AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ನಮ್ಮ ಮಗ ಶಿಕ್ಷಕಿಯ ಸ್ತನದ ಬಗ್ಗೆಯೇ ಮಾತಾಡ್ತಿರ್ತಾನೆ; ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದ ಪೋಷಕರು

ನಮ್ಮ ಮಗ ಮನೆಯಲ್ಲಿ ಶಿಕ್ಷಕಿಯ ದೊಡ್ಡ ಗಾತ್ರದ ಸ್ತನದ ಬಗ್ಗೆಯೇ ಮಾತನಾಡುತ್ತಿರುತ್ತಾನೆ ಮತ್ತು ಎದೆ ಭಾಗವನ್ನು ತೋರಿಸುವ ಸಲುವಾಗಿ ಆಕೆ ಡ್ರೆಸ್ ಕೋಡ್ ಅನ್ನು ಕೂಡಾ ಅನುಸರಿಸುತ್ತಿಲ್ಲ ಎಂದು ಹೇಳುತ್ತಿರುತ್ತಾನೆ, ಈ ಕಾರಣದಿಂದ ನಮ್ಮ ಮಗ ವಿಚಲಿತನಾಗಿದ್ದಾನೆ ಎಂದು ಪೋಷಕರು ಶಿಕ್ಷಕಿಯ ವಿರುದ್ಧ ಶಾಲಾ ಆಡಳಿತ ಮಂಡಳಿಗೆ ದೂರನ್ನು ನೀಡಿದ್ದಾರೆ. ಈ ವಿಚಿತ್ರ ಘಟನೆಯ ಸ್ಟೋರಿಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

Viral News: ನಮ್ಮ ಮಗ ಶಿಕ್ಷಕಿಯ ಸ್ತನದ ಬಗ್ಗೆಯೇ ಮಾತಾಡ್ತಿರ್ತಾನೆ; ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದ ಪೋಷಕರು
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ|

Updated on:Aug 25, 2024 | 2:29 PM

Share

ನನ್ನ ಮಗ ಅಥವಾ ಮಗಳು ಸರಿಯಾಗಿ ಓದಲ್ಲ, ಹೋಮ್ ವರ್ಕ್ ಮಾಡಲ್ಲ, ಹೇಳಿದ ಮಾತು ಕೇಳಲ್ಲ ಅಂತಾ ಪೋಷಕರು ಮಕ್ಕಳ ಬಗ್ಗೆ ಶಾಲೆಗೆ ಬಂದು ಕಂಪ್ಲೇಂಟ್ ಮಾಡ್ತಾರೆ. ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಶಿಕ್ಷಕಿಯ ಬಗ್ಗೆಯೇ ಪೋಷಕರು ಶಾಲಾ ಆಡಳಿತ ಮಂಡಳಿಗೆ ದೂರನ್ನು ನೀಡಿದ್ದಾರೆ. ಹೌದು ನಮ್ಮ ಮಗ ಮನೆಯಲ್ಲಿ ಶಿಕ್ಷಕಿಯ ದೊಡ್ಡ ಗಾತ್ರದ ಸ್ತನದ ಬಗ್ಗೆಯೇ ಮಾತನಾಡುತ್ತಿರುತ್ತಾನೆ ಮತ್ತು ಎದೆ ಭಾಗವನ್ನು ತೋರಿಸುವ ಸಲುವಾಗಿ ಆಕೆ ಡ್ರೆಸ್ ಕೋಡ್ ಅನ್ನು ಕೂಡಾ ಅನುಸರಿಸುತ್ತಿಲ್ಲ ಎಂದು ಹೇಳುತ್ತಿರುತ್ತಾನೆ, ಈ ಕಾರಣದಿಂದ ನಮ್ಮ ಮಗ ವಿಚಲಿತನಾಗಿದ್ದಾನೆ ಎಂದು ಪೋಷಕರು ಶಿಕ್ಷಕಿಯ ವಿರುದ್ಧ ದೂರನ್ನು ನೀಡಿದ್ದಾರೆ. ಈ ಸ್ಟೋರಿಯನ್ನು ಸ್ವತಃ ಆ ಶಿಕ್ಷಕಿ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ರೆಡ್ಡಿಡ್ ನಲ್ಲಿ ಹಂಚಿಕೊಂಡಿದ್ದಾರೆ.

ಮಹಿಳಾ ಶಿಕ್ಷಕಿ ಸೋಷಿಯಲ್ ಮೀಡಿಯಾದಲ್ಲಿ ಏನ್ ಹೇಳಿದ್ರು?

‘ನಾನು ಪ್ರೌಢ ಶಾಲಾ ಶಿಕ್ಷಕಿಯಾಗಿದ್ದು, 8ನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದೇನೆ. ನನ್ನ ಸ್ತನಗಳು ತುಂಬಾ ದೊಡ್ಡದಾಗಿದೆ ಆದ್ದರಿಂದ ಅವುಗಳನ್ನು ಮರೆಮಾಡಲು ಕಷ್ಟವಾಗುತ್ತದೆ. ಆದ್ರೆ ನಾನು ಯಾವಾಗಲೂ ಡ್ರೆಸ್ ಕೋಡ್ ಅನ್ನು ಅನುಸರಿಸುತ್ತೇನೆ. ಕಳೆದ 6 ವರ್ಷಗಳಿಂದ ನಾನು ಎಂದಿಗೂ ಡ್ರೆಸ್ ಕೋಡ್ ರೂಲ್ಸ್ ಬ್ರೇಕ್ ಮಾಡಿಲ್ಲ. ಎಲ್ಲರೂ ನನ್ನ ಡ್ರೆಸ್ ಸ್ಟೈಲ್ ಬಗ್ಗೆ ಯಾವಾಗಲೂ ಹೊಗಳುತ್ತಾರೆ’ ಎಂದು ಹೇಳಿದರು.

Parent complained to admin about my boobs byu/xtinalaperra inTeachers

ಇದನ್ನೂ ಓದಿ: ಹೆಂಡತಿ ತವರಿಗೆ ಹೋಗುತ್ತಿದ್ದಂತೆ, ಬೇರೆ ಯುವತಿಯೊಂದಿಗೆ ಬೆಡ್ ರೂಂನಲ್ಲಿ ಸಿಕ್ಕಿಬಿದ್ದ ಶಿಕ್ಷಕ

ಆದ್ರೆ ಒಬ್ಬ ವಿದ್ಯಾರ್ಥಿಯ ಪೋಷಕರು ಶಾಲೆಗೆ ಬಂದು ತಮ್ಮ ಮಗ ಮನೆಯಲ್ಲಿ ನನ್ನ ದೊಡ್ಡ ಗಾತ್ರದ ಸ್ತನದ ಬಗ್ಗೆಯೇ ಮಾತನಾಡುತ್ತಿರುತ್ತಾನೆ ಮತ್ತು ಎದೆ ಭಾಗವನ್ನು ತೋರಿಸುವ ಸಲುವಾಗಿ ನಾನು ಡ್ರೆಸ್ ಕೋಡ್ ಅನ್ನು ಅನುಸರಿಸುತ್ತಿಲ್ಲ ಎಂದು ದೂರು ನೀಡಿದ್ದಾರೆ. ಆದ್ರೆ ನಮ್ಮ ಶಾಲೆಯ ಅಡ್ಮಿನ್ ನಾನು ಯಾವಾಗಲೂ ಡ್ರೆಸ್ ಕೋಡ್ ಅನ್ನು ಅನುಸರಿಸುತ್ತೇನೆ ಎಂದು ಪೋಷಕರಿಗೆ ನೇರವಾಗಿ ಹೇಳಿದರು. ಶಾಲಾ ಆಡಳಿತ ಮಂಡಳಿ ನನಗೆ ಬೆಂಬಲ ನೀಡಿದ್ದು ತುಂಬಾನೇ ಖುಷಿ ಆಯ್ತು. ನಿಮಗೂ ಯಾರಿಗಾದರೂ ಈ ರೀತಿಯ ಅನುಭವ ಆಗಿದೆಯೇ?’ ಎಂದು ಸುದೀರ್ಘ ಬರಹವನ್ನು ರೆಡ್ಡಿಡ್ ನಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಗೆ ಹಲವಾರು ಕಾಮೆಂಟ್ ಗಳು ಹರಿದು ಬಂದಿದ್ದು ಒಬ್ಬ ಬಳಕೆದಾರರು ‘ಪೋಷಕರು ಶಾಲಾ ಆಡಳಿತ ಮಂಡಳಿಗೆ ದೂರು ನೀಡುವ ಬದಲು ಮಗನಿಗೆ ತಿದ್ದಿ ಬುದ್ಧಿ ಹೇಳಬೇಕಿತ್ತು’ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಪೋಷಕರು ಮೊದಲು ತಮ್ಮ ಮಕ್ಕಳಿಗೆ ಇತರನ್ನು ಕೆಟ್ಟ ದೃಷ್ಟಿಯಲ್ಲಿ ನೋಡದಿರುವಂತೆ ಸಂಸ್ಕಾರ ಕಲಿಸಬೇಕು, ಅದು ಬಿಟ್ಟು ಶಿಕ್ಷಕರ ಬಗ್ಗೆ ದೂರು ನೀಡುವುದಲ್ಲ’ ಎಂದು ಹೇಳಿದ್ದಾರೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:18 pm, Sun, 25 August 24

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ