Video Viral: ರಾಮ ನಾಮ ಹಾಡುತ್ತಿದ್ದಂತೆ ಮಹಿಳೆಯನ್ನು ತಬ್ಬಿಕೊಂಡ ಕೋತಿ

ಮಹಿಳೆಯೊಬ್ಬರು "ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್" ಮತ್ತು "ರಾಮ್ ರಾಮ್ ಪಾಹಿಮಾಮ್, ರಾಮ್ ರಾಮ್ ರಕ್ಷಮಾಮ್" ಮುಂತಾದ ಮಂತ್ರಗಳನ್ನು ಪಠಿಸುವುದನ್ನು ಕಾಣಬಹುದು. ಇದಕ್ಕಿದ್ದಂತೆ ಬಂದ ಕೋತಿ ಟೇಬಲ್​ ಮೇಲೆ ಕುಳಿತು ಭಕ್ತಿಯಿಂದ ಕೇಳಿಸಿಕೊಂಡಿದ್ದು, ಬಳಿಕ ಮಹಿಳೆಯನ್ನು ತಬ್ಬಿಕೊಂಡು ರಾಮನ ಹಾಡನ್ನು ಆನಂದಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

Video Viral: ರಾಮ ನಾಮ ಹಾಡುತ್ತಿದ್ದಂತೆ ಮಹಿಳೆಯನ್ನು ತಬ್ಬಿಕೊಂಡ ಕೋತಿ
Follow us
ಅಕ್ಷತಾ ವರ್ಕಾಡಿ
|

Updated on: Aug 27, 2024 | 4:08 PM

ಸೋಶಿಯಲ್​ ಮೀಡಿಯಾಗಳಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಹರಿದಾಡುತ್ತಿರುತ್ತವೆ. ಇದೀಗ ಅಂತದ್ದೇ ವಿಡಿಯೋ ಒಂದು ಎಲ್ಲೆಡೆ ಭಾರೀ ವೈರಲ್​​ ಆಗಿದೆ. ಮಹಿಳೆಯೊಬ್ಬರು ರಾಮ ನಾಮ ಹಾಡುತ್ತಿದ್ದಂತೆ ಕೋತಿಯೊಂದು ಹತ್ತಿರ ಬಂದಿದ್ದು, ಹಾಡು ಕೇಳುತ್ತಾ ಕುಳಿತಿದೆ. ಬಳಿಕ ಮಹಿಳೆಯನ್ನು ತಬ್ಬಿಕೊಂಡು ರಾಮ ನಾಮ ಕೇಳುತ್ತಲೇ ಆಕೆಯ ಹೆಗಲ ಮೇಲೆ ತಲೆಯಿಟ್ಟು ಸುಮ್ಮನೆ ಕುಳಿತಿದೆ. ಸದ್ಯ ಘಟನೆಗೆ ಸಂಬಂಧಿಸಿದ ಸಂಪೂರ್ಣ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆಹಿಡಿಯಲಾಗಿದೆ.

@NandiniVenkate3 ಎಂಬ ಟ್ವಟಿರ್​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್​​ ಆಗಿದೆ. ಇಂದು ಬೆಳಗ್ಗೆ(ಆ.27) ಹಂಚಿಕೊಂಡಿರುವ ವಿಡಿಯೋ ಇದೀಗಾಗಲೇ 14 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ ಸಾಕಷ್ಟು ಹರೇ ರಾಮ ಹರೇ ರಾಮ… ಎಂದು ಕಾಮೆಂಟ್​​ನಲ್ಲಿ ಬರೆದುಕೊಂಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ವಿದ್ಯುತ್ ತಂತಿ ತಗುಲಿ ಬಾಲಕ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ವೈರಲ್​ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಶ್ರೀರಾಮನಿಗೆ ಸಂಬಂಧಿಸಿದ ಹಾಡುಗಳನ್ನು ಹಾಡುತ್ತಿರುವುದು ಮತ್ತು “ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್” ಮತ್ತು “ರಾಮ್ ರಾಮ್ ಪಾಹಿಮಾಮ್, ರಾಮ್ ರಾಮ್ ರಕ್ಷಮಾಮ್” ಮುಂತಾದ ಮಂತ್ರಗಳನ್ನು ಪಠಿಸುವುದನ್ನು ಕಾಣಬಹುದು. ಇದಕ್ಕಿದ್ದಂತೆ ಬಂದ ಕೋತಿ ಟೇಬಲ್​ ಮೇಲೆ ಭಕ್ತಿಯಿಂದ ಕೇಳಿಸಿಕೊಂಡಿದ್ದು, ಬಳಿಕ ಮಹಿಳೆಯನ್ನು ತಬ್ಬಿಕೊಂಡು ರಾಮನ ಹಾಡನ್ನು ಆನಂದಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ