Video: ದೈಹಿಕ ಸಂಪರ್ಕ ಬೆಳೆಸಿದ್ರೆ ಮಾತ್ರ ಮಾಡಿದ ಪೂಜೆಗೆ ಫಲ ಸಿಗೋದು, ಮಹಿಳೆ ಜತೆ ಅಸಭ್ಯ ವರ್ತನೆ ತೋರಿದ ಪುರೋಹಿತ

ಪ್ರತಿನಿತ್ಯ ಮಹಿಳೆಯರ ಮೇಲೆ ಒಂದಲ್ಲಾ ಒಂದು ರೀತಿಯ ಕಿರುಕುಳ, ದೌರ್ಜನ್ಯಗಳು ನಡೆಯುತ್ತಲೇ ಇವೆ. ಇಲ್ಲೊಬ್ಬ ಪುರೋಹಿತ ಕೂಡಾ ಪೂಜೆಯ ನೆಪದಲ್ಲಿ ಮಹಿಳೆಯೊದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಹೌದು ನನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ರೆ ಮಾತ್ರ ಮಾಡಿದ ಪೂಜೆಗೆ ಫಲ ಸಿಗೋದು ಎಂದು ಮಹಿಳೆಯ ದಾರಿ ತಪ್ಪಿಸಲು ಪ್ರಯತ್ನಿಸಿದ್ದು, ಆತನಿಗೆ ಆ ಮಹಿಳೆಯ ಕುಟುಂಬ ಸದಸ್ಯರಿಂದ ಭರ್ಜರಿ ಧರ್ಮದೇಟು ಸಿಕ್ಕಿದೆ.

Video: ದೈಹಿಕ ಸಂಪರ್ಕ ಬೆಳೆಸಿದ್ರೆ ಮಾತ್ರ ಮಾಡಿದ ಪೂಜೆಗೆ ಫಲ ಸಿಗೋದು, ಮಹಿಳೆ ಜತೆ ಅಸಭ್ಯ ವರ್ತನೆ ತೋರಿದ ಪುರೋಹಿತ
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 26, 2024 | 3:23 PM

ಹೆಣ್ಣುಮಕ್ಕಳ ಮೇಲಾಗುವಂತಹ ದೌರ್ಜನ್ಯಗಳ ಸುದ್ದಿಗಳ ಬಗ್ಗೆ ಪ್ರತಿನಿತ್ಯ ಕೇಳುತ್ತಿರುತ್ತೇವೆ. ಕೆಲ ಕಾಮ ಪಿಶಾಚಿಗಳಂತೂ ಮುಗ್ಧ ಹೆಣ್ಣುಮಕ್ಕಳನ್ನೇ ಗುರಿಯಾಗಿಸಿಕೊಂಡು ಅವರಿಗೆ ಕಿರುಕುಳ ನೀಡುವುದೋ ಅಥವಾ ಅವರ ಮೇಲೆ ಅತ್ಯಾಚಾರ ಎಸಗುವಂತಹದ್ದೋ ಮಾಡುತ್ತಿರುತ್ತಾರೆ. ಅಂತಹದ್ದೇ ಘಟನೆಯೊಂದು ಇದೀಗ ನಡೆದಿದ್ದು, ಮನೆಗೆ ಪೂಜೆಗೆಂದು ಕರೆಸಿದ್ದ ಪೊರೋಹಿತ ಆ ಮನೆಯ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ನನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ರೆ ಮಾತ್ರ ಮಾಡಿದ ಪೂಜೆಗೆ ಫಲ ಸಿಗೋದು ಎಂದು ಮಹಿಳೆಯ ದಾರಿ ತಪ್ಪಿಸಲು ಪ್ರಯತ್ನಿಸಿದ್ದು, ಆತನಿಗೆ ಆ ಮಹಿಳೆಯ ಕುಟುಂಬ ಸದಸ್ಯರಿಂದ ಭರ್ಜರಿ ಧರ್ಮದೇಟು ಸಿಕ್ಕಿದೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ರೇಖಾ ಅಂಬೇಡ್ಕರ್ (RekhaAmbedkar21) ಎಂಬವರು ಈ ಕುರಿತ ಪೋಸ್ಟ್ ಒಂದನ್ನು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ ನಲ್ಲಿ ಹಂಚಿಕೊಂಡಿದ್ದು, “ಪೂಜೆ ಮಾಡಲು ಬಂದ ಅರ್ಚಕ ಮಹಿಳೆಗೆ ಕಿರುಕುಳ ನೀಡಿ ಅಶ್ಲೀಲ ಕೃತ್ಯ ಎಸಗಿದ್ದಾನೆ. ದೈಹಿಕ ಸಂಪರ್ಕ ಬೆಳೆಸಿದ ಬಳಿಕವೇ ಪೂಜೆ ಸಫಲವಾಗುತ್ತದೆ ಎಂದು ಹೇಳಿ ಅರ್ಚಕನಿಗೆ ಸರಿಯಾಗಿ ಮಂಗಳಾರತಿಯಾಗಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋದಲ್ಲಿ ಮನೆ ಮಂದಿಯೆಲ್ಲಾ ಸೇರಿ ಪೂಜೆ ನಡೆಸಿಕೊಡಲು ಬಂದಿದ್ದ ಅರ್ಚಕನಿಗೆ ಧರ್ಮದೇಟು ನೀಡುತ್ತಿರುವ ದೃಶ್ಯವನ್ನು ಕಾಣಬಹುದು. ಮನೆಗೆ ಪೂಜೆಗೆಂದು ಬಂದ ಅರ್ಚಕ ದೈಹಿಕ ಸಂಪರ್ಕ ಬೆಳೆಸಿದ ಬಳಿಕವೇ ಪೂಜೆ ಸಫಲವಾಗುತ್ತದೆ ಎಂದು ಹೇಳಿ ಮಹಿಳೆಯೊಬ್ಬರಿಗೆ ಕಿರುಕುಳ ನೀಡಲು ಮುಂದಾಗಿದ್ದು, ಈ ವಿಷಯ ತಿಳಿಯುತ್ತಿದ್ದಂತೆ ಮನೆಯವರೆಲ್ಲಾ ಸೇರಿ ಅರ್ಚಕನಿಗೆ ಸರಿಯಾಗಿ ಬಾರಿಸಿದ್ದಾರೆ.

ಇದನ್ನೂ ಓದಿ: ಶಾಲಾ ಶುಲ್ಕ ಪಾವತಿಸಿಲ್ಲ ಎಂದು ವಿದ್ಯಾರ್ಥಿಗೆ ಬೆತ್ತದಿಂದ ಹೊಡೆದ ಪ್ರಾಂಶುಪಾಲೆ

ಇಂದು ಮುಂಜಾನೆ ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ ಇವನು ನಿಜವಾದ ಅರ್ಚಕನಾಗಿರಲು ಸಾಧ್ಯವಿಲ್ಲ, ಅರ್ಚಕನ ವೇಷ ತೊಟ್ಟು ಬಂದಿರಬೇಕು’ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಇನ್ನೂ ಸರಿಯಾಗಿ ಜಾಡಿಸಬೇಕಿತ್ತು’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ