AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಹೆಂಡತಿ ತವರಿಗೆ ಹೋಗುತ್ತಿದ್ದಂತೆ, ಬೇರೆ ಯುವತಿಯೊಂದಿಗೆ ಬೆಡ್ ರೂಂನಲ್ಲಿ ಸಿಕ್ಕಿಬಿದ್ದ ಶಿಕ್ಷಕ

ಸ್ಥಳೀಯರ ಪ್ರಕಾರ, ಬೇಗಂಪುರ ಮಾಧ್ಯಮಿಕ ಶಾಲೆಯ ಶಿಕ್ಷಕ ರಾಜೇಶ್ ಕುಮಾರ್ ಗ್ರಾಮದ ಬುಡಕಟ್ಟು ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಎರಡು ದಿನಗಳ ಹಿಂದೆ ಶಿಕ್ಷಕನ ಹೆಂಡತಿ ಹಬ್ಬಕ್ಕೆಂದು ತವರು ಮನೆಗೆ ಹೋಗಿದ್ದಾಳೆ. ಹೆಂಡತಿ ತವರು ಮನೆಗೆ ಹೋದ ಬೆನ್ನಲ್ಲೇ ತನ್ನ ಪರಿಚಯದ ಹೆಣ್ಣನ್ನು ಮನೆಗೆ ಕರೆಸಿಕೊಂಡಿದ್ದಾನೆ.

Viral News: ಹೆಂಡತಿ ತವರಿಗೆ ಹೋಗುತ್ತಿದ್ದಂತೆ, ಬೇರೆ ಯುವತಿಯೊಂದಿಗೆ ಬೆಡ್ ರೂಂನಲ್ಲಿ ಸಿಕ್ಕಿಬಿದ್ದ ಶಿಕ್ಷಕ
ಸಾಂದರ್ಭಿಕ ಚಿತ್ರ
ಅಕ್ಷತಾ ವರ್ಕಾಡಿ
|

Updated on: Aug 24, 2024 | 2:23 PM

Share

ಬಿಹಾರ: ಹಬ್ಬಕ್ಕೆ ಪತ್ನಿ ತವರು ಮನೆಗೆ ಹೋಗುತ್ತಿದ್ದಂತೆ ಶಿಕ್ಷಕನೊರ್ವ ಬೇರೊಬ್ಬಳು ಯುವತಿಯನ್ನು ಮನೆಗೆ ಕರೆಸಿ ಸರಸ ಸಲ್ಲಾಪದಲ್ಲಿ ತೊಡಗಿಸಿಕೊಂಡಿರುವಾಗ ಸಿಕ್ಕಿಬಿದ್ದಿರುವ ಘಟನೆ ಬಿಹಾರದ ಪುರ್ನಿಯಾದಲ್ಲಿ ನಡೆದಿದೆ. ಸಿಕ್ಕಿಬಿದ್ದ ಶಿಕ್ಷಕನನ್ನು ಸ್ಥಳೀಯರು ಮನೆಯಿಂದ ಎಳೆದು ಕರೆ ತಂದು ಮರಕ್ಕೆ ಕಟ್ಟಿ ಹಕ್ಕಿದ್ದಾರೆ. ಬಳಿಕ ಆ ಯುವತಿಯೊಂದಿಗೆ ಗ್ರಾಮಸ್ಥರು ಮದುವೆ ಮಾಡಿಸಿದ್ದಾರೆ.

ಸ್ಥಳೀಯರ ಪ್ರಕಾರ, ಝುನ್ನಿ ಈಸ್ತಂಬರ್ ಪಂಚಾಯತ್‌ನ ಬೇಗಂಪುರ ಮಾಧ್ಯಮಿಕ ಶಾಲೆಯ ಶಿಕ್ಷಕ ಶೇಖರ್ ಪಾಸ್ವಾನ್ ಅಲಿಯಾಸ್ ರಾಜೇಶ್ ಕುಮಾರ್ ಗ್ರಾಮದ ಬುಡಕಟ್ಟು ಹುಡುಗಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಎರಡು ದಿನಗಳ ಹಿಂದೆ ಶಿಕ್ಷಕನ ರಾಜೇಶ್ ಕುಮಾರ್ ಹೆಂಡತಿ ಹಬ್ಬಕ್ಕೆಂದು ತವರು ಮನೆಗೆ ಹೋಗಿದ್ದಾಳೆ. ಕುಡಿತದ ಚಟ ಹೊಂದಿದ್ದ ಶಿಕ್ಷಕ ರಾಜೇಶ್ ಹೆಂಡತಿ ತವರು ಮನೆಗೆ ಹೋದ ಬೆನ್ನಲ್ಲೇ ತನ್ನ ಪರಿಚಯದ ಹೆಣ್ಣನ್ನು ಮನೆಗೆ ಕರೆಸಿಕೊಂಡಿದ್ದಾನೆ. ಇದೀಗ ಸಿಕ್ಕಿ ಬಿದ್ದ ಬೆನ್ನಲ್ಲೇ ಗ್ರಾಮಸ್ಥರು ಶಿಕ್ಷಕನಿಗೆ ಈ ಯುವತಿಯೊಂದಿಗೆ ಮದುವೆ ಮಾಡಿಸಿದ್ದಾರೆ.

ಇದನ್ನೂ ಓದಿ: ವಿದ್ಯುತ್ ತಂತಿ ತಗುಲಿ ಬಾಲಕ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ವಿಷಯ ತಿಳಿಯುತ್ತಿದ್ದಂತೆ ಮೊದಲ ಹೆಂಡತಿ ತವರು ಮನೆಯಿಂದ ಹಿಂದಿರುಗಿ ಬಂದಿದ್ದು, ಆಘಾತಕೊಳಗಾಗಿದ್ದಾಳೆ. ಸದ್ಯ ಈ ಘಟನೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ತನ್ನ ಪತಿಯಿಂದಾದ ಅನ್ಯಾಯಕ್ಕೆ ಮೊದಲ ಪತ್ನಿ ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾಳೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ