video: ಶಾಲಾ ಶುಲ್ಕ ಪಾವತಿಸಿಲ್ಲ ಎಂದು ವಿದ್ಯಾರ್ಥಿಗೆ ಬೆತ್ತದಿಂದ ಹೊಡೆದ ಪ್ರಾಂಶುಪಾಲೆ
ಈಗಂತೂ ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಕೈ ಮಾಡುವಂತಿಲ್ಲ. ಏನಿದ್ದರೂ ಮಾತಿನಲ್ಲೇ ತಿದ್ದಿ ಬುದ್ಧಿ ಹೇಳುತ್ತಾರೆ. ಆದ್ರೆ ಇಲ್ಲೊಬ್ರು ಪ್ರಾಂಶುಪಾಲರು ವಿದ್ಯಾರ್ಥಿಯೊಬ್ಬನಿಗೆ ಬೆತ್ತದಿಂದ ಬಾರಿಸಿದ್ದಾರೆ. ಹೌದು ಶಾಲಾ ಶುಲ್ಕದ ವಿಚಾರವಾಗಿ ಈ ಇಬ್ಬರ ನಡುವೆ ವಾಗ್ವಾದ ಏರ್ಪಟ್ಟಿದ್ದು, ಕೋಪಕೊಂಡ ಪ್ರಾಂಶುಪಾಲರು ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಬಾರಿಸಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಈಗ ಕಾಲ ಬದಲಾಗಿದೆ. ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಕೈ ಮಾಡುವಂತಿಲ್ಲ. ಏನಿದ್ದರೂ ಮಾತಿನಲ್ಲೇ ಮಕ್ಕಳನ್ನು ನಿಯಂತ್ರಿಸಬೇಕು. ಹೀಗಿದ್ರೂ ಕೆಲವೊಮ್ಮೆ ತುಂಟ ವಿದ್ಯಾರ್ಥಿಗಳನ್ನು ಶಿಕ್ಷಕರು ಪೆಟ್ಟು ಕೊಟ್ಟೆ ಸರಿ ದಾರಿಗೆ ತರುತ್ತಾರೆ. ಹೀಗೆ ಯಾವ ಶಿಕ್ಷಕರೂ ಕೂಡಾ ಸುಮ್ಮನೆ ವಿದ್ಯಾರ್ಥಿಗಳ ಮೇಲೆ ಕೈ ಮಾಡೋಲ್ಲ. ಆದ್ರೆ ಇಲ್ಲೊಬ್ರು ಪ್ರಾಂಶುಪಾಲರು ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಯೊಬ್ಬನ ಮೇಲೆ ಕೈ ಮಾಡಿದ್ದಾರೆ. ಹೌದು ಶಾಲಾ ಶುಲ್ಕದ ವಿಚಾರವಾಗಿ ಈ ಇಬ್ಬರ ನಡುವೆ ವಾಗ್ವಾದ ಏರ್ಪಟ್ಟಿದ್ದು, ಕೋಪಕೊಂಡ ಪ್ರಾಂಶುಪಾಲರು ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಬೆತ್ತದಲ್ಲಿ ಬಾರಿಸಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಈ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದ್ದು, ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ 11 ನೇ ತರಗತಿ ವಿದ್ಯಾರ್ಥಿ ಹಾಗೂ ಪ್ರಾಂಶುಪಾಲರ ನಡುವೆ ಶುಲ್ಕದ ವಿಚಾರಕ್ಕೆ ಬಿಗ್ ಫೈಟ್ ನಡೆದಿದೆ. ವರದಿಗಳ ಪ್ರಕಾರ ದಲಿತ ಸಮುದಾಯಕ್ಕೆ ಸೇರಿದ ಧ್ರುವ ಆರ್ಯ ಎಂಬ ವಿದ್ಯಾರ್ಥಿ 11 ನೇ ತರಗತಿಯಲ್ಲಿ ಅನುತ್ತೀರ್ಣನಾದ ಕಾರಣ ವರ್ಗಾವಣೆ ಪ್ರಮಾಣಪತ್ರ (ಟಿಸಿ) ಪಡೆಯಲು ಶಾಲೆಗೆ ಹೋಗಿದ್ದನು. ಅಲ್ಲಿ ಧ್ರುವ್ ಮತ್ತು ಪ್ರಾಂಶುಪಾಲರಾದ ನಿಶಾ ಸೆಂಗಾರ್ ನಡುವೆ ಶಾಲಾ ಶುಲ್ಕದ ಬಗ್ಗೆ ವಿವಾದ ಉಂಟಾಗಿದೆ. ಬಾಕಿ ಇರುವ ಎಲ್ಲಾ ಹಣವನ್ನು ಪಾವತಿಸಿದ್ದೇನೆ ಎಂದು ಧ್ರುವ್ ಹೇಳಿಕೊಂಡರೆ, ಬಾಕಿ ಇರುವ ಶುಲ್ಕವನ್ನು ಪಾವತಿಸಿಲ್ಲ ಹಾಗಾಗಿ ಟಿಸಿ ನೀಡಲು ಸಾಧ್ಯವಿಲ್ಲ ಎಂದು ಪ್ರಾಂಶುಪಾಲರು ಹೇಳಿದ್ದಾರೆ. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ಏರ್ಪಟ್ಟಿದ್ದು, ವಾಗ್ವಾದವು ಉಲ್ಬಣಗೊಂಡು ಪ್ರಾಂಶುಪಾಲರಾದ ನಿಶಾ ಸೆಂಗಾರ್ ವಿದ್ಯಾರ್ಥಿ ಧ್ರುವ್ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಇದಾದ ಕೂಡಲೇ ಉಪಪ್ರಾಂಶುಪಾಲರಾದ ರಾಕೇಶ್ ಸಿಂಗ್ ಮತ್ತು ರಜನಿ ಎಂಬ ಇನ್ನೊಬ್ಬ ಶಿಕ್ಷಕಿ ಕೂಡ ಸೇರಿಕೊಂಡು ವಿದ್ಯಾರ್ಥಿಗೆ ಥಳಿಸಿದ್ದಾರೆ. ಧ್ರುವ್ ತನ್ನನ್ನು ತಾನು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ ಪ್ರಾಂಶುಪಾಲರನ್ನು ದೂರ ತಳ್ಳಿದ್ದಾನೆ. ಈ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Kalesh Occurs b/w Principal And 11th Grade Student In Gwalior’s Private School (Full Context in the Clip) pic.twitter.com/wqFjP7S2jl
— Ghar Ke Kalesh (@gharkekalesh) August 25, 2024
ಈ ಗಲಾಟೆಯಲ್ಲಿ ವಿದ್ಯಾರ್ಥಿಯ ಮುಖ, ಕುತ್ತಿಗೆ ಮತ್ತು ತಲೆಗೆ ಗಾಯಗಳಾಗಿವೆ. ಬಳಿಕ ಎರಡೂ ಕಡೆಯವರು ಹಾಜಿರಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಾಂಶುಪಾಲರಾದ ನಿಶಾ ಸೆಂಗರ್, ಉಪಪ್ರಾಂಶುಪಾಲರಾದ ರಾಕೇಶ್ ಸಿಂಗ್ ಮತ್ತು ಶಿಕ್ಷಕಿ ರಜನಿ ವಿರುದ್ಧ ಪೊಲೀಸರು ಹಲ್ಲೆ ಮತ್ತು ಕಿರುಕುಳ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Ghar Ke Kalesh ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಪ್ರಾಂಶುಪಾಲರು ವಿದ್ಯಾರ್ಥಿಯೊಬ್ಬನಿಗೆ ಬೆತ್ತದಿಂದ ಬಾರಿಸುವ ದೃಶ್ಯವನ್ನು ಕಾಣಬಹುದು. ವಿದ್ಯಾರ್ಥಿ ತನ್ನನ್ನು ತಾನು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ ಪ್ರಾಂಶುಪಾಲರನ್ನು ದೂರ ತಳ್ಳಿದ್ದಾನೆ.
ಇದನ್ನೂ ಓದಿ: ರಾಂಗ್ ರೂಟ್ನಲ್ಲಿ ಬರೋದಲ್ದೇ ಅಟಿಟ್ಯೂಡ್ ಬೇರೆ ತೋರಿಸ್ತೀಯಾ, ಬೈಕ್ ಸವಾರನಿಗೆ ಕ್ಲಾಸ್ ತೆಗೆದುಕೊಂಡ ಯೋಧ
ಆಗಸ್ಟ್ 25 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ವಿದ್ಯಾರ್ಥಿಗೆ ಕೋಲಿನಿಂದ ಹೊಡೆಯುವ ಹಕ್ಕು ಆಕೆಗೆ ನೀಡಿದವರು ಯಾರು? ಆ ವಿದ್ಯಾರ್ಥಿ ಆಕೆಗೆ ಒಳ್ಳೆಯ ಪಾಠ ಕಲಿಸಿದ’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ‘ವಿದ್ಯಾರ್ಥಿಯ ಮೇಲೆ ಕೈ ಮಾಡುವ ಹಕ್ಕಿಲ್ಲ ಆಕೆಗೆ’ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ