ಕೆಲ ರಾಜಕಾರಣಿಗಳು ಬಲಿಯಜ್ಞ ಮೊದ್ಲಿಂದ ಮಾಡಿಕೊಂಡು ಬಂದಿದ್ದಾರೆ; ತಂತ್ರ, ಮಂತ್ರ, ಕುತಂತ್ರ ಅವರಿಗೆ ಹೊಸದಲ್ಲ: ಡಿಕೆ ಸುರೇಶ್
ವಿರೋಧ ಪಕ್ಷದ ನಾಯಕರು ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡುತ್ತಿರುವ ಬಗ್ಗೆ ಮಾತಾಡಿದ ಅವರು, ಅವರ ರಾಜಕಾರಣವೇ ಶಿವಕುಮಾರ್ ಸುತ್ತ ತಿರುಗುತ್ತಿರುತ್ತದೆ, ಶಿವಕುಮಾರ್ ಹೆಸರು ಹೇಳದೆ ಅವರ ಬೇಳೆ ಬೇಯಲ್ಲ, ಜನಕ್ಕೆ ಎಲ್ಲ ಗೊತ್ತಾಗುತ್ತಿದೆ, ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ಬೆಂಗಳೂರು: ನಿನ್ನೆ ದೆಹಲಿಯಿಂದ ವಾಪಸ್ಸು ಬಂದ ಮೇಲೆ ಸುದ್ದಿಗೋಷ್ಟಿ ನಡೆಸಿ ಮಾತಾಡಿದ್ದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ತಮ್ಮ ಹಾಗೂ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ಕೆಲ ನಾಯಕರು ಕೇರಳದ ರಾಜರಾಜೇಶ್ವರಿ ಶತ್ರು ಸಂಹಾರ ಪಂಚಬಲಿ ಯಜ್ಞ ನಡೆಸುತ್ತಿದ್ದಾರೆ ಎಂದಿದ್ದರು. ಇವತ್ತು ಅವರ ಸಹೋದರ ಮತ್ತು ಸಂಸದ ಡಿಕೆ ಸುರೇಶ್ (DK Suresh) ಮಾಧ್ಯಮ ಗೋಷ್ಠಿ ನಡೆಸಿ ಮಾತಾಡುವಾಗ, ಯಾರು ಯಾಗ ನಡೆಸುತ್ತಿರೋದು ಅಂತ ಕೇಳಲಾಯಿತು. ಅದಕ್ಕೆ ಸುರೇಶ್ ನೀಡಿದ ಉತ್ತರ ಒಗಟಿನಲ್ಲಿತ್ತು. ರಾಜ್ಯದ ಕೆಲ ರಾಜಕಾರಣಿಗಳು ಅಥವಾ ಒಂದು ಪಕ್ಷ (one political party) ಮೊದಲಿಂದಲೂ ಬಲಿ ಕೊಡೋದ್ರಲ್ಲಿ, ಬಲಿಯಜ್ಞ ಮಾಡಿಸುವುದರಲ್ಲಿ ಹೆಸರುವಾಸಿ. ತಂತ್ರ, ಮಂತ್ರ,ಕುತಂತ್ರ-ಅವರಿಗೆ ರೂಢಿಯಾಗಿದೆ, ಅವರ ಹೆಸರುಗಳನ್ನು ತಾನು ಹೇಳಲ್ಲ ಮೀಡಿಯದವರು ಅರ್ಥಮಾಡಿಕೊಳ್ಳಬೇಕು, ಡಿಕೆ ಶಿವಕುಮಾರ್ ಅವರಿಗೆ ಇಂಥ ವಿದ್ಯಮಾನ ಹೊಸದೇನೂ ಅಲ್ಲ, ಹಿಂದೆ ನಡೆದಿದ್ದರ ಮುಂದುವರಿದ ಭಾಗ ಇದು ಎಂದು ಸುರೇಶ್ ಹೇಳಿದರು. ವಿರೋಧ ಪಕ್ಷದ ನಾಯಕರು ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡುತ್ತಿರುವ ಬಗ್ಗೆ ಮಾತಾಡಿದ ಅವರು, ಅವರ ರಾಜಕಾರಣವೇ ಶಿವಕುಮಾರ್ ಸುತ್ತ ತಿರುಗುತ್ತಿರುತ್ತದೆ, ಶಿವಕುಮಾರ್ ಹೆಸರು ಹೇಳದೆ ಅವರ ಬೇಳೆ ಬೇಯಲ್ಲ, ಜನಕ್ಕೆ ಎಲ್ಲ ಗೊತ್ತಾಗುತ್ತಿದೆ, ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದೇವೇಗೌಡ ಕುಟುಂಬದ ಆಸ್ತಿ ಪೆನ್ಡ್ರೈವ್, ತೆನೆ ಹೊತ್ತ ಮಹಿಳೆ ಪೆನ್ಡ್ರೈವ್ ಹೊರಬೇಕಾಗುತ್ತದೆ: ಡಿಕೆ ಸುರೇಶ್ ತಿರುಗೇಟು