Video : ಈ ನಾಗರಹಾವಿನ ಬಣ್ಣವೇ ಕೆಂಪು, ಇದು ಎಷ್ಟು ಅಪಾಯ ಗೊತ್ತಾ?
ಈ ಭೂಮಿಯ ನೂರಾರು ಜಾತಿಯ ವಿಷಕಾರಿ ಹಾಗೂ ವಿಷರಹಿತ ಹಾವುಗಳಿದ್ದು, ಒಂದ್ಕಕಿಂತ ಒಂದು ವಿಭಿನ್ನವಾಗಿರುತ್ತದೆ. ಕೆಲವು ಹಾವುಗಳು ತನ್ನ ಮೈ ಬಣ್ಣದಿಂದಲೇ ಗಮನ ಸೆಳೆಯುತ್ತದೆ. ಸಾಮಾನ್ಯವಾಗಿಬಿಳಿ ಬಣ್ಣದ ನಾಗರಹಾವನ್ನು ಎಲ್ಲರೂ ನೋಡಿರುತ್ತಾರೆ. ಆದರೆ ಇದೀಗ ಕೆಂಪು ಬಣ್ಣದ ನಾಗರಹಾವನ್ನು ರಕ್ಷಿಸಿದ ವಿಡಿಯೋವೊಂದು ವೈರಲ್ ಆಗಿದೆ. ಈ ನಾಗರಹಾವಿನ ಈ ಬಣ್ಣ ನೋಡಿದ ನೆಟ್ಟಿಗರು ಶಾಕ್ ಆಗಿದ್ದು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ.
ಹಾವುಗಳ ಹೆಸರು ಕೇಳಿದರೇ ಗಡ ಗಡ ನಡುಕ ಶುರುವಾಗುತ್ತದೆ. ಈ ಭಯಾನಕ ಹಾವುಗಳು ಎದುರಿಗೆ ಬಂದರೆ ಕೇಳುವುದೇ ಬೇಡ, ಒಂದು ಮೈಲಿ ದೂರ ಓಡುವವರೇ ಹೆಚ್ಚು. ಆದರೆ ಕೆಲವೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಹಾವುಗಳನ್ನು ಸಲೀಸಾಗಿ ಹಿಡಿದು ಮುದ್ದಿಸುವ, ಮೈ ಮೇಲೆ ಹಾವುಗಳು ತೆವಳುವ ವಿಡಿಯೋಗಳು ಕಾಣಸಿಗುತ್ತವೆ. ಈ ನಾಗರಹಾವುಗಳ ಕುರಿತು ಹಲವು ರೀತಿಯ ಅಚ್ಚರಿಗಳ ನೋಡಿದ್ದೇವೆ.
ಅದರಲ್ಲಿಯು ಕೆಲವೊಂದು ವಿಚಿತ್ರ ರೀತಿಯ ಹಾವುಗಳನ್ನು ನೋಡಿದ್ದೇವೆ. ನೀವು ಬಿಳಿ ಬಣ್ಣದ ನಾಗರಹಾವುಗಳನ್ನು ನೋಡಿದ್ದಿರಬಹುದು. ಆದರೆ ಕೆಂಪು ಬಣ್ಣದ ನಾಗರಹಾವನ್ನು ನೋಡಿರಲು ಸಾಧ್ಯವೇ ಇಲ್ಲ. ಹೌದು, ಇತ್ತೀಚೆಗಷ್ಟೇ ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ವಿಶಿಷ್ಟವಾದ ಹಾವನ್ನು ರಕ್ಷಿಸುತ್ತಿರುವುದನ್ನು ನೋಡಬಹುದಾಗಿದೆ. ‘ಕೆಂಪು ನಾಗರ ಹಾವು’ ಈ ವೈರಲ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು, ಇದನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.
ಇದನ್ನೂ ಓದಿ: ಇದು ಎಣ್ಣೆ ಎಫೆಕ್ಟ್ ಸ್ವಾಮಿ, ಕುಡಿದ ನಶೆಯಲ್ಲಿ ತರಗತಿಯಲ್ಲೇ ನಿದ್ದೆಗೆ ಜಾರಿದ ಶಿಕ್ಷಕ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಸ್ನೇಕ್ ಫ್ರೆಂಡ್’ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ “ಸ್ನೇಕ್ ರೆಸ್ಕ್ಯೂ ಅಂಡ್ ರಿಲೀಸ್” ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಇಪ್ಪತ್ತು ಸಾವಿರಕ್ಕೂ ಆಧಿಕ ವೀಕ್ಷಣೆ ಕಂಡಿದ್ದು, ನೆಟ್ಟಿಗರು, ಇದು ನಿಜವೇ ಅಥವಾ ಕೃತಕ ಬಣ್ಣವೇ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಈ ವಿಡಿಯೋಗೆ ನೆಟ್ಟಿಗರೊಬ್ಬರು, ‘ಈ ಹಾವು ವಿಷವನ್ನು ಉಗುಳುತ್ತದೆ’ ಎಂದು ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ. ಮತ್ತೊಬ್ಬರು ‘ಇದು ನಿಜವಾದ ಬಣ್ಣವಲ್ಲ’ಎಂದು ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬರು, ‘ತುಂಬಾ ಚೆನ್ನಾಗಿ ಬಣ್ಣ ಹಚ್ಚಿದ್ದೀರಿ’ ಎಂದಿದ್ದಾರೆ.