AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಛೇ.. ಇವಳೆಂಥಾ ಸೊಸೆ; ವಯಸ್ಸಾದ ಅತ್ತೆಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಘಾಟಿ ಸೊಸೆ

ಪ್ರತಿ ಮನೆಯಲ್ಲೂ ಅತ್ತೆ ಸೊಸೆ ಮಧ್ಯೆ ಸಣ್ಣ ಪುಟ್ಟ ಮನಸ್ತಾಪಗಳು ಇದ್ದೇ ಇರುತ್ತದೆ. ಆದ್ರೆ ಈ ಜಗಳಗಳು ಕೈ ಮಿಲಾಯಿಸೋ ಮಟ್ಟಕ್ಕೆ ಹೋಗುವುದಿಲ್ಲ. ಆದ್ರೆ ಇಲ್ಲೊಬ್ಬಳು ಸೊಸೆ ಹಿರಿ ಜೀವ ಎಂಬುದನ್ನು ನೋಡದೆ ಸ್ವಂತ ಅತ್ತೆಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾಳೆ. ಈಕೆಯ ಕ್ರೌರ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Viral Video: ಛೇ.. ಇವಳೆಂಥಾ ಸೊಸೆ; ವಯಸ್ಸಾದ ಅತ್ತೆಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಘಾಟಿ ಸೊಸೆ
ಮಾಲಾಶ್ರೀ ಅಂಚನ್​
| Edited By: |

Updated on:Aug 25, 2024 | 4:19 PM

Share

ಒಂದು ಕುಟುಂಬ ಅಂದ್ ಮೇಲೆ ಅಲ್ಲಿ ಸಣ್ಣ-ಪುಟ್ಟ ಜಗಳ, ಮನಸ್ತಾಪಗಳು ಕಾಮನ್. ಇನ್ನೂ ಅತ್ತೆ-ಸೊಸೆ ಒಂದೇ ಮನೆಯಲ್ಲಿ ವಾಸವಾಗಿದ್ದರೆ ಜಗಳವಾಡದೇ ಇರುವುದುಂಟೆ. ಎಷ್ಟೇ ಆಪ್ತವಾಗಿದ್ದರೂ ಕೂಡಾ ಕೆಲವೊಮ್ಮೆ ಅತ್ತೆ ಮತ್ತು ಸೊಸೆ ಮಧ್ಯೆ ಜಗಳಗಳು ಏರ್ಪಡುತ್ತವೆ. ಆದ್ರೆ ಈ ಜಗಳಗಳು ಯಾವುದೇ ಕಾರಣಕ್ಕೂ ಕೈ ಮಿಲಾಯಿಸೋ ಹಂತಕ್ಕೆ ಹೋಗುವುದಿಲ್ಲ. ಆದ್ರೆ ಇಲ್ಲೊಬ್ಳು ಸೊಸೆ ಎಲ್ಲಾ ಎಲ್ಲೆಗಳನ್ನೂ ಮೀರಿ ಹಿರಿಯರು ಎಂಬುದನ್ನೂ ನೋಡದೆ ತನ್ನ ಅತ್ತೆಯ ಮೇಲೆಯೇ ಅಮಾನುಷವಾಗಿ ಹಲ್ಲೆ ನಡೆಸಿದ್ದಾಳೆ. ಈಕೆಯ ಕ್ರೌರ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಗುತ್ತಿದೆ.

ಉತ್ತರ ಪ್ರದೇಶದ ರಾಯ್ ಬರೇಲಿಯ ಲಾಲ್ ಗಂಜ್ ಕೊತ್ವಾಲಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಘಾಟಿ ಸೊಸೆಯೊಬ್ಬಳು ವಯಸ್ಸಾದ ಅತ್ತೆಯ ಮೇಲೆ ಹಲ್ಲೆ ನಡೆಸಿ ಅಮಾನವೀಯ ಕೃತ್ಯ ಮೆರೆದಿದ್ದಾಳೆ. ಈಕೆಯ ಮೃಗೀಯ ವರ್ತನೆಯ ವಿಡಿಯೋವನ್ನು ಯಾರೋ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ವೃದ್ಧೆಗೆ ಚಿತ್ರಹಿಂಸೆ ನೀಡಿದ ಸೊಸೆಯ ವಿರುದ್ಧ ಸೂಕ್ತ ಕ್ರಮ ಜರುಗಿಸುವುದಾಗಿ ಲಾಲ್‌ಗಂಜ್‌ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ ಭರವಸೆ ನೀಡಿದ್ದಾರೆ.

ಈ ಕುರಿತ ಪೋಸ್ಟ್ ಒಂದನ್ನು ಪ್ರಿಯಾಶ್ ಭಾರ್ಗವ(Bhargava Priyash) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಹಿರಿಯ ನಾಗರಿಕರ ಮೇಲಿನ ಹಲ್ಲೆಗಳು ಭಾರತದಲ್ಲಿ ತುಂಬಾ ಸಾಮಾನ್ಯವಾಗಿ ಬಿಟ್ಟಿದೆ. ಇಂತಹವರ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳದ ಪರಿಣಾಮವಾಗಿ ಇಂತಹ ಘಟನೆ ನಡೆಯುತ್ತಿವೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್ ವಿಡಿಯೋದಲ್ಲಿ ಘಾಟಿ ಸೊಸೆಯೊಬ್ಬಳು ವಯಸ್ಸಾದ ಅತ್ತೆಯ ಮೇಲೆ ಹೀನಾಯವಾಗಿ ಹಲ್ಲೆ ನಡೆಸುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಹೆಂಡತಿ ತವರಿಗೆ ಹೋಗುತ್ತಿದ್ದಂತೆ, ಬೇರೆ ಯುವತಿಯೊಂದಿಗೆ ಬೆಡ್ ರೂಂನಲ್ಲಿ ಸಿಕ್ಕಿಬಿದ್ದ ಶಿಕ್ಷಕ

ಆಗಸ್ಟ್ 24 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಇದು ನಿಜಕ್ಕೂ ಆಘಾತಕಾರಿಯಾಗಿದೆ. ಆ ಮಹಿಳೆಗೆ ಶಿಕ್ಷೆಯಾಗಬೇಕು’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಎಷ್ಟು ಕ್ರೂರಿ ಇರಬೇಕು ಈಕೆ’ ಎಂದು ಹೇಳಿದ್ದಾರೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:57 pm, Sun, 25 August 24