Viral: ಪೊಲೀಸ್‌ ಪರೀಕ್ಷೆ ಬರೆಯಲು ಹೋದ ಗಂಡ, ಬಾಯ್‌ಫ್ರೆಂಡನ್ನು ಬೆಡ್‌ರೂಮ್‌ಗೆ ಕರೆಸಿದ ಹೆಂಡ್ತಿ, ಮುಂದೇನಾಯ್ತು

ಈಗೀಗ ಗಂಡ ಹೆಂಡ್ತಿಗೆ ಮೋಸ ಮಾಡಿ ಅಥವಾ ಹೆಂಡ್ತಿ ಗಂಡನಿಗೆ ಮೋಸ ಮಾಡಿ ಇನ್ನೊಬ್ಬರ ಜೊತೆ ಅನೈತಿಕ ಸಂಬಂಧ ಬೆಳೆಸುವುದು ಕಾಮನ್‌ ಆಗಿ ಬಿಟ್ಟಿದೆ. ಈ ಅನೈತಿಕ ಸಂಬಂಧದ ಕಾರಣದಿಂದಲೇ ಎಷ್ಟೋ ಸಂಸಾರಗಳು ಹಾಳಾಗಿವೆ. ಕೊಲೆಗಳು, ರಂಪ ರಾಮಾಯಾಣಗಳು ನಡೆದಿವೆ. ಇದೀಗ ಅಂತಹದೇ ಘಟನೆಯೊಂದು ನಡೆದಿದ್ದು, ಇಲ್ಲೊಬ್ಳು ಹೆಂಡ್ತಿ ಗಂಡ ಪೊಲೀಸ್‌ ಪರೀಕ್ಷೆ ಬರೆಯಲು ಹೋಗುತ್ತಿದ್ದಂತೆ ಸಿಕ್ಕಿದ್ದೇ ಚಾನ್ಸ್‌ ಎನ್ನುತ್ತಾ ತನ್ನ ಬೆಡ್‌ರೂಮ್‌ಗೆ ಬಾಯ್‌ಫ್ರೆಂಡನ್ನು ಕರೆಸಿಕೊಂಡಿದ್ದಾಳೆ. ರಾತ್ರಿ ಬೆಡ್‌ರೂಮಿನಿಂದ ಏನೋ ಸದ್ದು ಬರುತ್ತಿದೆ ಎಂದು ಮನೆಯವರು ನೋಡಲು ಹೋದಾಗ ಈ ಇಬ್ಬರ ಕಳ್ಳಾಟ ಬಯಲಾಗಿದೆ.

Viral: ಪೊಲೀಸ್‌ ಪರೀಕ್ಷೆ ಬರೆಯಲು ಹೋದ ಗಂಡ, ಬಾಯ್‌ಫ್ರೆಂಡನ್ನು ಬೆಡ್‌ರೂಮ್‌ಗೆ ಕರೆಸಿದ ಹೆಂಡ್ತಿ, ಮುಂದೇನಾಯ್ತು
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 27, 2024 | 12:50 PM

ಇತ್ತೀಚಿನ ದಿನಗಳಲ್ಲಿ ವಿವಾಹೇತರ ಸಂಬಂಧಗಳು ಹೆಚ್ಚುತ್ತಿವೆ. ಹೌದು ವಿವಾಹವಾಗಿದ್ದರೂ ಗಂಡ ಹೆಂಡ್ತಿಗೆ ಮೋಸ ಮಾಡಿ ಅಥವಾ ಹೆಂಡ್ತಿ ಗಂಡನಿಗೆ ಮೋಸ ಮಾಡಿ ಮತ್ತೊಬ್ಬರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿರುತ್ತಾರೆ. ಈ ಅಕ್ರಮ ಸಂಬಂಧದ ಕಾರಣದಿಂದಲೇ ಎಷ್ಟೋ ಸುಂದರ ಸಂಸಾರಗಳು ಹಾಳಾಗಿವೆ. ಅಷ್ಟೇ ಏಕೆ ಅನೈತಿಕ ಸಂಬಂಧದ ಶಂಕೆಯಿಂದ ಪತಿರಾಯ ಪತ್ನಿಯನ್ನು ಕೊಂದ, ಹೆಂಡ್ತಿ ಗಂಡನನ್ನೇ ಕೊಚ್ಚಿ ಕೊಲೆ ಮಾಡಿದ ಘಟನೆಗಳು, ರಂಪರಾಮಾಯಣಗಳಾದ ಘಟನೆಗಳು ನಡೆದಿವೆ. ಇದೀಗ ಅಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಇಲ್ಲೊಬ್ಳು ಹೆಂಡ್ತಿ ಗಂಡ ಪೊಲೀಸ್‌ ಪರೀಕ್ಷೆ ಬರೆಯಲು ಹೋಗುತ್ತಿದ್ದಂತೆ ಸಿಕ್ಕಿದ್ದೇ ಚಾನ್ಸ್‌ ಎನ್ನುತ್ತಾ ತನ್ನ ಬೆಡ್‌ರೂಮ್‌ಗೆ ಬಾಯ್‌ಫ್ರೆಂಡನ್ನು ಕರೆಸಿಕೊಂಡಿದ್ದಾಳೆ. ರಾತ್ರಿ ಬೆಡ್‌ರೂಮಿನಿಂದ ಏನೋ ಸದ್ದು ಬರುತ್ತಿದೆ ಎಂದು ಮನೆಯವರು ನೋಡಲು ಹೋದಾಗ ಈ ಇಬ್ಬರ ಕಳ್ಳಾಟ ಬಯಲಾಗಿದೆ.

ಈ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮಹಾರಾಜ್‌ಗಂಜ್‌ ಜಿಲ್ಲೆಯಲ್ಲಿ ನಡೆದಿದ್ದು, ಪತಿ ಕಾನ್ಸ್‌ಟೇಬಲ್‌ ನೇಮಕಾತಿ ಪರೀಕ್ಷೆ ಬರೆಯಲು ಹೋದ ಸಂದರ್ಭದಲ್ಲಿ ಆತನ ಹೆಂಡ್ತಿ ತನ್ನ ಪ್ರಿಯಕರನನ್ನು ಮನೆಗೆ ಕರೆಸಿದ್ದಾಳೆ. ಆಕೆಯ ಕೋಣೆಯಲ್ಲಿ ಏನೋ ಸದ್ದು ಬರುತ್ತಿದೆ ಎಂದು ಮನೆಯವರು ನೋಡಲು ಹೋದಾಗ ಈ ಇಬ್ಬರ ಕಳ್ಳಾಟ ಬಯಲಾಗಿದೆ.

ಮೂರು ತಿಂಗಳ ಹಿಂದಷ್ಟೇ ಇವರಿಬ್ಬರಿಗೂ ಮದುವೆಯಾಗಿತ್ತು. ಆದ್ರೆ ಆಕೆಗೆ ಬೇರೊಬ್ಬ ಯುವಕ ಜೊತೆ ಪ್ರೇಮ ಸಂಬಂಧವಿತ್ತು. ಆಕೆ ಮದುವೆಯಾದ ಬಳಿಕವೂ ಗಂಡನ ಕಣ್ತಪ್ಪಿಸಿ ಪ್ರೇಮಿಯೊಂದಿಗೆ ಫೋನಿನಲ್ಲಿ ಮಾತನಾಡುತ್ತಿದ್ದಳು. ಆಗಸ್ಟ್‌ 23 ರಂದು ಪತಿ ಪೊಲೀಸ್‌ ಪರಿಕ್ಷೆ ಬರೆಯಲು ಹೋದ ಸಂದರ್ಭದಲ್ಲಿ, ಇದೇ ಚಾನ್ಸ್‌ ಎನ್ನುತ್ತಾ ಆಕೆ ಸುಮಾರು 12 ಗಂಟೆ ರಾತ್ರಿಯಲ್ಲಿ ತನ್ನ ಬಾಯ್‌ಫ್ರೆಂಡನ್ನು ಕರೆಸಿಕೊಂಡಿದ್ದಾಳೆ. ರೂಮಿನಿಂದ ಏನೋ ಸದ್ದು ಬರುತ್ತಿದೆಯಲ್ಲಾ ಎಂದು ಮನೆಯವರು ನೋಡಲು ಹೋದಾಗ ಈ ಇಬ್ಬರೂ ಪ್ರೇಮಿಗಳು ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ. ಕೋಪದಲ್ಲಿ ಮನೆಯವರು ಆ ಇಬ್ಬರಿಗೂ ಹಿಗ್ಗಾಮುಗ್ಗ ಥಳಿಸಿದ್ದಾರೆ. ಇಲ್ಲೇ ಇದ್ರೆ ಅಪಾಯ ತಪ್ಪಿದ್ದಲ್ಲ ಎನ್ನುತ್ತಾ ಆ ಯುವಕ ತನ್ನ ಸ್ನೇಹಿತನೊಂದಿಗೆ ಪರಾರಿಯಾಗಿದ್ದಾನೆ. ನಂತರ ಮನೆಯವರು ಪೊಲೀಸರಿಗೆ ದೂರನ್ನು ನೀಡಿದ್ದು, ದೂರಿನ ಆಧಾರದ ಮೇರೆಗೆ ಆ ಯುವಕನನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ರೋಗ ವಾಸಿ ಮಾಡೋ ನೆಪದಲ್ಲಿ ಯುವತಿಯ ಸ್ತನ, ಸೊಂಟ ಮುಟ್ಟಿದ ಡೋಂಗಿ ಬಾಬಾ

ವಿಚಾರಣೆ ನಡೆಸಲಾಗುತ್ತಿದ್ದು, ಸಿಕ್ಕಿಬಿದ್ದ ಯುವತಿಯನ್ನು ಕರೆಸಿ ಇಬ್ಬರಿಂದಲೂ ಮಾಹಿತಿಯನ್ನು ಕಲೆ ಹಾಕಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಇನ್‌ಸ್ಪೆಕ್ಟರ್‌ ರಾಹುಲ್‌ ಶುಕ್ಲಾ ತಿಳಿಸಿದ್ದಾರೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ