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಕುಟುಂಬಸ್ಥ ಕಿರುಕುಳದಿಂದ ಮನನೊಂದ ನವ ದಂಪತಿ ಪ್ರೀತಿಸಿ ಮದುವೆಯಾಗಿದ್ದೇವೆ, ಪ್ರೀತಿಗಾಗಿ ಸಾಯುತ್ತಿದ್ದೇವೆ ಎಂದು ಹೇಳಿ ಕೀಟ ನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಪೊಲೀಸ್‌ ಪರೀಕ್ಷೆ ಬರೆಯಲು ಹೋದ ಗಂಡ, ಬಾಯ್‌ಫ್ರೆಂಡನ್ನು ಬೆಡ್‌ರೂಮ್‌ಗೆ ಕರೆಸಿದ ಹೆಂಡ್ತಿ, ಮುಂದೇನಾಯ್ತು

ಆಗಸ್ಟ್ 24 ರಂದು ಹಂಚಿಕೊಳ್ಳಲಾದ ಈ ವಿಡಿಯೋ 90 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಪೋಷಕರ ವಿರೋಧದ ನಡುವೆಯೂ ಮದುವೆಯಾಗಿ ಇದೆಲ್ಲಾ ಸಾಯೋ ನಾಟಕ ಬೇಕಾ’ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಅವರು ವಿಷ ಸೇವಿಸಿಲ್ಲ ಬರೀ ನಾಟಕ ಮಾಡಿದ್ದಾರೆ’ ಎಂದು ಹೇಳಿದ್ದಾರೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ