Video: ರಾಂಗ್ ರೂಟ್​​​ನಲ್ಲಿ ಬರೋದಲ್ದೇ ಅಟಿಟ್ಯೂಡ್ ಬೇರೆ ತೋರಿಸ್ತೀಯಾ, ಬೈಕ್ ಸವಾರನಿಗೆ ಕ್ಲಾಸ್ ತೆಗೆದುಕೊಂಡ ಯೋಧ

ಟ್ರಾಫಿಕ್ ರೂಲ್ಸ್ ಪಾಲಿಸುವುದು ಪ್ರತಿಯೊಬ್ಬ ವಾಹನ ಸಾವರನ ಕರ್ತವ್ಯ. ಆದ್ರೆ ಈ ಕೆಲವೊಬ್ರು ಟ್ರಾಫಿಕ್ ರೂಲ್ಸ್ ಪಾಲಿಸದೆ ಧಿಮಾಕು ತೋರುತ್ತಾರೆ. ಇಲ್ಲೊಬ್ಬ ದ್ವಿಚಕ್ರ ವಾಹನ ಸವಾರ ಕೂಡಾ ಅದೇ ರೀತಿ ಮಾಡಿದ್ದು, ಆತ ರಾಂಗ್ ರೂಟ್ ಅಲ್ಲಿ ಬಂದಿದ್ದು ಮಾತ್ರವಲ್ಲದೆ ಧಿಮಾಕು ತೋರಿದ್ದಾನೆ. ಇದನ್ನು ನೋಡಿದ ಯೋಧ ಆತನಿಗೆ ಒಂದೇಟು ಕೊಟ್ಟು ಸರಿಯಾಗಿ ಬುದ್ಧಿ ಕಲಿಸಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.

Video: ರಾಂಗ್ ರೂಟ್​​​ನಲ್ಲಿ ಬರೋದಲ್ದೇ ಅಟಿಟ್ಯೂಡ್ ಬೇರೆ ತೋರಿಸ್ತೀಯಾ, ಬೈಕ್ ಸವಾರನಿಗೆ ಕ್ಲಾಸ್ ತೆಗೆದುಕೊಂಡ ಯೋಧ
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Aug 26, 2024 | 2:33 PM

ನಮ್ಮ ಹೆಮ್ಮೆಯ ಸೈನಿಕರು ಗಡಿ ಕಾಯುತ್ತಾ ದೇಶವನ್ನು ರಕ್ಷಿಸುವುದು ಮಾತ್ರವಲ್ಲದೆ, ದೇಶದೊಳಗಿನ ಸಮಸ್ಯೆಯನ್ನು ನಿವಾರಿಸಲು ಕೂಡ ಸದಾ ಮುಂದಿರುತ್ತಾರೆ. ಯಾವುದೇ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಜನರ ಪ್ರಾಣವನ್ನು ರಕ್ಷಿಸುತ್ತಾರೆ. ಇನ್ನೂ ನಮ್ಮ ಯೋಧರು ಜನ ತಪ್ಪು ಮಾಡಿದ್ರೆ ಸುಮ್ನೆ ಬಿಡ್ತಾರಾ… ಖಂಡಿತ ಇಲ್ಲ. ಇದಕ್ಕೆ ಉದಾಹರಣೆಯಂತಿರುವ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಟ್ರಾಫಿಕ್ ರೂಲ್ಸ್ ಪಾಲಿಸದೇ ಧಿಮಾಕು ತೋರಿದ ಸ್ಕೂಟರ್ ಸವಾರನಿಗೆ “ರಾಂಗ್ ರೂಟಲ್ಲಿ ಬರೋದಲ್ದೇ ಅಟಿಟ್ಯೂಡ್ ಬೇರೆ ತೋರಿಸ್ತೀಯಾ….” ಎಂದು ಸೈನಿಕ ಆತನಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಈ ಕುರಿತ ಪೋಸ್ಟ್ ಒಂದನ್ನು Ankur ಭಗಚಿ ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಸ್ಕೂಟರ್ ಸವಾರ ರಾಂಗ್ ರೂಟಲ್ಲಿ ಬರೋದನ್ನ ನೋಡಬಹುದು. ಹೀಗೆ ಬಂದವನು ಕಾರ್ ಚಾಲಕನ ಮುಂದೆ ಅಟಿಟ್ಯೂಡ್ ತೋರಿಸಿದ್ದಾನೆ. ಇದನ್ನು ಗಮನಿಸಿದ ಯೋಧ ತಮ್ಮ ವಾಹನದಿಂದ ತಕ್ಷಣ ಇಳಿದು ಬಂದು “ಮಗ್ನೆ ರಾಂಗ್ ರೂಟಲ್ಲಿ ಬರೋದಲ್ದೇ ಅಟಿಟ್ಯೂಡ್ ಬೇರೆ ತೋರಿಸ್ತೀಯಾ….” ಎಂದು ಸೈನಿಕ ಆತನಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಛೇ.. ಇವಳೆಂಥಾ ಸೊಸೆ; ವಯಸ್ಸಾದ ಅತ್ತೆಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಘಾಟಿ ಸೊಸೆ

ಆಗಸ್ಟ್ 24 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನೂ ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಇದು ನಮ್ಮ ಭಾರತೀಯ ಸಶಸ್ತ್ರ ಪಡೆಗಳ ಶಕ್ತಿ ಅಂದ್ರೆ’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಕೇವಲ ಸೈನಿಕರು ಮಾತ್ರ ಇಂತಹ ಜನಗಳ ಸೊಕ್ಕಡಗಿಸಲು ಸಾಧ್ಯ’ ಎಂದು ಹೇಳಿದ್ದಾರೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:06 am, Mon, 26 August 24