Viral: ಹೆಲ್ಮೆಟ್ ಇಲ್ಲದೆ ಕಾರು ಚಲಾಯಿಸಿದ ಚಾಲಕನಿಗೆ ದಂಡ ವಿಧಿಸಿದ ಟ್ರಾಫಿಕ್ ಪೊಲೀಸ್

ಈ ಹಿಂದೆ ಹೆಲ್ಮೆಟ್ ಧರಿಸಿಲ್ಲ ಅಂತ ಹೇಳಿ ಆಟೋ ಡ್ರೈವರ್ ಒಬ್ಬರಿಗೆ 500 ರೂ. ದಂಡ ವಿಧಿಸಿರುವ ವಿಚಿತ್ರ ಘಟನೆ ಕೇರಳದ ತಿರುವನಂತಪುರದಲ್ಲಿ ನಡೆದಿತ್ತು. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದ್ದಕ್ಕಾಗಿ ಕಾರ್ ಚಾಲಕರೊಬ್ಬರಿಗೆ ಟ್ರಾಫಿಕ್ ಪೊಲೀಸರು 1,000 ರೂ. ದಂಡ ವಿಧಿಸಿದ್ದಾರೆ. ಈ ಸುದ್ದಿ ಇದೀಗ ಸಖತ್ ವೈರಲ್ ಆಗುತ್ತಿದೆ.

Viral: ಹೆಲ್ಮೆಟ್ ಇಲ್ಲದೆ ಕಾರು ಚಲಾಯಿಸಿದ ಚಾಲಕನಿಗೆ ದಂಡ ವಿಧಿಸಿದ ಟ್ರಾಫಿಕ್ ಪೊಲೀಸ್
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 27, 2024 | 4:17 PM

ವಾಹನ ಚಲಾಯಿಸುವ ವೇಳೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯ. ಒಂದು ವೇಳೆ ಹೆಲ್ಮೆಟ್ ಧರಿಸದೆ ಬೈಕ್ ಓಡಿಸಿದರೆ ದಂಡ ಬೀಳುವುದಂತೂ ಖಂಡಿತ. ಆದ್ರೆ ಇಲ್ಲೊಂದು ವಿಚಿತ್ರ ಘಟನೆಯೊಂದು ನಡೆದಿದ್ದು, ಕಾರ್ ಡ್ರೈವ್ ಮಾಡುವಾಗ ಹೆಲ್ಮೆಟ್ ಧರಿಸಿಲ್ಲ ಎಂದು ಚಾಲಕರೊಬ್ಬರಿಗೆ ಟ್ರಾಫಿಕ್ ಪೊಲೀಸ್ 1 ಸಾವಿರ ರೂ. ದಂಡ ವಿಧಿಸಿದ್ದಾರೆ. ಈ ಸುದ್ದಿ ಇದೀಗ ಸಖತ್ ವೈರಲ್ ಆಗಿದೆ.

ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಕಾರ್ ಚಲಾಯಿಸುವಾಗ ಹೆಲ್ಮೆಟ್ ಧರಿಸದಿದ್ದಕ್ಕೆ ಪತ್ರಕರ್ತರೊಬ್ಬರಿಗೆ 1000 ರೂ. ದಂಡ ವಿಧಿಸಲಾಗಿದೆ. NDTV ಪ್ರಕಾರ ಒಂಬತ್ತು ತಿಂಗಳ ಹಿಂದೆ (ನವೆಂಬರ್ 9, 2023) ಪತ್ರಕರ್ತ ತುಷಾರ್ ಸಕ್ಸೇನಾ ಅವರು ಕಾರು ಓಡಿಸುವಾಗ ಹೆಲ್ಮೆಟ್ ಧರಿಸಿಲ್ಲ ಎಂಬ ಆರೋಪದ ಮೇಲೆ ರಾಂಪುರದಿಂದ 188 ಕಿಮೀ ದೂರದಲ್ಲಿರುವ ಗೌತಮ್ ಬುದ್ಧ ನಗರ ಜಿಲ್ಲೆಯ ( ನೋಯ್ಡಾ ) ಪೊಲೀಸರು 1,000 ರೂ. ದಂಡದ ಚಲನ್ ವಿಧಿಸಿದ್ದರು. ಆರಂಭದಲ್ಲಿ, ತುಷಾರ್ ಇದೇನೋ ತಪ್ಪಾಗಿ ಬಂದಿರಬೇಕು ಎಂದು ಅದನ್ನು ನಿರ್ಲಕ್ಷಿಸಿದರು. ಆದ್ರೆ ನಂತರ ಮೇಲ್ ಕೂಡಾ ಬಂತು. ಅದರಲ್ಲಿ ದಂಡ ಮೊತ್ತವನ್ನು ಪಾವತಿಸಲು ವಿಫಲವಾದರೆ ನ್ಯಾಯಾಲಯಕ್ಕೆ ಹಾಜರಾಗಬೇಕಾಗುತ್ತದೆ ಎಂಬುದನ್ನು ಅದರಲ್ಲಿ ತಿಳಿಸಲಾಗಿತ್ತು.

ಇದನ್ನೂ ಓದಿ: ಪ್ರೀತಿಸಿ ಮದುವೆಯಾಗಿದ್ದೇವೆ, ಪ್ರೀತಿಗಾಗಿ ಸಾಯುತ್ತಿದ್ದೇವೆ… ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ನವದಂಪತಿ

ಇದರಿಂದ ಶಾಕ್ ಗೆ ಒಳಗಾದ ತುಷಾರ್ ‘ನೀವು ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ, ದಂಡವನ್ನು ಪಡೆಯುವುದು ಸರಿ. ಆದ್ರೆ ನನಗ್ಯಾಕೆ ದಂಡ ವಿಧಿಸಿದ್ದು, ನಾನು ಎನ್‌ಸಿಆರ್ ಪ್ರದೇಶಕ್ಕೆ ನಾನು ಕಾರ್ ಚಲಾಯಿಸುತ್ತಾ ಹೋಗೇ ಇಲ್ಲ ಇದಲ್ಲದೆ ಕಾರಿನೊಳಗೆ ಹೆಲ್ಮೆಟ್ ಧರಿಸಬೇಕು ಎಂದು ಹೇಳುವ ಯಾವುದೇ ನಿಯಮವಿದ್ದರೆ, ಅದು ಯಾವಾಗದಿಂದ ಜಾರಿಯಾಗಿದ್ದು ಎಂದು ದಯವಿಟ್ಟು ತಿಳಿಸುವಿರಾ’ಎಂದು ಕೇಳಿದ್ದಾರೆ. ಈ ಬಗ್ಗೆ ತನಿಖೆ ನಡೆದು ಇದೀಗ ದಂಡವನ್ನು ಹಿಂಪಡೆಯುವಂತೆ ನೋಯ್ಡಾ ಸಂಚಾರ ಪೊಲೀಸರಿಗೆ ಮನವಿ ಮಾಡಲಾಗಿದೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ