ತುಮಕೂರಿನಲ್ಲಿ ಕಳೆದುಹೋಗಿರುವ ಸಾಕುಗಿಣಿಯನ್ನು ಹುಡುಕಿಕೊಟ್ಟವರಿಗೆ ರೂ. 50,000 ಬಹಮಾನವಂತೆ!

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Jul 19, 2022 | 12:26 PM

ಬೂದು (ash) ಮೈಬಣ್ಣ ಮತ್ತು ಬಾಲದ ಭಾಗ ಕೆಂಪಿರುವ ಗಿಣಿಯನ್ನು ಹುಡುಕಿಕೊಟ್ಟವರಿಗೆ 50,000 ರೂ. ಬಹುಮಾನ ನೀಡುವುದಾಗಿಯೂ ಅವರು ಹೇಳಿದ್ದಾರೆ.

ತುಮಕೂರಿನ ಜಯನಗರದಲ್ಲಿ (Jayanagara) ವಾಸವಾಗಿರುವ ಈ ಕುಂಟುಂಬ ತನ್ನ ಸಾಕು ಗಿಣಿಯನ್ನು ಕಳೆದುಕೊಂಡು ಕಂಗಾಲಾಗಿದೆ. ಎರಡು ವರ್ಷದ ಗಿಣಿಗೆ ಅವರು ರುಸ್ತುಮಾ ಅಂತ ಹೆಸರಿಟ್ಟಿದ್ದಾರೆ. ಮನೆಯಿಂದ ಅದು ಹೇಗೆ ಕಾಣೆಯಾಯಿತು ಅಂತ ನಮಗೆ ಗೊತ್ತಿಲ್ಲ. ಆದರೆ ಗಿಣಿ ನಾಪತ್ತೆಯಾದ ನಂತರ ಕುಟುಂಬದ ಸದಸ್ಯರು ಸಾಮಾಜಿಕ ಜಾಲತಾಣಗಳ (social media) ಮೂಲಕ ಅದನ್ನು ಹುಡುಕಿಕೊಡಿ ಅಂತ ಮನವಿ ಮಾಡುತ್ತಿದ್ದಾರೆ. ಬೂದು (ash) ಮೈಬಣ್ಣ ಮತ್ತು ಬಾಲದ ಭಾಗ ಕೆಂಪಿರುವ ಗಿಣಿಯನ್ನು ಹುಡುಕಿಕೊಟ್ಟವರಿಗೆ 50,000 ರೂ. ಬಹುಮಾನ ನೀಡುವುದಾಗಿಯೂ ಅವರು ಹೇಳಿದ್ದಾರೆ.

Loading...
Unable to load recommendations.
Follow Us
TV9 Web

TV9 Kannada

Read More